ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ

ವಿಜಯ ದರ್ಪಣ ನ್ಯೂಸ್…..

 ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ

ಬೆಂ.ಗ್ರಾ.ಜಿಲ್ಲೆ.ಫೆಬ್ರವರಿ20.:ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕರ್ನಾಟಕ ಸರ್ಕಾರ ವತಿಯಿಂದ ಫೆಬ್ರವರಿ 26 ರಿಂದ 28 ರ ವರೆಗೆ ಬೆಂಗಳೂರಿನ Bangalore International Exhibition Centre ನಲ್ಲಿ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ-2025 ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ದೇಶಗಳಿಂದ 400 ಕ್ಕೂ ಹೆಚ್ಚು ಆತಿಥೇಯ ಖರೀದಿದಾರರು ಮತ್ತು 50 ಮಾಧ್ಯಮಗಳನ್ನೊಳಗಂಡ ಅತಿದೊಡ್ಡ ಬಿ2ಬಿ ಇನ್ ಬೌಂಡ್ ಮತ್ತು ದೇಶಿಯ ಬಿ2ಬಿ ಟ್ರಾವೆಲ್ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಹೋಂಸ್ಟೇಗಳು, ರೆಸಾರ್ಟ್ಗಳು, ಪ್ರಯಾಣ ನಿರ್ವಾಹಕರು, ಹೋಟೆಲ್ ಉದ್ಯಮಿಗಳು” ಮತ್ತು ಇತರೆ ಉದ್ಯಮ ಪ್ರತಿನಿಧಿಗಳು ಶ್ರೀಮಂತ ಮತ್ತು ವೈವಿಧ್ಯಮಯ ಪ್ರವಾಸೋದ್ಯಮ ಕೊಡುಗೆಗಳನ್ನು ಪ್ರದರ್ಶಿಸಬಹುದಾಗಿದೆ ಹಾಗೂ KITE-2025 ರಲ್ಲಿ ಭಾಗವಹಿಸಬಹುದಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಾಲುದಾರರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಸಾಂಸ್ಕೃತಿಕ, ಪರಂಪರೆ ಮತ್ತು ಇತರೆ ಪ್ರವಾಸೋದ್ಯಮ ಉತ್ಪನ್ನಗಳನ್ನು ದೇಶಿಯ ಹಾಗೂ ಜಾಗತಿಕ ಟೂರ್ ಅಂಡ್ ಟ್ರಾವೆಲ್ ಸಮುದಾಯಕ್ಕೆ ಪರಿಚಯಿಸಬಹುದಾಗಿದೆ.

ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ https://aww.karnatakatravelexpo.org ವೆಬ್ ಸೈಟ್ ಮೂಲಕ ಅಥವಾ ದೂ.ಸಂಖ್ಯೆ 8722277132/9845215387 ಕರೆ ಮಾಡಿ ಮಳಿಗೆ ಬುಕ್ ಮಾಡಬಹುದಾಗಿದೆ ಅಥವಾ ದೂ.ಸಂ 080-22040633, ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ ಇವರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.28 ರಂದು ಮಹಿಳಾ ಕ್ರೀಡಾಕೂಟ

ಬೆಂ.ಗ್ರಾ.ಜಿಲ್ಲೆ.ಫೆಬ್ರವರಿ20.: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿದೆ.

ಆಸಕ್ತ ಮಹಿಳೆಯರು ಫೆಬ್ರವರಿ 28 ರಂದು ಬೆಳಿಗ್ಗೆ 9.00 ಗಂಟೆಗೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು, ನೊಂದಣಿ ಮಾಡಿಕೊಳ್ಳುವುದು. ಕ್ರೀಡಾ ಸ್ಪರ್ಧೆಗಳು ಬೆಳಿಗ್ಗೆ 10.30 ಗಂಟೆಗೆ ಪ್ರಾರಂಭವಾಗುತ್ತದೆ.

ಆಯೋಜನೆ ಮಾಡಿರುವ ಕ್ರೀಡೆಗಳು

1. 19 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹಗ್ಗ ಜಗ್ಗಾಟ (ಗುಂಪು 06 ಜನ)

2. 19-35 ವರ್ಷ ಒಳಪಟ್ಟ ಮಹಿಳೆರಿಗೆಮ್ಯೂಸಿಕಲ್ ಚೇರ್,ಮಡಿಕೆ ಹೊಡೆಯುವುದು, ಬಾಲ್‌ಇನ್ ದಿ ಬಕೆಟ್,50 ಮೀ ವಾಕ್‌ರೇಸ್, ಲೆಮನ್ ಅಂಡ್ ಸ್ಪೂನ್

3. 35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮ್ಯೂಸಿಕಲ್ ಚೇರ್,ಮಡಿಕೆ ಹೊಡೆಯುವುದು, ಬಾಲ್‌ಇನ್ ದಿ ಬಕೆಟ್ 50 ಮೀ ವಾಕ್ ರೇಸ್, ಲೆಮೆನ್ ಅಂಡ್ ಸ್ಪೂನ್ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಕ್ರೀಡಾ ಸೂಚನೆಗಳು

1. ಕ್ರೀಡಾ ಸ್ಪರ್ಧೆಗಳು ಬೆಳಿಗ್ಗೆ 10.30 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ನೊಂದಣಿ ಕಡ್ಡಾಯವಾಗಿರುತ್ತದೆ.
2. ಆಧಾರ್ ಗುರುತಿನ ಚೀಟಿ ಕಡ್ಡಾಯ.
3. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
4. ಭಾಗವಹಿಸುವ ಮಹಿಳಾ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ.
5. ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
6. ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಹಾಜರಾತಿ ಪ್ರಮಾಣ ಪತ್ರವನ್ನು ನೀಡಲಾಗುವುದು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9632778567 / 080-29787443 ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.