ಅರದೇಶನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಜೆಡಿಎಸ್-ಬಿಜೆಪಿ ಜಯಭೇರಿ

ವಿಜಯ ದರ್ಪಣ ನ್ಯೂಸ್…

ಅರದೇಶನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಜೆಡಿಎಸ್-ಬಿಜೆಪಿ ಜಯಭೇರಿ

 

ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ: ತಾಲೂಕಿನ ಅರದೇಶನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ 12 ಸ್ಥಾನದ ಪೈಕಿ 1 ಸ್ಥಾನ ಅವಿರೋಧವಾಗಿ  ಆಯ್ಕೆಗೊಂಡಿದ್ದು , ಉಳಿದ 11 ಸ್ಥಾನಕ್ಕೆ ಚುನಾವಣೆ ನಡೆಯಿತು .

ಚುನಾವಣೆಯಲ್ಲಿ ಸಾಮಾನ್ಯ ಮೀಸಲು ಕ್ಷೇತ್ರದಿಂದ ಚನ್ನಪ್ಪ.ಕೆ (35), ದೇವರಾಜು.ಕೆ (35),  ಪ್ರತಾಪ್.ಪಿ,(34) , ಪಾಪಣ್ಣ ಡಿ(33), ಶ್ರೀಧರ್ (33) ಬಚ್ಚಪ್ಪ  (27),

ಮಹಿಳಾ ಮೀಸಲು ಸ್ಥಾನದಿಂದ ನೇತ್ರಾವತಿ(29), ಶಶಿಕಲಾ.ಎನ್.ಸಿ(28),

ಹಿಂದುಳಿದ ವರ್ಗ -ಎ ಮೀಸಲು ಸ್ಥಾನದಿಂದ ಶ್ರೀನಿವಾಸ್ ಮೂರ್ತಿ (32), ಹಿಂದುಳಿದ ವರ್ಗ-ಬಿ ಮೀಸಲು ಸ್ಥಾನದಿಂದ ಮಂಜುನಾಥ್ (30),

ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಮುನಿರತ್ನಮ್ಮ (32) ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ , ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸತೀಶ್ ಅವಿರೋಧ  ಆಯ್ಕೆಯಾಗಿದ್ದಾರೆ  ಎಂದು ಚುನಾವಣಾಧಿಕಾರಿ ಆರ್. ಚೇತನಾ ಘೋಷಿಸಿದರು.

ಜಾಲಿಗೆ ಗ್ರಾಪಂ ಸದಸ್ಯ ಕೆಂಪರಾಜು ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ
ಚುನಾವಣೆಯಲ್ಲಿ 12 ಸ್ಥಾನಕ್ಕೆ 12 ಸ್ಥಾನವು ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ನೂತನ ನಿರ್ದೇಶಕರು ಸಂಘದ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಬೇಕು. ಹಾಲು ಉತ್ಪಾದಕರು ಸಂಘಕ್ಕೆ ಶುದ್ಧ ಮತ್ತು ಗುಣಮಟ್ಟದ ಹಾಲನ್ನು ಸರಬರಾಜು ಮಾಡಲು  ಬೆಂಗಳೂರು ಸಹಕಾರಿ ಹಾಲು ಒಕ್ಕೂಟದಿಂದ ದೊರೆಯುವ  ಸೌಲಭ್ಯಗಳನ್ನು ಹಾಲು ಉತ್ಪಾದಕರಿಗೆ ಸಿಗುವಂತೆ ಮಾಡಬೇಕು. ಹಾಲು ಉತ್ಪಾದಕರು ಯಶಸ್ವಿನಿ ವಿಮೆ , ರಾಸುಗಳಿಗೆ ವಿಮೆ ಮಾಡಿಸಬೇಕು ಎಂದು ತಿಳಿಸಿದರು. ಚುನಾವಣೆಯಲ್ಲಿ  ಆಯ್ಕೆಯಾದ ಎಲ್ಲಾ ನಿರ್ದೇಶಕರುಗಳನ್ನು ಅಭಿನಂದಿಸುತ್ತೇನೆ ಎಂದರು.

 

 

ಇದೇ ಸಂದರ್ಭದಲ್ಲಿ ದೇವನಹಳ್ಳಿ ತಾಲೂಕು ಟಿ ಎ ಪಿ ಸಿ ಎಂ ಎಸ್ ನಿರ್ದೇಶಕ ಕಾಮೇನಹಳ್ಳಿ ರಮೇಶ್, ಅರದೇಶನಹಳ್ಳಿ ದೊಡ್ಡೇಗೌಡ, ಜೆಡಿಎಸ್ ಕಾಯಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಎನ್.ಆನಂದ್, ಅಪ್ಪಯ್ಯ, ರಂಗಸ್ವಾಮಿ, , ವೆಂಕಟೇಶ್, ಚಂದ್ರಶೇಖರ್, ಮೋಹನ್ ಕುಮಾರ್, ವಿ.ನಾಗೇಶ್, ಎ.ಪಿ.ನಾಗೇಶ್, ಸಿ.ರಾಜಣ್ಣ, ಮಹೇಶ್, ದೊಡ್ಡಣ್ಣ, ಎ.ರಾಮಣ್ಣ  ಅವರುಗಳು ವಿಜೇತರನ್ನು ಅಭಿನಂದಿಸಿದರು.