ನೈನಿತಾಲ್ ದೇಗುಲಕ್ಕೆ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರ ಭೇಟಿ
ವಿಜಯ ದರ್ಪಣ ನ್ಯೂಸ್…
ನೈನಿತಾಲ್ ದೇಗುಲಕ್ಕೆ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರ ಭೇಟಿ
ನೈನಿತಾಲ್: ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು
ಉತ್ತರಾ ಖಂಡ್ ನ ನೈನಿತಾಲ್ನಲ್ಲಿರುವ ಪ್ರಸಿದ್ಧ ನೈನಾದೇವಿ ದೇಗುಲಕ್ಕೆ ಸೋಮವಾರ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇಗುಲದ ಆವರಣದಲ್ಲಿ ಅವರು ಮಂತ್ರ ಪಠಿಸಿದರು.
ಬಳಿಕ ಮಾತನಾಡಿದ ಅವರು, ನೈನಿಕೆರೆ ಮತ್ತು ನೈನಿತಾಲ್ ನನಗೆ ಕಾಶ್ಮೀರವನ್ನು ನೆನಪಿಸುತ್ತಿದೆ. ಕಾಶ್ಮೀರದ ಕೆರೆಗಳಲ್ಲಿನ ಸೌಂದರ್ಯ ನೈನಿತಾಲ್ನಲ್ಲೂ ಇದೆ. ಎರಡು ಒಂದೇ ರೀತಿಯಾಗಿ ನೋಡಲು ಬಹಳ ಸುಂದರವಾಗಿವೆ ಎಂದರು.
ಇದಕ್ಕೂ ಮುನ್ನ, ನೈನಾದೇವಿ ದೇಗುಲ ಟ್ರಸ್ಟ್ ಅಧ್ಯಕ್ಷ ರಾಜೀವ್ ಬೊಚಿನ್ ಶಾ ಉಪ ಕಾರ್ಯದರ್ಶಿ ಪ್ರದೀಪ್ ಶಾ ಮತ್ತು ಇತರರು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರನ್ನು ಬರಮಾಡಿ ಕೊಂಡರು.
ಮಾತೆ ನೈನಾದೇವಿಯ ಪ್ರತಿಮೆ ಮತ್ತು ಚುನಾರಿಯನ್ನು ಕೊಡುಗೆಯಾಗಿ ನೀಡಿದರು. ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ ಪರವಾಗಿ ದೇಗುಲದ ಮುಖ್ಯ ಆಚಾರ್ಯ ಚಂದ್ರಶೇಖರ್ ಶಿವಾರಿ ಪೂಜೆ ನೆರವೇರಿಸಿದರು.