ಆಡಳಿತ ಸೌಧದ ಅನಧಿಕೃತ ಮಳಿಗೆ ತೆರವಿಗೆ ಜಿಲ್ಲಾಧಿಕಾರಿಗಳ ನಿರ್ದೇಶನ.
ವಿಜಯ ದರ್ಪಣ ನ್ಯೂಸ್….
ಆಡಳಿತ ಸೌಧದ ಅನಧಿಕೃತ ಮಳಿಗೆ ತೆರವಿಗೆ ಜಿಲ್ಲಾಧಿಕಾರಿಗಳ ನಿರ್ದೇಶನ.
ಕೊಡಗು: ಮಡಿಕೇರಿ ತಾಲ್ಲೂಕು ಆಡಳಿತ ಸೌಧದ ಮುಂಬಾಗದಲ್ಲಿ ನಿರ್ಮಿಸಿರುವ ಅನಧಿಕೃತ ಮಳಿಗೆಗಳನ್ನು ನಿಯಮಾನುಸಾರ ತೆರವುಗೊಳಿಸಲು ತುರ್ತು ಕ್ರಮ ಜರುಗಿಸುವಂತೆ ಕೊಡಗು ಜಿಲ್ಲಾಧಿಕಾರಿಗಳಾದ ಶ್ರೀ ವೆಂಕಟ್ ರಾಜಾ ರವರು ಯೋಜನಾ ನಿರ್ದೇಶಕರು,ಜಿಲ್ಲಾ ನಗರಾಭಿವೃದ್ಧಿ ಕೋಶ ರವರಿಗೆ ಸೂಚನೆ ನೀಡಿದ ಹಿನ್ನಲೆ ಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಡಿಕೇರಿ ನಗರ ಸಭೆ ಪೌರಾಯುಕ್ತರಿಗೆ ಜ್ಞಾಪನ ಪತ್ರವನ್ನು ರವಾನಿಸಲಾಗಿದೆ.
ನೂತನ ತಾಲ್ಲೂಕು ಆಡಳಿತ ಸೌಧದ ಮುಂಭಾಗದಲ್ಲಿ ರಸ್ತೆ ಮತ್ತು ಚರಂಡಿಗಳನ್ನು ಅತಿಕ್ರಮಿಸಿಕೊಂಡು ಹತ್ತು ಅನಧಿಕೃತ ಮಳಿಗೆಗಳು ತಲೆ ಎತ್ತಿದ್ದವು.ಅವುಗಳಲ್ಲಿ ಏಳು ಮಳಿಗೆಗಳನ್ನು ತೆರವು ಗೊಳಿಸಲಾಗಿತ್ತು.
ಮೂರು ಮಳಿಗೆಗಳನ್ನು ಮಾತ್ರ ಪ್ರಭಾವಿಗಳ ಒತ್ತಡದಿಂದ ಹಾಗೇಯೇ ಉಳಿಸಲಾಗಿದೆ. ಕಾನೂನು ಪ್ರತಿಯೊಬ್ಬರಿಗೂ ಸಮಾನವಾಗಿರುವುದರಿಂದ ಸದರಿ ಮೂರು ಮಳಿಗೆಗಳನ್ನು ತೆರವುಗೊಳಿಸುವಂತೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಲಿಖಿತ ದೂರು ಸಲ್ಲಿಸಿದ್ದರು.
ಆಡಳಿತ ಸೌಧದ ಕಟ್ಟಡ ಕಾಮಗಾರಿಯಂತು ಆಮೆ ಗತಿಯಲ್ಲಿ ಸಾಗಿ ಇದೀಗ ಮುಕ್ತಾಯ ಹಂತಕ್ಕೆ ತಲುಪಿದೆ. ಆದರೆ ಅನಧಿಕೃತ ಕಟ್ಟಡಗಳು ಮಾತ್ರ ಆಡಳಿತ ಸೌಧದ ಕಟ್ಟಡ ಪೂರ್ಣಗೊಳ್ಳುವ ಮುಂಚಿತವಾಗಿ ತಲೆ ಎತ್ತಿ ನಿಂತಿದೆ.