ಬೆಂಗಳೂರಿನ ಲುಲು ಮಾಲ್ನಲ್ಲಿ ಎರಡನೇ ಮಳಿಗೆಯನ್ನು ಪ್ರಾರಂಭಿಸಿದ ಶ್ರೀ ಜಗದಂಬಾ ಪರ್ಲ್ಸ್

ವಿಜಯ ದರ್ಪಣ ನ್ಯೂಸ್….

ತನ್ನ ಉಪಸ್ಥಿತಿಯನ್ನು ಮತ್ತಷ್ಟು ವಿಸ್ತರಿಸುತ್ತಾ,…..

ಬೆಂಗಳೂರಿನ ಲುಲು ಮಾಲ್ನಲ್ಲಿ ಎರಡನೇ ಮಳಿಗೆಯನ್ನು ಪ್ರಾರಂಭಿಸಿದ ಶ್ರೀ ಜಗದಂಬಾ ಪರ್ಲ್ಸ್

ಬೆಂಗಳೂರು : ಕಾಲಾತೀತ ಕರಕುಶಲತೆ ಮತ್ತು ಸೊಗಸಾದ ಆಭರಣಗಳಿಗೆ ಹೆಸರುವಾಸಿಯಾಗಿರುವ ಶ್ರೀ ಜಗದಂಬಾ ಪರ್ಲ್ಸ್, ಬೆಂಗಳೂರು ನಗರದ ಪ್ರಮುಖ ಸ್ಥಳವಾದ ಲುಲು ಮಾಲ್ನಲ್ಲಿ ತನ್ನ ಎರಡನೇ ಮಳಿಗೆಯನ್ನು ಹೆಮ್ಮೆಯಿಂದ ಉದ್ಘಾಟಿಸಿದೆ. ಈ ಮಹತ್ವದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಜಗದಂಬಾ ಪರ್ಲ್ಸ್ನ ವ್ಯವಸ್ಥಾಪಕ ಪಾಲುದಾರರಾದ ಅವನೀಶ್ ಅಗರ್ವಾಲ್ ಮತ್ತು ಯಶ್ ಅಗರ್ವಾಲ್, ರಿಟೇಲ್ ಮತ್ತು ಮಾರುಕಟ್ಟೆ ಮುಖ್ಯಸ್ಥರಾದ ದೀಪಕ್ ಕುಮಾರ್ ಅವರೊಂದಿಗೆ ಉಪಸ್ಥಿತರಿದ್ದರು.

ಹೊಸದಾಗಿ ಪ್ರಾರಂಭಿಸಲಾದ ಮಳಿಗೆಯು ಅದ್ಭುತವಾದ ಒಳಾಂಗಣಗಳನ್ನು ಹೊಂದಿದ್ದು, ಆಧುನಿಕತೆಯೊಂದಿಗೆ ಮನಮೋಹಕ ಸೊಬಗನ್ನು ಸಲೀಸಾಗಿ ಸಂಯೋಜಿಸುತ್ತದೆ. ಬ್ರ್ಯಾಂಡ್ನ ಹಿರಿಮೆ ಮತ್ತು ನಾವೀನ್ಯತೆಯ ಪರಂಪರೆಯನ್ನು ಪ್ರತಿಬಿಂಬಿಸುತ್ತಾ, ಇದು ಸೊಗಸಾದ ಶ್ರೇಣಿಯ ಚಿನ್ನ, ವಜ್ರ ಮತ್ತು ಮುತ್ತಿನ ಆಭರಣಗಳನ್ನು ಪ್ರದರ್ಶಿಸುತ್ತದೆ. ತಲ್ಲೀನಗೊಳಿಸುವ ಶಾಪಿಂಗ್ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಈ ಅಂಗಡಿಯು ಸಮಕಾಲೀನ ಆಕರ್ಷಣೆಯೊಂದಿಗೆ ಕಾಲಾತೀತ ಕಲಾತ್ಮಕತೆಯನ್ನು ಹೊಂದಿರುವ ಆಭರಣಗಳ ಸಂಗ್ರಹವನ್ನು ಅನ್ವೇಷಿಸಲು ಗ್ರಾಹಕರನ್ನು ಆಹ್ವಾನಿಸುತ್ತದೆ.

ಉದ್ಘಾಟನೆಯ ಕುರಿತು ಪ್ರತಿಕ್ರಿಯಿಸಿದ ಅವನೀಶ್ ಅಗರ್ವಾಲ್, “ ನಮ್ಮ ಮೊದಲ ಮಳಿಗೆಯು ಹೆಚ್ಚು ಸದ್ದಿಲ್ಲದೇ ಬೆಂಗಳೂರಿನ ಫೋರಂ ಸೌತ್ನಲ್ಲಿ ಆರಂಭವಾಯಿತು. ಗ್ರಾಹಕರ ಅಗಾಧ ಪ್ರತಿಕ್ರಿಯೆ ಮತ್ತು ಉತ್ಸಾಹದ ಮೂಲಕ ಆರಂಭವಾಗುತ್ತಿರುವ ನಮ್ಮ ಎರಡನೇ ಚಿಲ್ಲರೆ ಮಳಿಗೆಯನ್ನು ನಗರದ ಲುಲು ಮಾಲ್ನಲ್ಲಿ ತೆರೆಯಲು ನಾವು ಅಪಾರ ಹೆಮ್ಮೆಪಡುತ್ತೇವೆ. ಸಾಟಿಯಿಲ್ಲದ ವ್ಯಾಪಾರ ಅನುಭವವನ್ನು ನೀಡಲು ಸಮರ್ಪಿತವಾಗಿರುವ ನಮ್ಮ ತಂಡವು, ವೈಯಕ್ತಿಕಗೊಳಿಸಿದ ಸೇವೆ ಮತ್ತು ಗ್ರಾಹಕೀಕರಣದೊಂದಿಗೆ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ” ಎಂದರು.

ಮಾರಾಟದ ಸೀಸನ್ ಅಂತ್ಯವಾಗುತ್ತಿರುವ ಹಿನ್ನಲೆಯಲ್ಲಿ, ಶ್ರೀ ಜಗದಂಬಾ ಪರ್ಲ್ಸ್, ಗ್ರಾಹಕರಿಗೆ ಅತ್ಯಾಕರ್ಷಕ ಖರೀದಿಯ ‘ ಒಂದು ಕೊಂಡರೆ ಒಂದು ಉಚಿತ’ ಆಫರ್ ನ ಲಾಭ ಪಡೆಯಲು ಆಹ್ವಾನಿಸುತ್ತಿದೆ. ಈ ಆಫರ್ 20ನೇ ಡಿಸೆಂಬರ್ 2024 ರಿಂದ 5 ಜನವರಿ 2025 ರವರೆಗೆ ಲಭ್ಯವಿರಲಿದೆ. ಈ ವಿಶೇಷ ಆಫರ್, ಕೊಡುಗೆಯ ಈ ಋತುವನ್ನು ಸೊಬಗು, ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯನ್ನು ಹೊಂದಿರುವ ಟೈಮ್ಲೆಸ್ ಆಭರಣಗಳ ಜೊತೆ ಆಚರಿಸುವ ಪರಿಪೂರ್ಣ ಅವಕಾಶವನ್ನು ಒದಗಿಸುತ್ತದೆ. ನೀವು ನಿಮಗಾಗಿ ಶಾಪಿಂಗ್ ಮಾಡುತ್ತಿರಲಿ ಅಥವಾ ನಿಮ್ಮವರಿಗಾಗಿ ಆದರ್ಶ ಉಡುಗೊರೆಯನ್ನು ಹುಡುಕುತ್ತಿರಲಿ, ಈ ಸಂಗ್ರಹವು ಎಲ್ಲರಿಗೂ ಒಂದು ವಿಶೇಷವಾದದ್ದನ್ನು ನೀಡುವ ಭರವಸೆಯನ್ನು ಒದಗಿಸುತ್ತದೆ.