ತಾಂಡವಪುರದಲ್ಲಿ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಆಚರಣೆ
ವಿಜಯ ದರ್ಪಣ ನ್ಯೂಸ್…..
ತಾಂಡವಪುರ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಆಚರಣೆ
ನಂಜನಗೂಡು ಮಾರ್ಚ್ 17 : ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ಪುಟ್ಟರಾಜು ಆಟೋ ಚಾಲಕರ ಸಂಘದ ಮಾದು ರವಿ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಸಿಹಿ ಹಂಚಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ 50ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು
ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಚಲನಚಿತ್ರ ಗೀತೆಗಳನ್ನು ಕೇಳಿಸುವ ಮೂಲಕ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬಕ್ಕೆ ಮೆರವಣಿಗೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಶಿವರಾಜ್ ಪುಟ್ಟರಾಜು ಟಿ ಎಂ ರವಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಾದು ಸತ್ಯ ಜವಾನೇಗೌಡ ಮಾಲೆಗೌಡ ಹಾಗೂ ಆಟೋ ಚಾಲಕ ಸಂಘದ ಸದಸ್ಯರು ಅಪ್ಪು ಅಭಿಮಾನಿಗಳು ಹಾಜರಿದ್ದರು