ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಜನಸೇವಕ ಕಾರ್ಯಕ್ರಮದ ವಿಶೇಷ: ಶಾಸಕ ಎಸ್.ಸುರೇಶ್ ಕುಮಾರ್

ವಿಜಯ ದರ್ಪಣ ನ್ಯೂಸ್….

ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಜನಸೇವಕ ಕಾರ್ಯಕ್ರಮದ ವಿಶೇಷ: ಶಾಸಕ ಎಸ್.ಸುರೇಶ್ ಕುಮಾರ್

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ  ಶಾಸಕರ ಜನಸಂಪರ್ಕ ಕಛೇರಿ ಅವರಣದಲ್ಲಿ ಪ್ರತಿ ಸೋಮವಾರ ನಾಲ್ಕನೇಯ ಕಾರ್ಯಕ್ರಮ ಜನರೊಂದಿಗೆ ಜನಸೇವಕ.

ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಜನರೊಂದಿಗೆ ಜನಸೇವಕ ಕಾರ್ಯಕ್ರಮದಲ್ಲಿ ಸಾರ್ವಜನಿಕರ 40ಕ್ಕೂ ಹೆಚ್ಚು ದೂರುಗಳಿಗೆ ಸ್ಪಂದಿಸಿ, ಪರಿಹಾರಕ್ಕೆ ಕ್ರಮ ಕೈಗೊಂಡರು.

ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ನಾಗರಿಕರು ಬಂದು ತಮ್ಮ ಸಮಸ್ಯೆಗಳಿಗೆ ಅಹವಾಲು ಸಲ್ಲಿಸಲು ಶಾಸಕರ ಜನ ಸಂಪರ್ಕ ಕಛೇರಿ ಹತ್ತಿರದಲ್ಲಿ ಇದೆ.

ಕಸ ವಿಲೇವಾರಿ ಸಮಸ್ಯೆ ಸಮರ್ಪಕವಾಗಿ ನಡೆಯುತ್ತಿದೆ ಮತ್ತು ಬಸವೇಶ್ವರನಗರ ಪ್ರಮುಖ ರಸ್ತೆಯಲ್ಲಿ ಹೈಮಾಸ್ಕ್ ದೀಪ ಬೇಕು ಎಂಬ ಮನವಿ ಸಲ್ಲಿಸಿದ್ದಾರೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆಗಳು ಉಂಟಾಗುತ್ತಿದೆ, ಪೈಪ್ ಲೈನ್ ಪರಿಶೀಲನೆ ಮಾಡಲು ಜಲಮಂಡಳಿ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಅವರ ಆರೋಗ್ಯ ಜೊತೆಯಲ್ಲಿ ಸಾರ್ವಜನಿಕರ ಆರೋಗ್ಯ ಸಹ ಹದಗೆಡುತ್ತದೆ ಇದರ ಕುರಿತು ಕ್ರಮಕ್ಕೆ ಪೊಲೀಸ್ ಇಲಾಖೆ ತಿಳಿಸಲಾಗಿದೆ.

ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳು, ನಮ್ಮ ಕಾರ್ಯಕರ್ತರು ಭೇಟಿ ನೀಡುತ್ತಾರೆ.
ದಯಾನಂದನಗರ ವಾರ್ಡ್ ನಲ್ಲಿರುವ ರೆಫರಲ್ ಆಸ್ಪತ್ರೆಯಲ್ಲಿ ಸುಲಭ ಶೌಚಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.

ಕೆ.ಪಿ.ಎಸ್.ಸಿ.ವಾಣಿಜ್ಯ ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಹುದ್ದೆ ಪರೀಕ್ಷೆ ಬರೆದರು, ಇನ್ನು ಫಲಿತಾಂಶ ಬಂದಲ್ಲಿ ಎಂದು ಯುವಕರು ದೂರು ಹೇಳಿದ್ದಾರೆ ಕೆ.ಪಿ.ಎಸ್.ಸಿ.ಫಲಿತಾಂಶ ಪ್ರಕಟನೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ನೇರ ಭೇಟಿ ಮಾಡಿ ಒತ್ತಾಯ ಮಾಡಲಾಗುವುದು.

ಜನರ ನೇರ ಭೇಟಿಯಿಂದ ಸಮಸ್ಯೆಗಳು ಬೇಗನೆ ಪರಿಹಾರ ಸಿಗುತ್ತದೆ, ಸಾರ್ವಜನಿಕರ ಸಹ ಉತ್ತಮ ಸ್ಪಂದನೆ, ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಕಾರ್ಮಿಕ ಕಲ್ಯಾಣ ಇಲಾಖೆಯ ಗಾರೆಕೆಲಸ ಮತ್ತು ವೇಲ್ಡಿಂಗ್ ಕೆಲಸ ಮಾಡುವವರಿಗೆ ಕಿಟ್ ಗಳನ್ನು ವಿತರಿಸಲಾಯಿತು

ಮಂಡಲ ಅಧ್ಯಕ್ಷ ಸುದರ್ಶನ್, ಮಾಜಿ ಬಿಬಿಎಂಪಿ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ ಮತ್ತು ಬಿಬಿಎಂಪಿ , ಜಲಮಂಡಳಿ ಮತ್ತು ಬೆಸ್ಕಾಂ, ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.