ಯುವಕರು ಹೈನೋಧ್ಯಮದಲ್ಲಿ  ತೊಡಗಿಸಿಕೊಳ್ಳಬೇಕು: ಶಾಸಕ ಬಿ. ಎನ್. ರವಿಕುಮಾರ್

ವಿಜಯ ದರ್ಪಣ ನ್ಯೂಸ್….

ಯುವಕರು ಹೈನೋಧ್ಯಮದಲ್ಲಿ  ತೊಡಗಿಸಿಕೊಳ್ಳಬೇಕು: ಶಾಸಕ ಬಿ. ಎನ್. ರವಿಕುಮಾರ್

ಶಿಡ್ಲಘಟ್ಟ  ಚಿಕ್ಕಬಳ್ಳಾಪುರ ಜಿಲ್ಲೆ : ಯುವಕರು ಆಸಕ್ತಿ ವಹಿಸಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಹಾಲಿಗೆ ಉತ್ತಮ ಬೆಲೆ ಸಿಗಬೇಕು, ಹೈನುಗಾರರಿಗೆ ಉತ್ತೇಜನ ನೀಡುವ ಅವರ ಬೆಳವಣಿಗೆಗೆ ಪೂರಕವಾದ ನೆರವನ್ನು ಕಲ್ಪಿಸಿಕೊಡಬೇಕು ಎಂದು ಶಾಸಕ ಬಿ.ಎನ್.ರವಿಕುಮಾ‌ರ್ ತಿಳಿಸಿದರು.

ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣದಾಸರಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಶುದ್ಧ ನೀರಿನ ಘಟಕ ಉದ್ಘಾಟನೆ ಮತ್ತು ಸುಮಾರು 75 ಲಕ್ಷದ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಂಘದ ಕಾರ್ಯಕಾರಿ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಆ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಡೇರಿಗಳಲ್ಲಿ ರಾಜಕೀಯಕ್ಕೆ ಅವಕಾಶ ಕಲ್ಪಿಸದೆ ಪಕ್ಷಾತೀತವಾಗಿ ಕೆಲಸ ಮಾಡುವುದರ ಜತೆಗೆ ಡೈರಿ ದೇವಾಲಯ ಎಂದು ಬಾವಸಿದ್ದಲ್ಲಿ ಡೈರಿಗಳಲ್ಲಿ ಯಾವುದೇ ಅವ್ಯವಹಾರ ನಡೆಯುವುದಿಲ್ಲವೆಂದು ಹೇಳಿದರು.

ಸರ್ಕಾರದ ಯೋಜನೆಗಳನ್ನು ಈ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕು ಹಾಗು ಕ್ಷೇತ್ರವನ್ನು ಅಭಿವೃದ್ಧಿಗೊಳಿಸಬೇಕೆಂಬ ಸದುದ್ದೇಶದಿಂದ ಈ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
ರಾಜ್ಯ ಸರ್ಕಾರ ರಾಜ್ಯದ ಹಾಲು ಉತ್ಪಾದಕರಿಗಾಗಿ ಆರನೇ ಗ್ಯಾರಂಟಿಯಾಗಿ ಹಾಲಿನ ಪ್ರೋತ್ಸಾಹ ದನವನ್ನು 10 ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಹೇಳಿದರು.

ಕೆಎಂಎಫ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಮಾತನಾಡಿ, ರೈತರು ವ್ಯಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ ನಮ್ಮ ತಾಲ್ಲೂಕಿನಲ್ಲಿ ಹಾಲು ಉತ್ಪಾದನೆಯೊಂದಿಗೆ ಪರ್ಯಾಯವಾಗಿ ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ರೈತರು ನೆಮ್ಮದಿಯ ಜೀವನ ನಡೆಸಲು ತುಂಬಾ ಸಹಕಾರಿಯಾಗಿದೆ, ರೈತರು ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡು ಸಂಘವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಎಂದು‌ ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಸುಬ್ರಮಣಿ,ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ನಿರ್ದೇಶಕರಾದ ಮುರಳಿ,ನಾಗರಾಜ್, ಸುನಂದಮ್ಮ, ಎಂ.ಪಿ.ಸಿ.ಎಸ್.ಅದ್ಯಕ್ಷ ಟಿ.ಲಕ್ಷ್ಮಿನಾರಾಯಣ,
ಮುಖಂಡರಾದ ಹುಜುಗೂರು ರಾಮಣ್ಣ, ತಾದೂರು ರಘು, ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಎ.ಸಿ.ಶ್ರೀನಿವಾಸಗೌಡ,
ವ್ಯವಸ್ಥಾಪಕ ಜಿ.ಮಾಧವ, ಉಪವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್, ವಿಸ್ತರಣಾಧಿಕಾರಿ ಎನ್.
ಜಿ.ಜಯಚಂದ್ರ, ಕೃಷಿ ಮಂತ್ರಾಲಯ ಮಾಜಿ ಹಿರಿಯ ತಾಂತ್ರಿಕ ನಿರ್ದೇಶಕ ಎನ್.ಆರ್.ಸಮರ್ಥರಾಮ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾದಿಕಾರಿ ಸುರೇಶ್ ಗೌಡ, ಕಸಾಪ ಅದ್ಯಕ್ಷ ಪಟೇಲ್ ನಾರಾಯಣಸ್ವಾಮಿ,ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾದವಮ್ಮ,ಸದಸ್ಯರಾದ ದೇವರಾಜು, ಶಾರದಮ್ಮ ಲಕ್ಷ್ಮೀನಾರಾಯಣ, ಪಿಡಿಒ ತನ್ವೀರ್ ಅಹಮದ್‌ ಮುಂತಾದವರು ಹಾಜರಿದ್ದರು.