ಸಮಗ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ದುರ್ಬಲ / ಹಿಂದುಳಿದ ವ್ಯಕ್ತಿಗಳಿಗೆ ಅಧಿಕಾರವನ್ನು ನೀಡಲು HAL ಮತ್ತು EDII ಮುಂದಾಗಿವೆ
ವಿಜಯ ದರ್ಪಣ ನ್ಯೂಸ್…
ಕರ್ನಾಟಕದಲ್ಲಿ ಸಮಗ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ 3,600 ದುರ್ಬಲ / ಹಿಂದುಳಿದ ವ್ಯಕ್ತಿಗಳಿಗೆ ಅಧಿಕಾರವನ್ನು ನೀಡಲು HAL ಮತ್ತು EDII ಮುಂದಾಗಿವೆ
ಸೂಕ್ಷ್ಮ ಕುಶಲತೆ ಅಭಿವೃದ್ಧಿ ಕಾರ್ಯಕ್ರಮಗಳು (MSDP ಗಳು) ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು, ಎಸ್‌ಸಿ/ಎಸ್‌ಟಿ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ವಿಕಲಚೇತನರಂತಹ ಅಂಚಿನಲ್ಲಿರುವ ಗುಂಪುಗಳ ಅಗತ್ಯತೆಗಳಿಗೆ ಪರಿಹಾರವನ್ನು ಒದಗಿಸುತ್ತದೆ.
ಬೆಂಗಳೂರು, ಫೆಬ್ರವರಿ 19, 2025: ಕರ್ನಾಟಕದಾದ್ಯಂತ ಯುವಕರು ಮತ್ತು ಮಹಿಳೆಯರು ಸೇರಿದಂತೆ 3,600 ದುರ್ಬಲ/ಹಿಂದುಳಿದ ವ್ಯಕ್ತಿಗಳ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಮೂರು ವರ್ಷಗಳ ಪರಿಣಾಮಕಾರಿ ಉಪಕ್ರಮವನ್ನು, ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (EDII), ರವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನವರ ಸಹಯೋಗದೊಂದಿಗೆ ಪ್ರಾರಂಭಿಸಿರುತ್ತಾರೆ. ಈ ಕಾರ್ಯಕ್ರಮವು HAL ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಪ್ರಯತ್ನಗಳ ಒಂದು ಮಹತ್ವದ ಭಾಗವಾಗಿದ್ದು, ಉದ್ಯಮಶೀಲತೆಯನ್ನು ಬೆಂಬಲಿಸುವ ಮತ್ತು ಸುಸ್ಥಿರ ಜೀವನೋಪಾಯದ ಬಗ್ಗೆ ಉತ್ತೇಜನ ನೀಡುವತ್ತ ಗಮನಹರಿಸುತ್ತದೆ.
ಸೂಕ್ಷ್ಮ ಕುಶಲತೆ ಅಭಿವೃದ್ಧಿ ಕಾರ್ಯಕ್ರಮಗಳು (MSDP ಗಳು) ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು, ಎಸ್‌ಸಿ/ಎಸ್‌ಟಿ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ವಿಕಲಚೇತನರಂತಹ ಅಂಚಿನಲ್ಲಿರುವ ಗುಂಪುಗಳ ಅಗತ್ಯತೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಉದ್ಯಮಶೀಲತೆಯ ಅರಿವು, ಕುಶಲತೆ ಅಭಿವೃದ್ಧಿ ತರಬೇತಿ ಮತ್ತು ಉದ್ಯಮ ಬೆಂಬಲವನ್ನು ಒದಗಿಸುವ ಮೂಲಕ, ಉಪಕ್ರಮವು ಭಾಗವಹಿಸುವವರಿಗೆ ಸ್ವಾವಲಂಬಿಯಾಗಲು ಹಾಗೂ ಆರ್ಥಿಕವಾಗಿ ಸ್ವತಂತ್ರರಾಗಲು ಅಧಿಕಾರವನ್ನು ನೀಡುತ್ತದೆ.
ಸದರಿ ಕಾರ್ಯಕ್ರಮವು ಹಲವಾರು ಪ್ರಮುಖ ಉದ್ದೇಶಗಳನ್ನು ಹೊಂದಿದೆ. ಕೃಷಿ, ಆಹಾರ ಸಂಸ್ಕರಣೆ, ರೇಷ್ಮೆ ಕೃಷಿ, ಸೆಣಬಿನ ಚೀಲ ತಯಾರಿಕೆ, ಸೌಂದರ್ಯ ಆರೈಕೆ ಮತ್ತು ವಿವಿಧೋದ್ದೇಶ ಯಾಂತ್ರಿಕ ವ್ಯಾಪಾರಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ತಾಂತ್ರಿಕ ತರಬೇತಿಯನ್ನು ನೀಡುವ ಮೂಲಕ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ಇದು ಮಾರ್ಗದರ್ಶನ ನೀಡುವುದು, ಮಾರುಕಟ್ಟೆಗೆ ಸಂಪರ್ಕ ಒದಗಿಸುವುದು, ಕ್ರೆಡಿಟ್ ಬೆಂಬಲ ಮತ್ತು ಎಂಟರ್‌ಪ್ರೈಸ್ ಪ್ರಚಾರದ ಮೂಲಕ ಉದ್ಯಮಶೀಲತೆಯನ್ನು ಬೆಂಬಲಿಸುತ್ತದೆ. ತಾಂತ್ರಿಕವಾಗಿ ಪ್ರವೇಶಿಸಬಹುದಾದಂತಹ ಹಾಗೂ ಆರ್ಥಿಕವಾಗಿ ಕಾರ್ಯಸಾದುವಾದ ಯೋಜನೆಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಉಪಕ್ರಮವು ಫಲಾನುಭವಿಗಳು ಪ್ರಾಯೋಗಿಕ ಮತ್ತು ಸಮರ್ಥನೀಯ ಫಲಿತಾಂಶಗಳನ್ನು ಪಡೆಯುವ ಬಗ್ಗೆ ಖಾತ್ರಿಪಡಿಸುತ್ತದೆ.
“ಕುಶಲತೆ ಅಭಿವೃದ್ಧಿ, ಮಾರುಕಟ್ಟೆ ಸಂಪರ್ಕಗಳು, ಸಾಲಗಳಿಗಾಗಿ ಪ್ರವೇಶ, ಉದ್ಯಮ ಪ್ರಚಾರ ಮತ್ತು ಅನುಸರಣೆ ತರಬೇತಿಯ ಮೂಲಕ ಕಾರ್ಯಕ್ರಮವು ಸ್ವಾವಲಂಬನೆಯನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ, ಫಲಾನುಭವಿಗಳಿಗೆ ಸ್ವತಂತ್ರವಾಗಿ ಆದಾಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಪ್ರಾಯೋಗಿಕ ಕುಶಲತೆಗಳು ಹಾಗೂ ದೀರ್ಘಾವಧಿಯ ಯಶಸ್ಸಿಗೆ ಅಗತ್ಯವಾದ ಸಾಧನಗಳನ್ನು ಹೊಂದಿರುವ ನಿಟ್ಟಿನಲ್ಲಿ ವ್ಯಕ್ತಿಗಳನ್ನು ಸಜ್ಜುಗೊಳಿಸುವ ಮೂಲಕ, ಕಾರ್ಯಕ್ರಮವು ಅವರುಗಳು ಅವಲಂಬನೆಯಿಂದ ಮುಕ್ತರಾಗಲು ಮತ್ತು ತಮ್ಮ ಹಾಗೂ ಅವರ ಕುಟುಂಬಗಳಿಗೆ ಚೇತರಿಸಿಕೊಳ್ಳುವ, ಸ್ವತಂತ್ರ ಜೀವನೋಪಾಯವನ್ನು ಸೃಷ್ಟಿಸಿಕೊಳ್ಳುವಂತೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ” ಎಂದು EDII ನ ಮಹಾನಿರ್ದೇಶಕ ಡಾ. ಸುನಿಲ್ ಶುಕ್ಲಾ ತಿಳಿಸಿದರು.
ಈ ಉಪಕ್ರಮವು “ಮೇಕ್ ಇನ್ ಇಂಡಿಯಾ” ಮತ್ತು “ಲೋಕಲ್ ಫಾರ್ ವೋಕಲ್” ರಾಷ್ಟ್ರೀಯ ಕಾರ್ಯಸೂಚಿಗಳೊಂದಿಗೆ ಅನುರಣಿಸುತ್ತದೆ. ಹಿಂದಿನ ಮತ್ತು ಮುಂದಿನ ಸಂಪರ್ಕಗಳು, ಮಾರ್ಗದರ್ಶನ ಮತ್ತು ಮಾರುಕಟ್ಟೆಗೆ ಪ್ರವೇಶಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುವುದು ಸ್ಥಳೀಯ ಆರ್ಥಿಕತೆಗೆ ಕೊಡುಗೆಯನ್ನು ನೀಡುವುದರ ಮೂಲಕ ಭಾಗವಹಿಸುವವರಿಗೆ ಸಮರ್ಥನೀಯ ಬೆಳವಣಿಗೆಯನ್ನು ಖಾತ್ರಿಗೊಳಿಸುತ್ತದೆ.
“ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ EDII ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಮುದಾಯ ಸಂಸ್ಥೆಗಳೊಂದಿಗೆ ಸಮಾಲೋಚನೆ, ಮಾರ್ಗದರ್ಶನ ಮತ್ತು ಸಹಯೋಗದ ಮೂಲಕ ಸಂಸ್ಥೆಯು ಸಂಭಾವ್ಯ ಉದ್ಯಮಿಗಳನ್ನು ತೊಡಗಿಸಿಕೊಳ್ಳುವುದರೊಂದಿಗೆ ಜಾಗೃತಿ ರಚನೆಯು ಒಂದು ಅಡಿಪಾಯದ ಅಂಶವಾಗಿದೆ. ಸಾಮರ್ಥ್ಯ ನಿರ್ಮಾಣವು (ಕೆಪ್ಯಾಸಿಟಿ ಬಿಲ್ಡಿಂಗ್) ಉಪಕ್ರಮದ ಮುಖ್ಯ ಉದ್ದೇಶವಾಗಿದ್ದು, ದುರ್ಬಲ/ಹಿಂದುಳಿದ ವ್ಯಕ್ತಿಗಳ ನಿರ್ದಿಷ್ಟ ಅಗತ್ಯತೆಗಳಿಗೆ ಅನುಗುಣವಾಗಿ ಕುಶಲತೆ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ತರಬೇತಿಯನ್ನು ನೀಡುತ್ತದೆ. ಕಾರ್ಯಕ್ರಮವು ಎಂಟರ್‌ಪ್ರೈಸ್ ಪ್ರಚಾರಕ್ಕಾಗಿ ಮಾರ್ಗದರ್ಶನ, ಕಾರ್ಯಸಾದುವಾದ ಯೋಜನಾ ವರದಿಗಳ ತಯಾರಿಕೆ ಹಾಗೂ ಎಂಟರ್‌ಪ್ರೈಸ್ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹಿಂದಿನ ಮತ್ತು ಮುಂದಿನ ಸಂಪರ್ಕಗಳನ್ನು ಒಳಗೊಂಡಿದೆ”. ಎಂದು ಡಾ. ರಾಮನ್ ಗುಜ್ರಾಲ್, ಪ್ರೊಫೆಸರ್ ಮತ್ತು ನಿರ್ದೇಶಕರು, ಪ್ರಾಜೆಕ್ಟ್ ವಿಭಾಗ, ಕಾರ್ಪೊರೇಟ್ ಅವರು ತಿಳಿಸಿದರು.
ಇಲ್ಲಿಯವರೆಗೆ, ಕಾರ್ಯಕ್ರಮವು ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ. ಆಹಾರ ಸಂಸ್ಕರಣೆ, ಫ್ಯಾಷನ್ ತಂತ್ರಜ್ಞಾನ, ಸೆಣಬಿನ ಚೀಲ ತಯಾರಿಕೆ ಮತ್ತು ಹೆಚ್ಚಿನವುಗಳಲ್ಲಿ, EDII ಅವರು 137 ವಾಣಿಜ್ಯೋದ್ಯಮ ಜಾಗೃತಿ ಕಾರ್ಯಕ್ರಮಗಳನ್ನು ಮತ್ತು 83 ಸುಧಾರಿತ ಕುಶಲತೆ ತರಬೇತಿ ಅವಧಿಗಳನ್ನು ನಡೆಸಿದ್ದಾರೆ. 3,400 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ ಮತ್ತು 580 ಹೊಸ ಉದ್ಯಮಗಳನ್ನು ಸ್ಥಾಪಿಸಲಾಗಿದೆ. ಫಲಾನುಭವಿಗಳು ಸರಾಸರಿ 10% ಆದಾಯದ ಹೆಚ್ಚಳವನ್ನು ಕಂಡಿದ್ದಾರೆ, ಇದು ಅವರ ಸಮುದಾಯಗಳಲ್ಲಿ ಗಮನಾರ್ಹ ಸಾಮಾಜಿಕ-ಆರ್ಥಿಕ ಸುಧಾರಣೆಗಳಿಗೆ ಕಾರಣವಾಗುತ್ತದೆ. ಫ್ಯಾಶನ್ ತಂತ್ರಜ್ಞಾನ / ಸೆಣಬು ತಯಾರಿಕೆ / ಆಹಾರ ಸಂಸ್ಕರಣೆ ಕ್ಷೇತ್ರಗಳಲ್ಲಿ ವ್ಯಾಪಾರ ನಿರ್ದಿಷ್ಟ ತರಬೇತಿಯ ಉತ್ಪಾದನಾ ಕೇಂದ್ರಗಳ ಸ್ಥಾಪನೆಯು ಮೂಲಸೌಕರ್ಯ ಸೌಲಭ್ಯಗಳನ್ನು ವಿಸ್ತರಿಸಲು ಹಾಗೂ ಸದಾಕಾಲವೂ ದೊರಕುವ ಮಾಸ್ಟರ್ ಟ್ರೈನರ್ ಮಾರ್ಗದರ್ಶನವು ‘ಉದ್ಯಮ ಪ್ರಚಾರದ ಮೂಲಕ ಫಲಾನುಭವಿಗಳ ಸಬಲೀಕರಣ’ಕ್ಕೆ ಕಾರಣವಾಗುತ್ತದೆ.
“MSDP ಸಂಪನ್ಮೂಲಗಳು, ತರಬೇತಿ ಮತ್ತು ಹಣಕಾಸಿನ ಬೆಂಬಲಕ್ಕೆ ಸೀಮಿತ ಪ್ರವೇಶವನ್ನು ಹೊಂದಿರುವ ಅಂಚಿನಲ್ಲಿರುವ ಸಮುದಾಯಗಳ ಮೇಲೆ ಕೇಂದ್ರೀಕರಿಸುತ್ತದೆ. EDII ಯ ಶಕ್ತಿಯು ಅದರ ರಚನಾತ್ಮಕ ತರಬೇತಿ ವಿಧಾನದಲ್ಲಿ ಅಡಗಿದೆ, ಅದು ಸೈದ್ಧಾಂತಿಕ ಜ್ಞಾನ ಮತ್ತು ಪ್ರಾಯೋಗಿಕ ಕುಶಲತೆಗಳನ್ನು ಸಂಯೋಜಿಸುತ್ತದೆ. ಪ್ರಾದೇಶಿಕ ಸಾಮಾಜಿಕ-ಆರ್ಥಿಕ ಭೂದೃಶ್ಯಗಳ ಬಗ್ಗೆ ಅವರು ಹೊಂದಿರುವ ಆಳವಾದ ತಿಳುವಳಿಕೆಯು ವಿವಿಧ ಸಮುದಾಯಗಳ ಅನನ್ಯ ಅಗತ್ಯತೆಗಳಿಗೆ ತಕ್ಕಂತೆ ಪರಿಹಾರಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ, ಹಾಗೂ ಹೆಚ್ಚಿನ ಯಶಸ್ಸನ್ನು ಖಚಿತಪಡಿಸುತ್ತದೆ. EDII ಮಾರ್ಗದರ್ಶನ, ನೆಟ್‌ವರ್ಕಿಂಗ್ ಮತ್ತು ಸಲಹೆಗಳ ಮೂಲಕ ಬೆಂಬಲಿಸುತ್ತದೆ ಅದು ಉದ್ಯಮಶೀಲತೆಯ ಕನಸುಗಳನ್ನು ಸ್ಪಷ್ಟವಾದ ವ್ಯವಹಾರಗಳಾಗಿ ಪರಿವರ್ತಿಸಲು ಸಹಾಯವನ್ನು ಮಾಡುತ್ತದೆ.” ಎಂದು EDII ನ ಕಾರ್ಯಕ್ರಮ ನಿರ್ದೇಶಕ ಮತ್ತು ಸಹಾಯಕ ಪ್ರಾಧ್ಯಾಪಕರಾದ A. L. N. ಪ್ರಸಾದ್ ತಿಳಿಸಿದರು.
EDII ರವರ ರಚನಾತ್ಮಕ ತರಬೇತಿ ವಿಧಾನವು ಪ್ರಾಯೋಗಿಕ ಕುಶಲತೆಗಳೊಂದಿಗೆ ಸೈದ್ಧಾಂತಿಕ ಜ್ಞಾನವನ್ನು ಸಹ ಸಂಯೋಜಿಸುತ್ತದೆ. ಪ್ರಾದೇಶಿಕವಾಗಿ ಇರಬಹುದಾದ ಸಾಮಾಜಿಕ-ಆರ್ಥಿಕ ಸವಾಲುಗಳ ಬಗ್ಗೆ ಅವರಿಗಿರುವ ಆಳವಾದ ತಿಳುವಳಿಕೆಯು ಫಲಾನುಭವಿಗಳಿಗೆ ತಮ್ಮ ಅನನ್ಯ ಅಗತ್ಯತೆಗಳನ್ನು ಪರಿಹರಿಸಲು ಸೂಕ್ತವಾದ ಪರಿಹಾರಗಳು ದೊರೆಯುವುದನ್ನು ಖಾತ್ರಿಗೊಳಿಸುತ್ತದೆ.
EDII ಮತ್ತು HAL ನಡುವಿನ ಈ ಪಾಲುದಾರಿಕೆಯು ದುರ್ಬಲ ಹಾಗೂ ಹಿಂದುಳಿದ ಸಮುದಾಯಗಳಿಗೆ ಸುಸ್ಥಿರ ಜೀವನೋಪಾಯವನ್ನು ರಚಿಸುವಲ್ಲಿ ಸಹಯೋಗದ ಪರಿವರ್ತಕ ಶಕ್ತಿಯನ್ನು ಪ್ರದರ್ಶಿಸುತ್ತದೆ. ಸಮಗ್ರ ಕುಶಲತೆ ಅಭಿವೃದ್ಧಿ, ಉದ್ಯಮಶೀಲತಾ ತರಬೇತಿ ಹಾಗೂ ಉದ್ಯಮ ಬೆಂಬಲವನ್ನು ಒದಗಿಸುವ ಮೂಲಕ, ಕಾರ್ಯಕ್ರಮವು ಸಾಮಾಜಿಕ-ಆರ್ಥಿಕ ಅಡೆತಡೆಗಳನ್ನು ನಿವಾರಿಸಲು ಮತ್ತು ಸ್ವಾವಲಂಬನೆಯನ್ನು ಸಾಧಿಸಲು ವ್ಯಕ್ತಿಗಳಿಗೆ ಅಧಿಕಾರವನ್ನು ನೀಡುತ್ತದೆ. ಈ ಉಪಕ್ರಮವು ಸಾಧಿಸಬಹುದಾದ ಗಮನಾರ್ಹ ಸಾಧನೆಗಳು, ಅಂಚಿನಲ್ಲಿರುವ ಗುಂಪುಗಳನ್ನು ಮೇಲಕ್ಕೆತ್ತುವುದು ಮಾತ್ರವಲ್ಲದೆ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವ, ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವ ಹಾಗೂ ನುರಿತ ಉದ್ಯೋಗಿಗಳನ್ನು ನಿರ್ಮಿಸುವ ಭಾರತದ ವಿಶಾಲ ಗುರಿಗಳಿಗೆ ಕೊಡುಗೆಯನ್ನು ನೀಡುತ್ತದೆ.
ಈ ಕಾರ್ಯಕ್ರಮವು ಬೆಳೆಯುತ್ತಲೇ ಇರುವುದರಿಂದ, ಅರ್ಥಪೂರ್ಣ ಬದಲಾವಣೆಗೆ ಬೇಕಾದ ಚಾಲನೆ, ಚೇತರಿಸಿಕೊಳ್ಳುವ ಸಮುದಾಯಗಳನ್ನು ರೂಪಿಸುವುದು ಹಾಗೂ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವುದನ್ನು ಗುರಿಯಾಗಿಟ್ಟುಕೊಂಡಿರುವ ಕುಶಲತೆ ಅಭಿವೃದ್ಧಿ ಉಪಕ್ರಮಗಳ ಸಾಮರ್ಥ್ಯಕ್ಕೆ ಇದು ಸಾಕ್ಷಿಯಾಗಿದೆ.