ಗಾಂಧೀಜಿ ರವರು ನಡೆಸಿದ ದಂಡಿ ಸತ್ಯಾಗ್ರಹದ ರಸ್ತೆಯ ಅಭಿವೃದ್ಧಿ ಮಾಡಿದ್ದು ನನ್ನ ಪುಣ್ಯದ ಕೆಲಸ: ಸಚಿವ ಕೆ ಹೆಚ್. ಮುನಿಯಪ್ಪ
ವಿಜಯ ದರ್ಪಣ ನ್ಯೂಸ್….
ಗಾಂಧೀಜಿ ರವರು ನಡೆಸಿದ ದಂಡಿ ಸತ್ಯಾಗ್ರಹದ ರಸ್ತೆಯ ಅಭಿವೃದ್ಧಿ ಮಾಡಿದ್ದು ನನ್ನ ಪುಣ್ಯದ ಕೆಲಸ: ಸಚಿವ ಕೆಹೆಚ್. ಮುನಿಯಪ್ಪ.
ಬೆಳಗಾವಿ:ವಿಧಾನ ಪರಿಷತ್.16 :ಮಹಾತ್ಮಾ ಗಾಂಧೀಜಿ ಯವರ ಪ್ರೇರಣೆಯಿಂದ ಕರ್ನಾಟಕ ರಾಜ್ಯದ ಒಂದು ಸಣ್ಣ ಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆ ಇದು ಮೊದಲು ಅವಿಭಾಜ್ಯ ಜಿಲ್ಲೆಯಾದಂತಹ ಕೋಲಾರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕಂಬದಳ್ಳಿ ಗ್ರಾಮದಿಂದ 25 ಮನೆಯಿಂದ 1930 ರಲ್ಲಿ .20 ಜನ ಸ್ವಾತಂತ್ರ್ಯ ಹೋರಾಟಗಾರರು ಮುನಿಸ್ವಾಮಿ ಗೌಡ ರವರ ನೇತೃತ್ವದಲ್ಲಿ ಹೋರಾಟವನ್ನು ಮಾಡಿದರು
ನಮ್ಮ ತಂದೆಯವರು ಹನುಮಪ್ಪ ಅವರ ಪ್ರೇರಣೆಯಿಂದ ಬಹುತೇಕ ಕರ್ನಾಟಕ ರಾಜ್ಯದಲ್ಲಿ ಒಂದು ಹಳ್ಳಿಯಲ್ಲಿ 25 ಮನೆಗಳಿದ್ದರೆ 20 ಜನ ಸ್ವಾತಂತ್ರ್ಯ ಹೋರಾಟ ಹೋಗಿದ್ರೆ ನನಗೆ ಗೊತ್ತಿದ್ದಂಗೆ ಇದು ಮೊದಲನೇಹಳ್ಳಿ ಅಂತ ಭಾವಿಸಿ ಆ ಪ್ರೇರಣೆಯಿಂದ ಸಾಕಷ್ಟು ಜನ ಈ ಗಾಂಧೀಜಿ ಅವರ ಹಾಡುಗಳನ್ನು ಹೇಳುತ್ತ ಅವರ ಕಾರ್ಯಕ್ರಮ ಹೇಳುತ್ತ ನಿರಂತರವಾಗಿ ನಮ್ಮ ಗ್ರಾಮದಲ್ಲಿ ಕಾರ್ಯಕ್ರಮದಲ್ಲಿರುತ್ತಾರೆ
ನಾನು ಕೇಂದ್ರದಲ್ಲಿ ಭುಸಾರಿಗೆ ಮಂತ್ರಿ ಆದಾಗ ನನಗೊಂದು ಅವಕಾಶ ಸಬರಮತಿ ಆಶ್ರಮದಲ್ಲಿ ಗಾಂಧೀಜಿ ಅವರ ಪ್ರಯಾಣ ಮಾಡ್ತಾರೆ ಪಾದಯಾತ್ರೆ ದಂಡಿಗೆ 388 ಕಿಲೋ ಮೀಟರ್ ಪಾದಯಾತ್ರೆ ಮಾಡುತ್ತಾರೆ ಆ ಪಾದಯಾತ್ರೆಯ ರಸ್ತೆಯನ್ನು ನಮ್ಮ ದಿವಂಗತ ಅಹ್ಮದ್ ಪಟೇಲ್ ಅವರು ಬಳಿಕ ಅಡ್ವೈಸರ್ ಆಗಿ ಸೋನಿಯಾ ಗಾಂಧಿ ಅವರಿಗೆ ಕೆಲಸ ಮಾಡ್ತಾ ಇದ್ದಾರೆ.
2009 ರಲ್ಲಿ ನನಗೊಂದು ಆದೇಶ ಕೊಟ್ಟ ಮಹಾತ್ಮ ಗಾಂಧಿ ಅವರು ಪಾದಯಾತ್ರೆ ಮಾಡಿದ ರಸ್ತೆಯನ್ನು ಕಟ್ಟಬೇಕು ಅದಕ್ಕೆ ಶಿಲಾನ್ಯಾಸ ಮಾಡ ಬೇಕು ಎಂದರು.
ನಾನು ಅಲ್ಲಿ ಹೋದಾಗ ಒಂದು ಘಟನೆ ಆಯಿತು. ಅದಕ್ಕೆ ಅದನ್ನ ಹೇಳ್ತಾ ಇದ್ದೆ ನಾನು ಹೋಗಿ ಆ ರಸ್ತೆಗೆ ಶಿಲಾನ್ಯಾಸ ಮಾಡಿದೆ.
ಆ ಸಂದರ್ಭದಲ್ಲಿ 10,000 ಜನ ಸೇರುತ್ತಾರೆ. ಅಲ್ಲಿ ಆಗ ಮಹಾತ್ಮಾ ಗಾಂಧೀಜಿಯವರು ಈ ಭೂಮಿ ನಮ್ಮದು ನೀರು ನಮ್ಮದು ಈ ಉಪ್ಪು ನಮ್ಮದು ಅಂತ ಹೇಳಿ ಹೇಳ್ತಾರೆ.
ಆಗ ಕ್ಲಾಷ್ ಆಗುತ್ತದೆ. 10,000 ಜನ ಜನ ಅಂತಹ ಸಂದರ್ಭದಲ್ಲಿ ಸೇರಿದ್ದಾರೆ. ಸೇರಿದಂತ ಕಾಲದಲ್ಲಿ 13 ರಿಂದ 14 ವರ್ಷದ ಇಬ್ಬರು ಹುಡುಗರು.ಯಾವಾಗ( ಟುಬಾಕಿ) ಬಂದೂಕಿನನಿಂದ ಗಾಂಧೀಜಿ ಕಡೆ ತೋರಿಸ್ತಾರೆ. ಅವರ ರಕ್ಷಣೆಗೆ ಹೋಗಿ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.
ಅವರ ಸ್ಮಾರಕವನ್ನು ಕೂಡ ನಾನು ನೋಡಿ ಗಾಂಧೀಜಿ ಅವರ ವಿಷಯಗಳನ್ನು ಹೇಳಿದಾಗ ಕಣ್ಣಲ್ಲಿ ನೀರು ಬರುತ್ತದೆ. ಒಂದು ಮಾತನ್ನ ಹೇಳ್ತಾರೆ ಬ್ರಿಟಿಷರು ಜೈಲಿನಲ್ಲಿ ದಾಖಲಿಸಿರಿ ಆಗಿರಲಿಲ್ಲ ಎಷ್ಟು ಜನ ಸತ್ತಿದ್ದಾರೆ ಎಷ್ಟು ಜನ ಮುಸಲ್ಮಾನರು ಈ ಭಾರತ ದೇಶದ ಸ್ವಾತಂತ್ರ್ಯಕ್ಕೆ ಪ್ರಾಣ ಬಲಿದಾನ ಮಾಡಿದ್ದಾರೆ. ಗಾಂಧೀಜಿ ಇದ್ದಾರೆ.
ಅವರ ಜೊತೆಯಲ್ಲಿ ಇದ್ರು ಅನ್ನೋದನ್ನ ಸಾಕ್ಷಿಗಳು ಕೂಡ ಇದ್ದರು ಮಾಡಿದ್ದಾರೆ. ಈ ದಂಡಿ ಜಾಗವಾಗಿದೆ.
ಐತಿಹಾಸಿಕ ಸ್ಥಳವಾಗಿ ಮಾಡುವ ಮುಖಾಂತರ . ಗಾಂಧೀಜಿ ಅವರ ತ್ಯಾಗ, ಬಲಿದಾನ ಇವೆಲ್ಲವನ್ನು ಕೂಡ ಜಗತ್ತಿಗೆ ತಿಳಿಸಬೇಕು ಅನ್ನೋ ಮಾತನ್ನು ಹೇಳಿದರು.
ನಾನು ಅದನ್ನ ಕೇಂದ್ರ ಸರ್ಕಾರಕ್ಕೆ ನಮ್ಮ ಪ್ರಧಾನ ಮಂತ್ರಿಗಳು ಆದ ಮನಮೋಹನ್ ಸಿಂಗ್ ಅವರಿಗೆ ಪತ್ರ ಮೂಲಕವೇ ಮಾಹಿತಿ ಕಳುಹಿಸಿದೆ.
ಮಹಾತ್ಮ ಗಾಂಧೀಜಿಯವರು ರೌಂಡ್ ಟೇಬಲ್ ಕಾನ್ಫ್‌ರೆನ್ಸ್‌ನಲ್ಲಿ ಒಂದು ಭಿನ್ನಭಿಪ್ರಾಯ ವಾದಾಗ
ಅಂಬೇಡ್ಕರ್ ಗೆದ್ದಿದ್ದರಿಂದ.ಸ್ವತಂತ್ರ ಭಾರತದಲ್ಲಿ ಜವಹಾರ್ ಲಾಲ್ನಹರೂ ಪ್ರಧಾನ ಮಂತ್ರಿ ಆದಂತ ಕಾಲದಲ್ಲಿ.
ಮಹಾತ್ಮಾ ಗಾಂಧೀಜಿಯನ್ನು ಕೇಳ್ತಾರೆ ಪಂಡಿತ್ ಜವಹರಲಾಲ್ ನೆಹರು ಯಾರನ್ನಮ್ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರಾಗಿ ಮಾಡಬೇಕು ಅಂತ ಗಾಂಧಿ ಅವರು ಸಲಹೆ ಬಂದಾಗ ಅಂಬೇಡ್ಕರ್ ರವರ ಹೆಸರನ್ನು ಸೂಚಿಸಿದರು
ಧರ್ಮಗಳು ಉಪಜಾತಿಗಳು, ಜಾತಿಗಳು ಇವೆಲ್ಲ ಇರೋದ್ರಿಂದ ಬಹಳಷ್ಟು ತುಳಿತಕ್ಕೆ ಸಿಕ್ಕಿ, ಶೋಷಣೆಗೆ ಒಳಗಾಗಿ ಅಸ್ವಸ್ಥರಾಗಿರುವುದರಿಂದ ಇದನ್ನು ಸರಿದೂಗಿಸಬೇಕಾದರೆ ನಮ್ಮ ಮೂಲ ಚಿಂತನೆ.ಸಮಾಜ ಸುಧಾರಣೆ ಸೂಚನೆ ಹೋಗಬೇಕು, ಅಷ್ಟೇ ಹೋಗಬೇಕು ಅಂತ ಇವೆಲ್ಲವನ್ನು ಕಂಡಂತಹ ಮಹಾತ್ಮ ಗಾಂಧೀಜಿ ಹರಿಜನ ಸೇವಾ ಸಂಘವನ್ನು ಕಟ್ಟಿದರು ಆ ಕಾಲದಲ್ಲಿ ಹರಿಜನ ಪತ್ರಿಕೆಯನ್ನ ಶುರು ಮಾಡಿ ಹರಿಜನರ ಶೌಚಾಲಯಗಳನ್ನು ಶುದ್ದೀಕರಣ ಮಾಡಿದರು.
ಇದಕ್ಕಿಂತ ಮಾತುಕತೆ ಯಾರು ಜಗತ್ತಿನಲ್ಲಿ ಮಾಡುತ್ತಾರೆ? ಅವರು ಹೇಳಿದ್ದು ಒಂದೇ ಮಾತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನ ಸಂವಿಧಾನ ರಚನೆ ಮಾಡಲಿಕ್ಕೆ ಅವಕಾಶ ಮಾಡಿಕೊಡಬೇಕು ಅಂತ ಅವರ ಸಲಹೆ ಮಾಡುತ್ತಾರೆ.
ವೈಯಕ್ತಿಕವಾಗಿ ಸಮಿತಿ ಇದ್ದರೂ ಕೂಡ ತನ್ನದೇ ಆದಂತ ತ್ಯಾಗ ಮಾಡಿ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು ಜಾರಿಗೊಳಿಸಿದರು
ಗಾಂದೀಜಿಯವರ ಸಿದ್ದಾಂತವನ್ನು ಅಳವಡಿಸಿಕೊಂಡರೆ ಈ ದೇಶ ರಾಮರಾಜ್ಯವಾಗುತ್ತದೆ.
ಅಂಬೇಡ್ಕರ್ ಮತ್ತು ಗಾಂಧಿಯವರು ಈ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಸದನದಲ್ಲಿ ಸಚಿವರು ಹೇಳಿದರು.