ನಿಮ್ಮ ಅಭಿಮಾನಕ್ಕೆ ಸದಾ ಚಿರಋಣಿ : ಡಾ. ಯತೀಂದ್ರ ಸಿದ್ದರಾಮಯ್ಯ

 ವಿಜಯ ದರ್ಪಣ ನ್ಯೂಸ್….

ನಿಮ್ಮ  ಅಭಿಮಾನಕ್ಕೆ ಸದಾ ಚಿರಋಣಿ : ಡಾ. ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ ಮಾರ್ಚ್ 19: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂದಗುಂದಾಪುರ ಗ್ರಾಮದಲ್ಲಿ ಗ್ರಾಮಸ್ಥರು ವಿಧಾನಪರಿಷತ್ ಸದಸ್ಯ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ  ಗೌರವಿಸಿದರು.

ಗ್ರಾಮದಲ್ಲಿ ದಿವಂಗತ ರಾಕೇಶ್ ಸಿದ್ರಾಮಯ್ಯನವರ ಹೆಸರಿನಲ್ಲಿ ಸುಮಾರು ಎರಡು ಎಕರೆ ಆರು ಗಂಟೆ ಜಮೀನನ್ನು ಖರೀದಿಸಿ ಗ್ರಾಮದ ನಿವೇಶನ ಇಲ್ಲದ ದಲಿತ ಕುಟುಂಬದವರಿಗೆ ನಿವೇಶನವನ್ನು ಹಂಚಿಕೆ ಮಾಡಲು ಈ ಭೂಮಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ವಂತ ಹಣದಿಂದ ಖರೀದಿಸಿ ನಮ್ಮ ಗ್ರಾಮದ ಬಡವರಿಗೆ ನೆರವಾಗಿದ್ದಾರೆ ಅಲ್ಲದೆ ಇಲ್ಲಿಗೆ ಬೇಕಾಗುವಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿರುವುದರಿಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಡಾ. ಯತೀಂದ್ರ ಸಿದ್ರಾಮಯ್ಯನವರನ್ನು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗ್ರಾಮಕ್ಕೆ ಬರಮಾಡಿಕೊಂಡರು.

ಅಲ್ಲದೆ  ಈ ಜಮೀನಿನಲ್ಲಿ ಗುಂಪು ಮನೆ ನಿರ್ಮಿಸಿ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದೇವೆ ಎಂದು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ರವರು  ತಿಳಿಸಿದರು.

ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಸಮಸ್ಯೆಗಳನ್ನು ಆಲಿಸಿ  ಮಾತನಾಡಿದ ವಿಧಾನಪರಿಷತ್ ಸದಸ್ಯ ಡಾ. ಯತಿಂದ್ರ ಸಿದ್ರಾಮಯ್ಯನವರು ಈ ಗ್ರಾಮದ ಬಡವರಿಗೆ ನಿವೇಶನವಿಲ್ಲದೆ ತುಂಬಾ ತೊಂದರೆ ಆಗಿದೆ ಎಂದು ಹಲವಾರು ಬಾರಿ ನಮ್ಮ ಗಮನಕ್ಕೆ ತಂದಿದ್ದರು ಅವರ ಮನವಿಗೆ ಸ್ಪಂದಿಸಿ ದಿವಂಗತ ರಾಕೇಶ್ ಸಿದ್ಧರಾಮಯ್ಯನವರ ನೆನಪಾಗಿ ಅವರಿಗೆ ಸುಮಾರು ಎರಡು ಎಕರೆ ಆರು ಗಂಟೆ ಜಮೀನಿನ ತಗೆದುಕೊಟ್ಟಿದ್ದು ಇದರಲ್ಲಿ ಈಗಾಗಲೇ ಕುಡಿಯುವ ನೀರು ರಸ್ತೆ ಚರಂಡಿ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದ್ದು ಸದ್ಯದಲ್ಲಿ ಅವರ ಬೇಡಿಕೆಗಳನ್ನು ಈಡೇರಿಸಲು ಅಂತವಾಗಿ ಕ್ರಮ ಕೈಗೊಳ್ಳುತ್ತೇವೆ . ಗ್ರಾಮದಲ್ಲಿ ನನ್ನನ್ನ  ಗೌರವಿಸಿ ಸನ್ಮಾನಿಸಿರುವುದಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಗ್ರಾಮ ಪಂಚಾಯತಿ ಅಧ್ಯಕ್ಷ ನಂದೀಶ್ ಉಪಾಧ್ಯಕ್ಷೆ ರೇಣುಕಾ ಮಹೇಶ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮರಡಿಹುಂಡಿ ಬುಲೆಟ್ ಮಹಾದೇವ ಗ್ರಾಮ ಪಂಚಾಯತಿಯ ಪುಟ್ಟಸ್ವಾಮಿ ಮಾದೇಶ ಜಗದೀಶ್ ಕಾಂಗ್ರೆಸ್ ಮುಖಂಡ ಮರಡಿಹುಂಡಿ ಕುಮಾರ್ ತಾಂಡವಪುರದ ಎನ್ ಚಂದ್ರು ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಜರಾಲ್ಡ್ ರಾಜೇಶ್ ಹಾಗೂ  ಗ್ರಾಮಸ್ಥರು ಮುಖಂಡರು ಹಾಜರಿದ್ದರು