ದೇವನಹಳ್ಳಿ ಪುರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಅವಿರೋಧ ಆಯ್ಕೆ
ವಿಜಯ ದರ್ಪಣ ನ್ಯೂಸ್…
ದೇವನಹಳ್ಳಿ ಪುರಸಭೆಗೆ ಅಧ್ಯಕ್ಷ -ಉಪಾಧ್ಯಕ್ಷರ ಅವಿರೋಧ ಆಯ್ಕೆ
ದೇವನಹಳ್ಳಿ : ದೇವನಹಳ್ಳಿ ಪಟ್ಟಣದ ಪುರಸಭೆಗೆ ಅಧ್ಯಕ್ಷರಾಗಿ ಡಿ ಎಂ ಮುನಿಕೃಷ್ಣ , ಉಪಾಧ್ಯಕ್ಷರಾಗಿ ಜಿಎಂ ರವೀಂದ್ರ ಆಯ್ಕೆಯಾಗಿದ್ದಾರೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಉಪವಿಭಾಗಾಧಿಕಾರಿಗಳ ಆಡಳಿತದಲ್ಲಿದ್ದು, ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ವರ್ಗದ ಮೀಸಲಾತಿಯಿದ್ದರಿಂದ ಡಿ.ಎಂ. ಮುನಿಕೃಷ್ಣ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ನಿಗದಿಯಾಗಿದ್ದು ಜಿ.ಎ. ರವೀಂದ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಡಿ ಎಂ ಮುನಿಕೃಷ್ಣ ,ಉಪಾಧ್ಯಕ್ಷರಾಗಿ ಜಿಎಂ ರವೀಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ತಾಲ್ಲೂಕು ದಂಡಾಧಿಕಾರಿ ಹೆಚ್. ಬಾಲಕೃಷ್ಣ ತಿಳಿಸಿದರು,
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಿ.ಎಂ. ಮುನಿಕೃಷ್ಣ ಮಾತನಾಡಿ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಹದಗೆಟ್ಟಿದ್ದು ಅವುಗಳ ಅಭಿವೃದ್ಧಿ ಮಾಡುವ ಉದ್ದೇಶ, ಬೇಸಿಗೆ ಪ್ರಾರಂಭವಾಗಿದ್ದು ಕುಡಿಯುವ ನೀರಿಗೆ ಹೆಚ್ಚು ಒತ್ತು ನೀಡಿ, ಸ್ವಚ್ಚತೆಗೆ ಆಧ್ಯತೆ ನೀಡಲಾಗುವುದು ಎಂದರು.
ಉಪಾಧ್ಯಕ್ಷ ಜಿ.ಎ. ರವೀಂದ್ರ ಮಾತನಾಡಿ ಪಟ್ಟಣದ ಚರಂಡಿಗಳಲ್ಲಿ ಬಹುತೇಕ ತುಂಬಿದ್ದು, ಚರಂಡಿಗಳ ಸ್ವಚ್ಚತೆಗೆ ಆಧ್ಯತೆ ನೀಡಿ, ನೂತನ ಯೋಜನೆಗಳನ್ನು ರೂಪಿಸಿ ಪಟ್ಟಣದ ಮುಖ್ಯ ರಸ್ತೆಯನ್ನು ಆಧುನೀಕರಣ ಮಾಡಲು ಅನುಮೋದನೆ ದೊರೆತಿದ್ದು ಶೀಘ್ರದಲ್ಲಿ ಬೈಪಾಸ್ ರಸ್ತೆಯಿಂದ ರಾಣಿ ಕ್ರಾಸ್‌ವರೆಗೆ ರಸ್ತೆ ಅಗಲೀಕರಣ, (ಪುಟ್ ಪಾತ್) ಪಾದಚಾರಿ ಮಾರ್ಗವನ್ನು ಮಾಡಲಾಗುವುದು ಎಂದರು.
ಮುಖ್ಯಾಧಿಖಾರಿ ದೊಡ್ಡಮಳವಯ್ಯ ಆರೋಗ್ಯಾಧಿಕಾರಿ ಶ್ರೀದೇವಿ ಸೇರಿದಂತೆ ಪುರಸಭಾ ಸದಸ್ಯರಾದ ವಿ.ಕೋಮಲ, ಕೆ. ಗೀತಾ, ಲೀಲಾವತಿ, ಎಂ.ಸೋಮಶೇಖರ್‌ಬಾಬು, ಹು॥ ವೇಣುಗೋಪಾಲ್ (ಗೋಪಿ), ಜಿ.ರೇಖಾ, ಕೆ.ಆರ್.ಪುಷ್ಪಲತಾ, ನಾರಾಯಣಸ್ವಾಮಿ (ಬಾಂಬೆ), ಡಿ.ಆರ್.ಬಾಲರಾಜು, ಎನ್.ಕೆ.ಮಂಜುನಾಥ್, ಎಸ್. ಸಿ.ಚಂದ್ರಪ್ಪ, ಎಸ್.ಸುಮಿತ್ರ, ಡಿ.ಗೋಪಮ್ಮ, ಅಭ್ಯರ್ಥಿ ವೈ.ಆರ್.ರುದ್ರೇಶ್, ಎನ್.ರಘು, ಮಂಜುಳಾ, ಜಿ.ಸುರೇಶ್, ವಿ.ಚೈತ್ರ, ಡಿ.ಎಂ.ಮುನಿಕೃಷ್ಣ, ಲಕ್ಷ್ಮೀ, ರತ್ನಮ್ಮ, ಎಸ್.ನಾಗೇಶ್ ಭಾಗವಹಿಸಿದ್ದರು.