ಇಂದಿನ ಯುವ ಪೀಳಿಗೆ ನಾಡು ನುಡಿ ಸಂಸ್ಕೃತಿಯ ಇತಿಹಾಸವನ್ನು ಅರಿತು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು .

ವಿಜಯ ದರ್ಪಣ ನ್ಯೂಸ್…..

ಕನಕಪುರ ರಾಮನಗರ ಜಿಲ್ಲೆ: ಇಂದಿನ ಯುವ ಪೀಳಿಗೆ ನಾಡು ನುಡಿ ಸಂಸ್ಕೃತಿಯ ಇತಿಹಾಸವನ್ನು ಅರಿತು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಕನಕಪುರ ತಾಲೂಕು ಶಾಖೆಯ ಅಧ್ಯಕ್ಷ  ಮಹದೇವರಾವ್ ತಿಳಿಸಿದರು.

ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ ಕಾಲೇಜು, ಕೋಡಿಹಳ್ಳಿ ಸಭಾಂಗಣದಲ್ಲಿ ಸರ್ಕಾರಿ ಪದವಿ ಕಾಲೇಜು ಕೋಡಿಹಳ್ಳಿ ಹಾಗೂ ಕನಕಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದಿ.25/11/2024 ಸೋಮವಾರ ಹಮ್ಮಿಕೊಂಡಿದ್ದ ವರ್ಗಾವಣೆಗೊಂಡ ಉಪನ್ಯಾಸಕರ ಬೀಳ್ಕೊಡುಗೆ ಸಮಾರಂಭ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ ನಾಡು ನುಡಿ ಸಂಸ್ಕೃತಿ ಕುರಿತು ಅವರು ಉಪನ್ಯಾಸ ನೀಡಿದರು .

ಕನ್ನಡವೆಂದರೆ ಕೇವಲ ಭಾಷೆ ಮಾತ್ರ ಅಲ್ಲ ಅದು ನಾಡು ನುಡಿ ಸಂಸ್ಕೃತಿ ಸಾಹಿತ್ಯ ಕಲೆ ವಾಸ್ತು ಶಿಲ್ಪ ಸಂಗೀತ ಎಲ್ಲವನ್ನು ಒಳಗೊಂಡಿರುವ ಕನ್ನಡಿಗರ ಸಮಷ್ಟಿ ಬದುಕು ಎಂದು ತಿಳಿಸಿ ಆಲೂರ ವೆಂಕಟರಾಯರು 1905 ರಲ್ಲಿ ಆರಂಭಿಸಿದ ಕನ್ನಡ ಏಕೀಕರಣ ಚಳುವಳಿ ಸ್ವಾತಂತ್ರ್ಯ ನಂತರದ ದೇಶದಲ್ಲಿ 1956 ರಲ್ಲಿ ವಿಶಾಲ ಮೈಸೂರು ರಾಜ್ಯವಾಗಿ ಕನ್ನಡ ನಾಡು ಉದಯವಾಯಿತು. ದಿ. ದೇವರಾಜ ಅರಸು ಅವರು 1973ರಲ್ಲಿ ಸಿಎಂ ಆಗಿದ್ದಾಗ ಕರ್ನಾಟಕದ ಹೆಸರನ್ನು ನಾಮಕರಣ ಮಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡದ ಮಹತ್ವ ಹಾಗೂ ನಾಡಿನ ಇತಿಹಾಸವೇ ರೋಚಕವಾದದ್ದು, ಕನ್ನಡಿಗರು ಎಲ್ಲಾ ಭಾಷೆಯನ್ನು ಕಲಿಯಬೇಕು ಜೊತೆಗೆ ಕನ್ನಡದ ನೆಲದಲ್ಲಿ ವಾಸಿಸುವ ಅನ್ಯ ಭಾಷಿಕರಿಗೂ ಕನ್ನಡ ಕಲಿಸುವಂತೆ ಕರೆಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಕೆ ಟಿ ವೆಂಕಟೇಶ್ ರವರು ಮಾತನಾಡಿ ವರ್ಗಾವಣೆಗೊಂಡ ಅಧ್ಯಾಪಕರಿಗೆ ಶುಭಕೋರಿದರು. ನಮ್ಮ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪುರಾತನ ಇತಿಹಾಸವನ್ನು ಹೊಂದಿದೆ. ನಾವು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಏರಂಗೆರೆ ಶಿವರಾಮು ರವರು ಕನ್ನಡ ನಾಡಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು

ಕನಕಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯನವರು ಮಾತನಾಡಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಆದಿಯಾಗಿ ಕ್ರೀಡಾಪಟುಗಳು ಹಾಗೂ ಚಿತ್ರನಟರು ಕನ್ನಡದಲ್ಲಿ ಸಾಧನೆಗೈದು ನಾಡಿನ ಖ್ಯಾತಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಎಂದರು.

ವರ್ಗಾವಣೆಗೊಂಡ ಅಧ್ಯಾಪಕ ಉಮೇಶ್ ಮತ್ತು ಲಿಂಗರಾಜುರವರನ್ನು ಆತ್ಮೀಯವಾಗಿ ಬಿಳ್ಕೊಡಲಾಯಿತು
ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಂ. ಎಸ್ ಪ್ರಸನ್ನ ಕುಮಾರ್ ರವರು ರಾಜ್ಯ ಪರಿಷತ್ ಸದಸ್ಯ ಚಂದ್ರಶೇಖರ್ ಹೆಚ್ ವಿ ರವರು ರಾಮನಗರ ಜಿಲ್ಲಾ ಸರಕಾರಿ ನೌಕರರ ಸಂಘದ ನಿಕಟ ಪೂರ್ವ ಉಪಾಧ್ಯಕ್ಷ ಗೋವಿಂದರಾಜುರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು

ಕಾಲೇಜಿನ ಬೋಧಕ ಮತ್ತು ಬೋಧಕ್ಕೆ ತರವೃಂದ, ಹಾಗೂ ವಿದ್ಯಾರ್ಥಿಗಳು ಇದ್ದರು.

— ಶಿವನಹಳ್ಳಿ ಶಿವಲಿಂಗಯ್ಯ