ಸರ್ವಶಕ್ತಾತ್ಮಕ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಪೂಜಾ ಮಹೋತ್ಸವ

ವಿಜಯ ದರ್ಪಣ ನ್ಯೂಸ್….

 ಸರ್ವಶಕ್ತಾತ್ಮಕ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಪೂಜಾ ಮಹೋತ್ಸವ

ದೇವನಹಳ್ಳಿ  ಬೆಂಗಳೂರು ಗ್ರಾಮಾಂತರ ಜಿಲ್ಲೆ : ದೇವನಹಳ್ಳಿ  ಪಟ್ಟಣದ ಪಾರ್ಕ ರಸ್ತೆಯಲ್ಲಿರುವ ಸರ್ವಶಕ್ತಾತ್ಮಕ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶರನ್ನವರಾತ್ರಿ ಅಂಗವಾಗಿ ವಿಶೇಷ ಅಲಂಕಾರಗಳ ನೆರವೇರಲಿದ್ದು ಅದರ ಅಂಗವಾಗಿ ಶ್ರೀ ಚೌಡೇಶ್ವರಿ ದೇವಾಲಯ ಆವರಣದಲ್ಲಿ ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿದರು.

ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ .ಅಶ್ವತ್ ನಾರಾಯಣ್ ಮಾತನಾಡಿ ನವರಾತ್ರಿಯ ಪ್ರಯುಕ್ತ ಅಮ್ಮನವರಿಗೆ ಅಕ್ಟೋಬರ್ 3 ಗುರುವಾರದಿಂದ -12 ಶನಿವಾರದವರೆಗೆ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮಗಳು ಸಂಜೆ ಮಹಾ ಮಂಗಳಾರತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸಾದ ವಿನಿಯೋಗ ನಡೆಯಲಿದೆ. ಸರ್ವರೂ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

ಹಾಗೂ ಮುಖ್ಯವಾಗಿ ನವರಾತ್ರಿಯ ವಿಶೇಷ ದಿನಗಳಲ್ಲಿ ಪ್ರಮುಖವಾಗಿ ಅಕ್ಷರಭ್ಯಾಸ,ಚಾಮುಂಡೇಶ್ವರಿ ಅಲಂಕಾರ ಚಿನ್ನಲೇಪಿತ ಅಮ್ಮನವರ ಉತ್ಸವ ಮೂರ್ತಿ ಮೆರವಣಿಗೆ ನಂತರ ಉಯ್ಯಾಲೋತ್ಸವ ನಡೆಯಲಿದೆ ಭಕ್ತಾದಿಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಶ್ರೀ ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿಯ ಸಂಚಾಲಕರು ಗಂಗಾಧರ್ ಮಾತನಾಡಿ, ಅಮ್ಮನವರ ಆಶೀರ್ವಾದ ಪಡೆಯಲು ಪಕ್ಕದ ರಾಜ್ಯ ಜಿಲ್ಲೆಗಳಿಂದ ಪ್ರತಿದಿನ ದರ್ಶನಕ್ಕೆ ಆಗಮಿಸಿ ಉಚಿತವಾಗಿ ಸೇವೆ ಸಲ್ಲಿಸುತ್ತಾರೆ. ಶ್ರೀ ಚೌಡೇಶ್ವರಿ ಸಮುದಾಯ ಭವನ ನಿರ್ಮಾಣ ಮಾಡುವ ಉದ್ದೇಶವಿದ್ದು ಭಕ್ತಾದಿಗಳು ಮತ್ತು ದಾನಿಗಳು ಉದಾರ ಮನಸ್ಸಿನಿಂದ ಧನಸಹಾಯ ಹಾಗೂ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ನೀಡಿ ಸಹಕರಿಸಬಹುದಾಗಿದೆ,ಶರ ನ್ನವರಾತ್ರಿ ಅಂಗವಾಗಿ ವಿಶೇಷ ಅಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಾದ ಎಸ್.ಆರ್.ಮುನಿರಾಜು, ಹನುಮಂತಪ್ಪ, ಗೋಪಿ, ಜಯರಾಮ್, ತೇಜು, ಮುನಿಸ್ವಾಮಿ, ರಂಗನಾಥ, ಹೇಮಂತ್, ಮಂಜುನಾಥ್ ಹಾಗೂ ಪ್ರಧಾನ ಅರ್ಚಕ ವೀರಯ್ಯಸ್ವಾಮಿ ಮತ್ತಿತರರು ಇದ್ದರು.