ನ್ಯಾಕ್ ನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ “ಬಿ”ಗ್ರೇಡ್
ವಿಜಯ ದರ್ಪಣ ನ್ಯೂಸ್….
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ “ಬಿ”ಗ್ರೇಡ್
ದೊಡ್ಡಳ್ಳಾಪುರ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ನಿಂದ ಮತ್ತೆ “ಬಿ” ಗ್ರೇಡ್ ಪಡೆದು ಯಥಾವತ್ತಾಗಿ ತನ್ನ ಗುಣಮಟ್ಟ ಉಳಿಸಿಕೊಂಡಿದೆ ಎಂದು ಪ್ರಾಚಾರ್ಯರಾದ ಡಾ. ಸದಾಶಿವ ರಾಮಚಂದ್ರ ಗೌಡ ತಿಳಿಸಿದ್ದಾರೆ.
ಇದೆ ಫೆಬ್ರವರಿ 19 ಮತ್ತು 20 ರಂದು ನ್ಯಾಕ್ ವತಿಯಿಂದ ಮೂರು ಸದಸ್ಯರನ್ನೊಳಗೊಂಡ ನಿಯೋಗವೊಂದು ಕಾಲೇಜಿಗೆ ಭೇಟಿ ನೀಡಿ, ಇಲ್ಲಿನ ಎಲ್ಲಾ ವಿಭಾಗಗಳನ್ನೂ, ಪಾಲಕರನ್ನು, ಹಿರಿಯ ವಿದ್ಯಾರ್ಥಿ ಬಳಗದವರೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ ಮೌಲ್ಯಮಾಪನಕ್ಕೊಳಪಡಿಸಿತ್ತು.
ಇಂದು ಅದರ ಫಲತಾಂಶ ಪ್ರಕಟವಾಗಿದ್ದು ಕಾಲೇಜಿಗೆ ‘ ಬಿ’ ಗ್ರೇಡ್ ಲಭಿಸಿದೆ. ಕಳೆದ ಮೂರು ಅವಧಿಗಳಿಂದಲೂ ಬಿ ಗ್ರೇಡ್ ಪಡೆದಿದ್ದು, ಈ ನಾಲ್ಕನೆ ಬಾರಿಯೂ ಬಿ ಗ್ರೇಡ್ ಪಡೆದು ತನ್ನ ಗುಣಮಟ್ಟವನ್ನು ಯಥಾವತ್ತಾಗಿ ಉಳಿಸಿ ಕೊಂಡಿದೆ ಎಂದು ತಿಳಿಸಿದರು.
ಈ ನ್ಯಾಕ್ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಲೇಜಿಗೆ ಸಮಾಧಾನಕರ ಗ್ರೇಡ್ ಬರುವಲ್ಲಿ ಶ್ರಮಿಸಿದ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿ ಬಳಗ, ಪಾಲಕ ವರ್ಗ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಜಂಟಿ ನಿರ್ಧೆಶಕರಿಗೆ ಕಾಲೇಜಿನ ಪ್ರಾಚಾರ್ಯ ಪ್ರೊ ಸದಾಶಿವ ರಾಮಚಂದ್ರ ಗೌಡ ಮತ್ತು ಐಕ್ಯೂಎಸಿ ಸಂಯೋಜಕರಾದ ಪ್ರೊ. ಗಂಗಾಧರಯ್ಯ ಬಿ ಆರ್ ಅಭಿನಂದಿಸಿದ್ದಾರೆ.