ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು,…………..
ವಿಜಯ ದರ್ಪಣ ನ್ಯೂಸ್….
ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು,…………..
ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ,
ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ,
ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ,
ಆ ದೇಶದಲ್ಲಿ ಇರಬಹುದಾದ ವಿಶ್ವ ಶ್ರೇಷ್ಠ ಭವ್ಯ ಕಟ್ಟಡಗಳು,
ಆ ದೇಶ ವಿಶ್ವ ದರ್ಜೆಯ ಕ್ರೀಡಾಕೂಟದಲ್ಲಿ ಗಳಿಸುವ ಪದಕಗಳು,
ಅದು ಹೊಂದಿರಬಹುದಾದ ವಿಮಾನ ನಿಲ್ದಾಣಗಳ ಸಂಖ್ಯೆ,
ಆ ದೇಶದಲ್ಲಿ ಚಲಿಸುವ ಬುಲೆಟ್ ರೈಲುಗಳ ವೇಗ,
ಅಲ್ಲಿ ಇರಬಹುದಾದ 5 ಸ್ಟಾರ್, 7 ಸ್ಟಾರ್ ಹೋಟೆಲ್ ಗಳ ಸಂಖ್ಯೆ,
ಅಲ್ಲಿ ಓಡಾಡುವ ಕಾರುಗಳ ವೈಭವೋಪೇತ ಮೆರವಣಿಗೆ,
ಅಲ್ಲಿನ ರಾಜಕೀಯ ನೇತಾರರ ಶ್ರೀಮಂತ ಜೀವನ ಶ್ಯೆಲಿ,
ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್,
ಡಿಜಿಟಲ್ ಆಡಳಿತ
ಇತ್ಯಾದಿಗಳು,
ಇನ್ನೊಂದೆಡೆ,
ಒಂದು ದೇಶದ ಬಡತನವೆಂಬ ತಗಡು ಕಿರೀಟದ ಹರಳುಗಳು………..
ಊಟಕ್ಕೇ ಇಲ್ಲದೆ ಕೆಲವರು ಆಗಾಗ ಹಸಿವಿನಿಂದ ಸಾಯುವುದು,
ಪೌಷ್ಟಿಕಾಂಶದ ಕೊರತೆಯಿಂದ ಅನೇಕ ಮಕ್ಕಳು ನರಳುತ್ತಿರುವುದು,
ಇನ್ನೂ ನೀರು, ವಿದ್ಯುತ್, ರಸ್ತೆಗಳ ಸೌಕರ್ಯವಿಲ್ಲದ ಹಳ್ಳಿಗಳು,
ಆಗಾಗ ಪ್ರತಿಭಟನೆ, ಮುಷ್ಕರ, ಬಂದ್ ಗಳು,
ಇಲ್ಲಿನ ಕೋರ್ಟುಗಳಲ್ಲಿ ದಾಖಲಾಗಿರುವ ಕೇಸುಗಳು,
ತುಂಬಿ ತುಳುಕುವ ಆಸ್ಪತ್ರೆ, ಜೈಲುಗಳು,
ಬೀದಿ ಬದಿಯಲ್ಲಿಯೇ ಸಂಸಾರ ಸಾಗಿಸುವ ಕುಟುಂಬಗಳು,
ಇಲ್ಲಿರುವ ವೃದ್ದಾಶ್ರಮ ಅನಾಥಾಶ್ರಮಗಳ ಸಂಖ್ಯೆ,
ಹೆಣ ಸುಡಲೂ ಕೊಡಬೇಕಾದ ಲಂಚ,
ಇಲ್ಲಿ ದಾಖಲಾಗುವ ಅತ್ಯಾಚಾರ, ಕೊಲೆ, ಕಳ್ಳತನ, ವಂಚನೆಗಳ ಸಂಖ್ಯೆ,
ಓಟಿಗಾಗಿ ಜನಗಳು ಸಲ್ಲಿಸುವ ಹಣದ ಬೇಡಿಕೆ,
ಇಲ್ಲಿನ ರಸ್ತಗಳಿಂದಾಗುವ ಅಪಘಾತಗಳ ಸಾವು, ನೋವು,
ಇತ್ಯಾದಿಗಳು.
ಈಗ ಆಯ್ಕೆ ನಿಮ್ಮದೇ ……
ನಮ್ಮ ದೇಶ ಭಾರತ,
ವಜ್ರಖಚಿತ ಕಿರೀಟದ ಅಸಲಿ ರಾಷ್ಟ್ರವೇ ?
ಅಥವಾ
ತಗಡಿನ ಕಿರೀಟದ ನಕಲಿ ಹರಳುಗಳೇ ಇರುವ ರಾಷ್ಟ್ರವೇ ?
ಆತ್ಮವಂಚನೆ ಮಾಡಿಕೊಳ್ಳದೇ ಉತ್ತರಿಸಿಕೊಳ್ಳಿ………
ಎರಡೂ ಇದೆ ಎಂಬುವವರಿಗೆ ನಾವು ಈಗ ಹೆಚ್ಚಾಗಿ ಗಮನಹರಿಸಬೇಕಾದದ್ದು ಯಾವ ಕಡೆ ಎಂಬ ಪ್ರಶ್ನೆಯೂ ಬರುತ್ತದೆ.
ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಬಲಪಂಥೀಯ ಚಿಂತನೆಗಳು, ದೇಶ ತೀರಾ ಅಧೋಗತಿಗೆ ಇಳಿಯುತ್ತಿದೆ ಎಂಬ ಎಡಪಂಥೀಯ ಚಿಂತನೆಗಳು ವಾಸ್ತವಕ್ಕೆ ಹತ್ತಿರವಾಗಿರುವುದಿಲ್ಲ,
ಆದರೆ ನಮ್ಮ ದೇಶದ ಮೂಲಭೂತ ಸಮಸ್ಯೆಗಳಾದ ಅಪೌಷ್ಟಿಕತೆ, ಮೌಢ್ಯ, ಅಜ್ಞಾನ, ಹಿಂಸೆ, ತಾರತಮ್ಯ, ಭ್ರಷ್ಟಾಚಾರ, ಜಾತಿ ಪದ್ಧತಿ, ಹೆಣ್ಣಿನ ಮೇಲಿನ ದೌರ್ಜನ್ಯ ಇವುಗಳನ್ನು ಪರಿಗಣಗೆ ತೆಗೆದುಕೊಂಡರೆ ಖಂಡಿತವಾಗಲು ಭಾರತ ಸಾಕಷ್ಟು ಹಿಂದುಳಿದಿದೆ,
ತಾಂತ್ರಿಕವಾಗಿ ಮುಂದುವರೆಯುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ,
ಆದರೆ ಮಾನವೀಯ ಮೌಲ್ಯಗಳ ವಿಷಯದಲ್ಲಿ ತೀರಾ ಕೆಳಹಂತಕ್ಕೆ ಜಾರುತ್ತಿರುವುದರಿಂದ ದೇಶದ ಅಭಿವೃದ್ಧಿಯ ಪರಿಕಲ್ಪನೆಯನ್ನು ಮತ್ತೊಮ್ಮೆ ಪುನರ್ ವಿಮರ್ಶಗೊಳಪಡಿಸಬೇಕಿದೆ…
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……….