ರೋಲ್ಸ್ ರಾಯ್ಸ್ ಸರಿಸಾಟಿಯಿಲ್ಲದ ಲಕ್ಸುರಿ: ಭಾರತಕ್ಕೆ ಆಗಮಿಸಿದ ಘೋಸ್ಟ್ ಸೀರೀಸ್ II

ವಿಜಯ ದರ್ಪಣ ನ್ಯೂಸ್….

 ರೋಲ್ಸ್ ರಾಯ್ಸ್ ಸರಿಸಾಟಿಯಿಲ್ಲದ ಲಕ್ಸುರಿ:
ಭಾರತಕ್ಕೆ ಆಗಮಿಸಿದ ರೋಲ್ಸ್ ರಾಯ್ಸ್ ಘೋಸ್ಟ್ ಸೀರೀಸ್ II

ನವದೆಹಲಿ ಗುರುವಾರ, 5 ಫೆಬ್ರವರಿ 2025, ಭಾರತ
•ಭಾರತದಲ್ಲಿ ದಿ ಘೋಸ್ಟ್ ಸೀರೀಸ್ II ಅನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್ : ಇದು ಇದುವರೆಗಿನ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಮತ್ತು ಚಾಲಕ-ಕೇಂದ್ರಿತ V12 ರೋಲ್ಸ್ ರಾಯ್ಸ್ ಆಗಿದ್ದು, ಘೋಸ್ಟ್ ಸೀರೀಸ್ II ಅನ್ನು ಈಗ ರೋಲ್ಸ್ ರಾಯ್ಸ್‌ನ ಚೆನ್ನೈ ಮತ್ತು ನವದೆಹಲಿ ಶೋ ರೂಂಗಳಲ್ಲಿ ಆರ್ಡರ್ ಮಾಡಲು ಲಭ್ಯವಿದೆ.

• ಇದರ ನವೀನ ಬಾಹ್ಯ ಸ್ಟೈಲಿಂಗ್, ಘೋಸ್ಟ್‌ನ ಬೇಸಿಕ್ ವಿನ್ಯಾಸದ ಪ್ರಭಾವಶಾಲಿ ವಿಕಸನವೇ ಆಗಿದೆ.
• ಸಾಟಿಯಿಲ್ಲದ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಸೇರಿದಂತೆ, ಅದ್ಭುತ ಚಾಲನೆಯನ್ನೇ ಹೃದಯಭಾಗದಲ್ಲಿ ಹೊಂದಿರುವಂತೆ ನಿರ್ಮಿಸಲಾಗಿದೆ.
• ಪ್ಲಾನರ್ ಸಸ್ಪೆನ್ಷನ್ ಸಿಸ್ಟಮ್, ಫ್ಲ್ಯಾಗ್‌ಬೇರರ್ ಮತ್ತು ಸ್ಯಾಟಲೈಟ್ ಏಡೆಡ್ ಟ್ರಾನ್ಸ್‌ಮಿಷನ್ ಸಿಸ್ಟಮ್‌ಗಳನ್ನು ಹೊಂದಿರುವುದರ ಜೊತೆಗೆ ಚಾಲಕರಿಗೆ ಅನುಕೂಲಕರವಾದ ಚಾಸಿಸ್‌ ಹೊಂದಿದೆ.
• ಹೊಸ SPIRIT ಡಿಜಿಟಲ್ ಇಂಟರ್ಫೇಸ್ ಮತ್ತು ವಿಸ್ಪರ್ಸ್ ಪ್ರೈವೇಟ್ ಮೆಂಬರ್ಸ್ ಅಪ್ಲಿಕೇಶನ್ ಜೊತೆ ಸಂಯೋಜನೆ ಹೊಂದಿದೆ.
• ವರ್ಧಿತ ಆಡಿಯೊ ಸಿಸ್ಟಮ್, ಇಂಟರ್ನೆಟ್ ಸಂಪರ್ಕ ಮತ್ತು ವೀಡಿಯೊ ಸ್ಟ್ರೀಮಿಂಗ್ ಕಾರ್ಯಗಳನ್ನು ಸಂಯೋಜಿಸುತ್ತದೆ.
• ಘೋಸ್ಟ್‌ನ ವಿಸ್ತೃತ ಸೀರಿಸ್ II, ಸೃಜನಶೀಲತೆಗೆ ಇನ್ನೂ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ.
• ಬ್ಲ್ಯಾಕ್ ಬ್ಯಾಡ್ಜ್ ಘೋಸ್ಟ್ ಸೀರಿಸ್ II ಮತ್ತು ಘೋಸ್ಟ್ ಸೀರಿಸ್ II ಆವೃತ್ತಿಗಳು ಬಿಡುಗಡೆಯಾದ ದಿನದಿಂದಲೇ, ಕಮಿಷನ್ ಮಾಡಲು ಲಭ್ಯವಿವೆ.

ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್‌ನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯವಾದ ಘೋಸ್ಟ್ ಸೀರಿಸ್ II ನ, ಇತ್ತೀಚಿನ ವಿಕಸಿತ ಆವೃತ್ತಿಯು ಈಗ ಭಾರತದಲ್ಲಿ ಲಭ್ಯವಿದೆ. ಪ್ರಬಲ, ಚಾಲಕ-ಆಧಾರಿತ ಮತ್ತು ಸೊಗಸಾದ ವಿನ್ಯಾಸ ಹೊಂದಿದ, ಘೋಸ್ಟ್‌ನ ಅಖಂಡ ಮತ್ತು ಸೂಕ್ಷ್ಮ ಬಾಹ್ಯ ನೋಟದ ವಿಕಸನವು, ನಿರ್ದಿಷ್ಟ ಗ್ರಾಹಕರ ಮನಸೆಳೆಯಲು ಪ್ರಬಲ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ತಮ್ಮ ಆಯ್ಕೆಗಳನ್ನು ವಿಸ್ತರಿಸಲು, ಗ್ರಾಹಕರು ಈಗ ಘೋಸ್ಟ್‌ನಲ್ಲಿ ಹಿಂದೆಂದೂ ಲಭ್ಯವಿಲ್ಲದ ಒಳಾಂಗಣ ವಿನ್ಯಾಸಗಳನ್ನು ಮತ್ತು ವೈಶಿಷ್ಟ್ಯಗಳನ್ನು ತಮಿಷ್ಟದಂತಯೇ ಡಿಸೈನ್ ಮಾಡಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ, ಜೊತೆಗೆ ಗ್ರಾಹಕರು ಡಿಜಿಟಲ್ ಜಗತ್ತಿನಲ್ಲಿಯೂ ಕಸ್ಟಮೈಸ್ ಮಾಡಿಕೊಳ್ಳಲು ಸುಧಾರಿತ ಸಾಫ್ಟ್‌ವೇರ್ ತಂತ್ರಜ್ಞಾನಗಳನ್ನು ಹೊಂದಿದೆ.

“ನಮ್ಮ ಗ್ರಾಹಕರು ಘೋಸ್ಟ್‌ನ ನಿರ್ವಹಣಾ ಸಾಮರ್ಥ್ಯಗಳು ಮತ್ತು ಕಸ್ಟಮೈಸ್ ಆಗುವ ಅದರ ಸಾಮರ್ಥ್ಯವನ್ನು ನಿಜವಾಗಿಯೂ ಮೆಚ್ಚುತ್ತಾರೆ. ಘೋಸ್ಟ್ ಸೀರೀಸ್ II ಅದರ ತತ್ವಗಳಿಗೆ ಬದ್ಧವಾಗಿ ಉಳಿದಿದ್ದೂ, ಪ್ರತಿಯೊಂದು ಅಂಶದಲ್ಲಿಯೂ ತನ್ನ ಉಪಸ್ಥಿತಿಯನ್ನು ಉನ್ನತೀಕರಿಸುತ್ತದೆ. ಇದು ಇದುವರೆಗೆ ರಚಿಸಲಾದ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಮತ್ತು ಚಾಲಕ-ಕೇಂದ್ರಿತ V12 ರೋಲ್ಸ್ ರಾಯ್ಸ್ ಆಗಿದೆ, ಮತ್ತು ಇದರ ಸದೃಢ ನೋಟವು ಘೋಸ್ಟ್‌ನ್ನು ಸೃಜನಾತ್ಮಕವಾಗಿ ರಚಿಸಲು ಪ್ರಬಲ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಾ, ಇದು ಪರಿಪೂರ್ಣ ಚಾಲಕ-ಕೇಂದ್ರಿತ ವಾಹನವನ್ನಾಗಿ ಮಾಡಲಿದೆ. ಈ ಬ್ರ್ಯಾಂಡ್ ಭಾರತದಲ್ಲಿನ ಅತ್ಯಂತ ಅಪೇಕ್ಷಣೀಯ ಐಷಾರಾಮಿ ಬ್ರಾಂಡ್ ಆಗಿ ತನ್ನ ಸ್ಥಾನವನ್ನು ಪುನರುಚ್ಚರಿಸಿದ್ದು, 2024 ರಲ್ಲಿ ಮಾರುಕಟ್ಟೆಯು ಸುಮಾರು ಮೂರನೇ ಒಂದು ಭಾಗದಷ್ಟು ವಿಸ್ತರಣೆಯಾಗಿದೆ. ಈಗ ಘೋಸ್ಟ್ ಸೀರೀಸ್ II ಭಾರತದಲ್ಲಿ ಲಭ್ಯವಿರುವುದರಿಂದ, ಗ್ರಾಹಕರು ಹೆಚ್ಚು ಮಹತ್ವಾಕಾಂಕ್ಷೆಯ ಮತ್ತು ಮೌಲ್ಯಯುತವಾದ ಮೋಟಾರ್ ಕಾರುಗಳನ್ನು ಹೊಂದಲು ಉತ್ಸುಕರಾಗುತ್ತಾರೆ ಎಂದು ನಾನು ನಂಬುತ್ತೇನೆ” ಎಂದು ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್‌ನ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕಿ ಐರಿನ್ ನಿಕ್ಕಿನ್ ಹೇಳಿದರು.

ಭಾರತದಲ್ಲಿ ಈಗ ಘೋಸ್ಟ್ ಸೀರೀಸ್ II ನ ಮೂರು ಆವೃತ್ತಿಗಳು ಲಭ್ಯವಿವೆ.

ಘೋಸ್ಟ್ ಸೀರೀಸ್ II, ಬ್ಲ್ಯಾಕ್ ಬ್ಯಾಡ್ಜ್ ಘೋಸ್ಟ್ ಸೀರೀಸ್ II ಮತ್ತು ಘೋಸ್ಟ್ ವಿಸ್ತೃತ ಸೀರೀಸ್ II, ಈಗ ರೋಲ್ಸ್ ರಾಯ್ಸ್‌ನ ಚೆನ್ನೈ ಮತ್ತು ನವದೆಹಲಿ ಶೋ ರೂಂಗಳಲ್ಲಿ ಆರ್ಡರ್ ಮಾಡಲು ಲಭ್ಯವಿದೆ.

ರೋಲ್ಸ್ ರಾಯ್ಸ್ ಬೆಲೆ ಗ್ರಾಹಕರ ಅಗತ್ಯತೆಗಳ ಮೇಲೆ ಅವಲಂಬಿಸಿರುತ್ತದೆ. ಪ್ರಾರಂಭಿಕ ಬೆಲೆಗಳು ಕೆಳಗಿನಂತಿವೆ
ಘೋಸ್ಟ್ ಸೀರೀಸ್ II – ರೂ. 8,95,00,000
ಘೋಸ್ಟ್ ವಿಸ್ತೃತ ಸೀರೀಸ್ II – ರೂ. 10,19,00,000
ಬ್ಲ್ಯಾಕ್ ಬ್ಯಾಡ್ಜ್ ಘೋಸ್ಟ್ ಸೀರೀಸ್ II – ರೂ. 10,52,00,000

ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಕಿಸಿ:
ಎಸ್. ದಿನೇಶ್,
ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್, ಚೆನ್ನೈ,
ನಂ. 20, ಗ್ರಾನ್ಸ್ ಸದರ್ನ್ ಟ್ರಂಕ್ ರಸ್ತೆ, ಮೀನಂಬಕ್ಕಂ, ಚೆನ್ನೈ, ತಮಿಳುನಾಡು 600027
+91 95519 20000

&&&&&&&&&&&&&&&&

ಮೇನಕೆ

ಹಾಲು ಹುಣ್ಣುಮೆ ಬೆಳಕಲಿ ಮಿಂದು ಬಂದಳೆ ಮೇನಕೆ
ಓರೆ ನೋಟದಿ ಮನವನು ಸೂರೆಗೊಂಡ ಚಂಚಲೆ

ಒಲವು ತುಂಬಿದ ಭಾವಕೆ ಮೆರುಗು ತುಂಬಿದ ದೇವತೆ
ಪ್ರೇಮ ಮುದ್ರೆಯ ಹೃದಯದಿ ಇಟ್ಟು ಹೋದಳು ಏತಕೆ

ನೂರು ವೀಣೆಯ ಮಿಡಿತವ ಎದೆಗೆ ತಂದಿಹ ಬಾಲಿಕೆ
ಮೌನದಿಂದಲೆ ಕಣ್ಣಲಿ ಕವಿತೆ ಹಾಡಿದ ದೀಪಿಕೆ

ಕಂಡ ಕನಸಿಗೆ ಮುನ್ನುಡಿ ಬರೆದು ಉಳಿಸಿದಳೆನ್ನನು
ಬರಡು ಜೀವದ ಹಾದಿಗೆ ಕುಸುಮ ಹಾಸಿದ ಕೋಮಲೆ

ಮಂಜು ಮುಸುಕಿದ ಮನಸಿಗೆ ತುಂಬಿತು ಹೊಸ ಹೊಸ ಕಲ್ಪನೆ
ಸಾಲು ಸಾಲಿನ ಪದದಲಿ ನಿಲುಕದಿವಳ ವರ್ಣನೆ

ನೂರು ಕಾಲವು ನೆನಪಲಿ ಉಳಿವ ಚೆಲು ಮಾಯಾಂಗನೆ
ಸ್ವಪ್ನಲೋಕವ ಧರೆಯಲಿ ತಂದನೇನು ಬ್ರಹ್ಮನೆ

ರಾಧಿಕಾ ವಿಶ್ವನಾಥ್, ಮಡಿಕೇರಿ