ಸಂಶೋಧನೆಗೆ ಒತ್ತು ನೀಡಲು ಕರೆ
ವಿಜಯ ದರ್ಪಣ ನ್ಯೂಸ್….
ಸಂಶೋಧನೆಗೆ ಒತ್ತು ನೀಡಲು ಕರೆ
ದೊಡ್ಡಬಳ್ಳಾಪುರ : ಸರ್ಕಾರಿ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಬೋಧನೆ ಜೊತೆಗೆ ಸಂಶೋಧನೆಗೂ ಆದ್ಯತೆ ನೀಡಬೇಕೆಂದು ತೆಲಂಗಾಣ ರಾಜ್ಯದ ಕಾಕತಿಯ ವಿಶ್ವವಿದ್ಯಾಲಯದ ಆಂಗ್ಲ ಪ್ರಾಧ್ಯಾಪಕ ಪ್ರೊ. ರಾಜೇಶ್ವರ ಮಿತ್ತಪಲ್ಲಿ ಹೇಳಿದರು.
ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ ನಿರ್ಗಮನ ಸಭೆಯಲ್ಲಿ ಮಾತನಾಡಿದರು. ಸರ್ಕಾರ ಸಂಶೋಧನೆಗಾಗಿ ಸಾಕಷ್ಟು ಹಣ ಮಂಜೂರು ಮಾಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಬೋಧಕರು ತಮ್ಮ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂಶೋಧನೆಯಲ್ಲಿ ತೊದಗಬೇಕೆಂದು ಹೇಳಿದರು.
ದಿಲ್ಲಿಯ ಎನ್ ಸಿಇ ಆರ್ ಟಿ ಪ್ರಾಧ್ಯಾಪಕರಾದ ಡಾ. ದಿನೇಶ್ ಕುಮಾರ ಮಾತನಾಡಿ ಕಾಲೇಜುಗಳಲ್ಲಿ ನೂತನ ಶಿಕ್ಷಣ ಯೋಜನೆಯನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಶೈಕ್ಷಣಿಕ ವಲಯವನ್ನು ಉನ್ನತಿಗೊಳಿಸಲು ಪ್ರಯತ್ನಿಸಬೇಕೆಂದು ಹೇಳಿದರು.
ಕೇರಳ ರಾಜ್ಯದ ಕೊಟ್ಟಾಯಂ ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಸುಲೈಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಸದಾಶಿವ ರಾಮಚಂದ್ರಗೌಡ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕರಾದ ಡಾ ಗಂಗಾಧರಯ್ಯ ಬಿ ಆರ್ ವಂದಿಸಿದರು. ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ಪ್ರೊ. ನೀರಜಾದೇವಿ ಕಾರ್ಯಕ್ರಮ ನಿರೂಪಿಸಿದರು. ಫೇಬ್ರವರಿ 19 ಮತ್ತು 20 ರಂದು ಎರಡು ದಿನಗಳ ವರೆಗೆ ಕಾಲೇಜಿಗೆ ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್ ) ಸದಸ್ಯರಾಗಿ ಆಗಮಿಸಿ ಕಾಲೇಜಿನ ಎಲ್ಲಾ ವಿಭಾಗಗಳನ್ನು ಮೌಲ್ಯ ಮಾಪನ ಗೊಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.