ಬದುಕಿನಲ್ಲಿ ಗುರಿ ಮುಟ್ಟಲು ಗುರುವಿನ ಮಾರ್ಗದರ್ಶನ ಇರಲಿ : ಪ್ರಣವಾನಂದಪುರಿ ಸ್ವಾಮೀಜಿ

ವಿಜಯ ದರ್ಪಣ ನ್ಯೂಸ್….

ಬದುಕಿನಲ್ಲಿ ಗುರಿ ಮುಟ್ಟಲು ಗುರುವಿನ ಮಾರ್ಗದರ್ಶನ ಇರಲಿ : ಪ್ರಣವಾನಂದಪುರಿ ಸ್ವಾಮೀಜಿ

ಶಿಡ್ಲಘಟ್ಟ : ಇರುವಷ್ಟು ಕಾಲ ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಬದುಕು ಸಾಗಲಿ ಯಾರ ಬದುಕು ಶಾಶ್ವತವಲ್ಲ,ನಮ್ಮೆಲ್ಲರ ಬದುಕಿನಲ್ಲಿ ಗುರಿ ಇರಲಿ ಗುರಿ ಮುಟ್ಟಲು ಗುರುವಿನ ಮಾರ್ಗದರ್ಶನ ಇರಲಿ ಎಂದು ಶಿವನಾಪುರ ವಹ್ನಿಕುಲ ಶಕ್ತಿ ಪೀಠದ ಆದಿಶಕ್ತಿ ಮಹಾ ಸಂಸ್ಥಾನದ ಪ್ರಣವಾನಂದಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಜಂಗಮಕೋಟೆ ಶ್ರೀಧರ್ಮರಾಯಸ್ವಾಮಿ ದ್ರೌಪತಮ್ಮದೇವಿಯ 73ನೇ ವರ್ಷದ ಹೂವಿನ ಕರಗ ಮಹೋತ್ಸವ ಅಂಗವಾಗಿ ನಡೆದ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಕೆಪಿಸಿಸಿ ಸಂಯೋಜಕರಾಸ ರಾಜೀವ್‌ಗೌಡ ಮಾತನಾಡಿ, ಎಲ್ಲಾ ಜಾತಿ,ಧರ್ಮದವರು ಕೂಡ ಸಾಮರಸ್ಯದಿಂದ ಕರಗ ಮಹೋತ್ಸವ ಆಚರಿಸುವುದು ಸಂತಸದ ಭಕ್ತಿ ಬಾವ ಸಂಕೇತ ಎಂದರು.

ಈ ವೇಳೆ ಹೂವಿನ ಕರಗ ಮಹೋತ್ಸವ ಅಂಗವಾಗಿ ಸ್ಥಳೀಯ ವಿದ್ಯಾರ್ಥಿಗಳಿಂದ ಭರತ ನಾಟ್ಯ, ಏಕಪಾತ್ರಾಭಿನಯ, ನಾಟಕ ಪ್ರದರ್ಶನ ನಡೆಯಿತು.
ಇದೇ ವೇಳೆ ಹೂವಿನ ಕರಗ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಕಲಾವಿದರಿಗೆ ಪ್ರಣವಾನಂದಪುರಿಸ್ವಾಮೀಜಿ ನೆನಪಿನ ಕಾಣಿಕೆ ವಿತರಿಸಿದರು.

ಈ ಸಂದರ್ಭದಲ್ಲಿ ಧರ್ಮರಾಯಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್‌ನ ಗೋಪಾಲಪ್ಪ,ಮುರಳಿ, ಜಯರಾಂ,ಪುನೀತ್, ಆಂಜಿನಪ್ಪ,ವೇಣು, ಚಂದ್ರು, ರೈತ ಮುಖಂಡ ಹೀರೆಬಲ್ಲ ಕೃಷ್ಣಪ್ಪ, ಜೆ.ಎನ್.ನಾಗರಾಜ್, ನಾಗನರಸಿಂಹ, ಹೊಸಪೇಟೆ ಮಂಜುನಾಥ್, ಜಾನಿ ಮುಂತಾದವರು ಹಾಜರಿದ್ದರು.