ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನಿಂದ ರಂಗ ಸಮುದ್ರ ಕಟ್ಟೆ ಹಾಡಿಗೆ ಬೇಟಿ: ಕುಂದು ಕೊರತೆಗಳ ಮಾಹಿತಿ ಸಂಗ್ರಹ
ವಿಜಯ ದರ್ಪಣ ನ್ಯೂಸ್…
ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನಿಂದ ರಂಗ ಸಮುದ್ರ ಕಟ್ಟೆ ಹಾಡಿಗೆ ಬೇಟಿ: ಕುಂದು ಕೊರತೆಗಳ ಮಾಹಿತಿ ಸಂಗ್ರಹ
ಮಡಿಕೇರಿ:ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಏಳನೇ ಹೊಸಕೋಟೆ ಸುಂಟ್ಟಿಕೊಪ್ಪ ಮಾನವೀಯತೆ ಸಂಸ್ಥೆಯ ಹಲವು ಉದ್ದೇಶಗಳಲ್ಲಿ ಒಂದಾದ ಹಾಡಿ ಜನರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು ಮಾನವೀಯತೆ ಸಂಸ್ಥೆಯ ವತಿಯಿಂದ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಿ ಅವರಿಗೆ ಬರಬೇಕಾದ ಸವಲತ್ತುಗಳನ್ನು ಒದಗಿಸುವ ಬಗ್ಗೆ ಹಾಗೂ ಮಾನವೀಯತೆ ಸಂಸ್ಥೆಯ ಮೂಲಕ ಮೂಲ ಸೌಕರ್ಯ ಪಡೆಯದ ಹಾಡಿ ಜನರಿಗೆ ಸಹಾಯ ಹಸ್ತ ನೀಡುವುದರ ಬಗ್ಗೆ ಕಟ್ಟೆ ಹಾಡಿಯ ಜನರೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಟ್ರಸ್ಟಿಗಳಾದ ಏಳನೇ ಹೊಸಕೋಟೆಯ ಸೌಮ್ಯಶ್ರೀ ಅವರು ಮತ್ತು ಪ್ರಾದೇಶಿಕ ಆಡಳಿತ ಅಧಿಕಾರಿ ಸ್ಟೇನಿ ಜೋಸೆಫ್ ಇನ್ನು ಎರಡು ದಿನಗಳಲ್ಲಿ ಕಟ್ಟೆಹಾಡಿ ಜನರ ಕುಂದು ಕೊರತೆಗಳ ವರದಿಯನ್ನು ಕಾನೂನು ಘಟಕದ ಮುಖ್ಯಸ್ಥರಿಗೆ ಕೊಡುವುದಾಗಿ ಭರವಸೆ ನೀಡಿದರು ಕಾನೂನು ಘಟಕದ ಮುಖ್ಯಸ್ಥೆ ವಕೀಲರಾದ ಮೊನಾಲಿಸಾ ಶಿವಕುಮಾರ್ ಅವರು ಕಟ್ಟೆ ಹಾಡಿಯ ಜನರೊಂದಿಗೆ ಸಮಾಲೋಚನೆ ನಡೆಸಿ ವರದಿಯನ್ನು ತಯಾರಿಸಿ ಸಂಸ್ಥೆಯ ಅಧ್ಯಕ್ಷರ ಮೂಲಕ ಸಂಬಂಧ ಪಟ್ಟ ಇಲಾಖೆಗೆ ನೀಡುವುದಾಗಿ ತಿಳಿಸಿದರು ಪ್ರಶಾಂತ್ ಅವರು ಭಾಗವಹಿಸಿದ್ದರು.
ಕಟ್ಟೆಹಾಡಿ ರಂಗ ಸಮುದ್ರಕ್ಕೆ ನಮ್ಮ ತಂಡ ಬೇಟಿ ನೀಡಿದಾಗ ಕಟ್ಟೆ ಹಾಡಿಯ ಜನರು ಸಮಸ್ಯೆಗಳ ಬಗ್ಗೆ ಲಿಖಿತ ಮನವಿ ಪತ್ರ ಕೊಟ್ಟಿರುತ್ತಾರೆ ಈಗಿನ ಯುಗದಲ್ಲಿಯೂ ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಇವರು ಗುಡಿಸಿಲಿನ ಮನೆಯಲ್ಲಿ ಬದುಕುತ್ತಿದ್ದಾರೆ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲ ವಿದ್ಯುತ್ ಇಲ್ಲದೆ ಮಕ್ಕಳಿಗೆ ಓದುವುದಕ್ಕೆ ದೊಡ್ಡ ಸಮಸ್ಯೆಯನ್ನು ಹಾಡಿಯ ಕೆಲವು ಮಕ್ಕಳು ಅನುಭವಿಸುತ್ತಿರುವುದು ಕಂಡುಬಂದಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧ ಪಟ್ಟ ಇಲಾಖೆಗೆ ಅವರು ಆದಷ್ಟು ಬಗ್ಗೆ ಇದರ ಬಗ್ಗೆ ಕ್ರಮ ತಿಳಿದುಕೊಳ್ಳುವಂತೆ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರು ಶಿವಕುಮಾರ್ ಹೂಟಗಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದರು.