ಸರ್ಕಾರ ವಿರುದ್ದ ಬೃಹತ್ ಪ್ರತಿಭಟನೆ : ಬಂಗ್ಲೆ ಮಲ್ಲಿಕಾರ್ಜುನ
ವಿಜಯ ದರ್ಪಣ ನ್ಯೂಸ್…
ಸರ್ಕಾರ ವಿರುದ್ದ ಬೃಹತ್ ಪ್ರತಿಭಟನೆ : ಬಂಗ್ಲೆ ಮಲ್ಲಿಕಾರ್ಜುನ
ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂ 29.
ಪತ್ರಕರ್ತರಿಗೆ ಬಸ್ ಪಾಸ್ ವಿತರಣೆಯಲ್ಲಿ ರಾಜ್ಯದ 16 ಸಾವಿರ ಪತ್ರಕರ್ತರಿಗೆ ರಾಜ್ಯಸರ್ಕಾರದಿಂದ ಬಹಳ ಅನ್ಯಾಯ ವಾಗುತ್ತಿದ್ದು ಹಲವಾರು ಬಾರಿ ಮನವಿ ಹಾಗೂ ಪ್ರತಿಭಟನೆ ಮಾಡಿದ್ರೂ ಸರ್ಕಾರ ಪತ್ರಕರ್ತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ.
ಆದ್ದರಿಂದ ಜುಲೈ ತಿಂಗಳಲ್ಲಿ ಸರ್ಕಾರದ ವಿರುದ್ಧ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಬೃಹತ್ ಪ್ರತಿಭಟನೆಯನ್ನು ನಡೆಸಲು ಬೆಂಗಳೂರಿನಲ್ಲಿ ಚಿಂತನೆ ಮಾಡಲಾಗಿದೆ ಎಂದರು ಕರ್ನಾಟಕ ರಾಜ್ಯಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ತಿಳಿಸಿದ್ರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಕಾನಿಪ ಧ್ವನಿಯ ಕಛೇರಿಯಲ್ಲಿ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಣೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಧ್ವನಿ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪತ್ರಕರ್ತರ ಪರ ನ್ಯಾಯಾಲಯದಲ್ಲಿ ಕೇಸ್ ಹಾಕಲಾಗುತ್ತದೆ .ಈ ಬಗ್ಗೆ ಕಾನೂನು ತಜ್ಞರು ರೊಂದಿಗೆ ಚರ್ಚಿಸಿಲಾಗಿದೆ ಎಂದರು.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾನಿಪ ಧ್ವನಿ ಜಿಲ್ಲಾಧ್ಯಕ್ಷರ ಅಯ್ಕೆಗೆ ಲಾಟರಿ ಎತ್ತುವ ಮೂಲಕ ನೆಲಮಂಗಲದ ಸಿದ್ದರಾಜು ಆಯ್ಕೆಯಾದರು,ಹಾಗೆಯೇ ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಜಿ, ಕಾರ್ಯದರ್ಶಿಗಳಾಗಿ ರಾಮಕೃಷ್ಣ ಪ್ಪ, ಅರುಣ್ ಕುಮಾರ್ ಉಪಾಧ್ಯಕ್ಷರುಗಳಾಗಿ, ಎ ಸೀತಾರಾಮಯ್ಯ, ಅಶ್ವಥ್, ಹಾಗೆಯೇ ಜಿಲ್ಲಾ ಗೌರವ ಅಧ್ಯಕ್ಷರಾಗಿ ಹೊಸಕೋಟೆ ಚೌಡೇಗೌಡ,ಖಜಾಂಚಿಯಾಗಿ ನೆಲಮಂಗಲದ ಶ್ರೀನಿವಾಸ್ ರವರುಗಳು ಆಯ್ಕೆಯಾದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಮಹೇಶ್ ರವರನ್ನ ರಾಜ್ಯ ಸಮಿತಿಗೆ ನೇಮಕ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಂಗ್ಲೆಮಲ್ಲಿಕಾರ್ಜುನ,ರಾಜ್ಯ ಕಾರ್ಯದರ್ಶಿ ಡಿ ಕೆ, ಮಹೇಂದ್ರ ಕುಮಾರ್, ಸೀತಾರಾಮಯ್ಯ, ರಾಮಕೃಷ್ಣ, ರಾಜು ಅಗಸ್ತ್ಯ ಕಾಂತರಾಜು ಪ್ರಭಾಕರ್ ಗುರುಸಿದ್ದಯ್ಯ, ಇದ್ದರು.