ಶಿವರಾತ್ರಿ ಸಂಭ್ರಮ ಸ್ವಚ್ಛತೆಯ ಸಂಗಮ

ವಿಜಯ ದರ್ಪಣ ನ್ಯೂಸ್….

ಶಿವರಾತ್ರಿ ಸಂಭ್ರಮ ಸ್ವಚ್ಛತೆಯ ಸಂಗಮ

ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಹಾತಪಸ್ವಿ ಫೌಂಡೇಶನ್ (ರಿ) ವತಿಯಿಂದ ಕರ್ನಾಟಕದಾದ್ಯಂತ ಸುಮಾರು 20 ದೇವಾಲಯಗಳಲ್ಲಿ ಶಿವರಾತ್ರಿ ಸಂಭ್ರಮ ಸ್ವಚ್ಛತೆಯ ಸಂಗಮ ಎಂಬ ಅಭಿಯಾನ ಅಡಿಯಲ್ಲಿ ಶಿವನ ದೇವಾಲಯ ಆವರಣ ಮತ್ತು ಪರಿಸರವನ್ನು ಸ್ವಚ್ಛ ಗೋಳಿಸುವ ಮೂಲಕ ವಿನೂತನವಾಗಿ ಶಿವರಾತ್ರಿ ಹಬ್ಬದ ಆಚರಿಸಲಾಯಿತು.

ಪ್ರತಿ ವರ್ಷವೂ ಒಂದು ವಿಶಿಷ್ಟ ರೀತಿಯ ಅಭಿಯಾನ ಆಯೋಜಿಸುವ ಮೂಲಕ ನಮ್ಮ ಸಂಸ್ಥೆಯ ಕಳೆದ 8 ವರ್ಷದಲ್ಲಿ ಕರ್ನಾಟಕ ರಾಜ್ಯ ಅಲ್ಲದೆ ಹೋರ ರಾಜ್ಯದಲ್ಲು ಹೆಸರುವಾಸಿ ಆಗಿದೆ.

ನಮ್ಮ  ಶ್ರೀ ಮಹಾತಪಸ್ವಿ ಫೌಂಡೇಶನ್ ಸಂಸ್ಥೆಯು
ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯ, ಧಾರ್ಮಿಕ ಸೇವಾ ಸಂಸ್ಥೆ ಆಗಿದ್ದು 27 ಶಾಖೆಯಲ್ಲಿ ಕಾರ್ಯಪ್ರವೃತ್ತವಾಗಿದೆ.

ಶಿವರಾತ್ರಿ ಸಂಭ್ರಮ ಸ್ವಚ್ಛತೆಯ ಸಂಗಮ ಎಂಬ ಅಭಿಯಾನ ಮೂಲಕ ಈ ವರ್ಷದ ಶಿವರಾತ್ರಿ ಹಬ್ಬದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಅಧಿಕಾರಿಗಳು, ಪದಾಧಿಕಾರಿಗಳು ಹಾಗು ಸ್ವಯಂ ಸೇವಾಕರ್ತರು ಉಪಸ್ಥಿತರಿದ್ದರು.