ದೊಡ್ಡ ಜಾತ್ರೆಯ ಪ್ರಯುಕ್ತ ತಾಂಡವಪುರದಲ್ಲಿ ಭಕ್ತಾದಿಗಳಿಗೆ ಮಜ್ಜಿಗೆ ಪಾನಕ ವಿತರಣೆ

ವಿಜಯ ದರ್ಪಣ ನ್ಯೂಸ್…..

ದೊಡ್ಡ ಜಾತ್ರೆಯ ಪ್ರಯುಕ್ತ ತಾಂಡವಪುರದಲ್ಲಿ ಭಕ್ತಾದಿಗಳಿಗೆ ಮಜ್ಜಿಗೆ ಪಾನಕ ವಿತರಣೆ

ತಾಂಡವಪುರ ಏಪ್ರಿಲ್ 9 : ನಂಜನಗೂಡಿನ ಶ್ರೀ ನಂಜುಂಡೇಶ್ವರ ಪಂಚ ರಥೋತ್ಸವ ಹಾಗೂ ದೊಡ್ಡ ಜಾತ್ರೆಯ ಪ್ರಯುಕ್ತ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮು ರವರ ಪುತ್ರ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ರವರ ನೇತೃತ್ವದಲ್ಲಿ ಭಕ್ತಾದಿಗಳಿಗೆ ಮಜ್ಜಿಗೆ ಪಾನಕ ವಿತರಿಸಿ ದೇವರ ಕೃಪೆಗೆ ಪಾತ್ರರಾದರು.

ಮೈಸೂರು ನಂಜನಗೂಡು ಊಟಿ ರಸ್ತೆ ತಾಂಡವಪುರದ ತಮ್ಮ ನಿವಾಸದ ಬಳಿ ಅಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ನಂಜನಗೂಡಿನ ದೊಡ್ಡ ಜಾತ್ರೆಯಲ್ಲಿ ಭಾಗವಹಿಸಿ ವಾಪಸು ತಮ್ಮ ಗ್ರಾಮಗಳಿಗೆ ಹೋಗುವ ಭಕ್ತರು ಹಾಗೂ ರಥೋತ್ಸವಕ್ಕೆ ಹೋಗುವ ಭಕ್ತಾದಿಗಳು ಬಿಸಿಲಿನ ತಾಪ ಸಹಿಸಲಾಗದೆ ಮಜ್ಜಿಗೆ ಪಾನಕವನ್ನು ಕುಡಿದು ತಂಪಾದರು ಅಲ್ಲದೆ ಸಾರಿಗೆಯಲ್ಲಿ ಪ್ರಯಾಣ ಮಾಡುವ ಭಕ್ತಾದಿಗಳು ಸಹ ಮುಖಂಡರು ಮಜ್ಜಿಗೆ ಪಾನಕವನ್ನು ವಿತರಿಸಿ ನಂಜುಂಡೇಶ್ವರನ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ ಮಹದೇವ್ ಗ್ರಾಮದ ಪಿಎಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ ಎಂ ನಾಗರಾಜು ದಣಿ ಎಂ ಹುಚ್ಚೇಗೌಡ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭುಸ್ವಾಮಿ ಎನ್ ಚಂದ್ರು ಪಿಎಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಬಿ ಬಿ ಕುಮಾರ್ ಪುಟ್ಟರಾಜು ರವಿ ನಾರಾಯಣ ವಿನಯ್ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು