ಸಿದ್ದಾಂತ ಶಿಖಾಮಣಿ ವಿಚಾರ ಸಂಕಿರಣ.

ವಿಜಯ ದರ್ಪಣ ನ್ಯೂಸ್

ಸಿದ್ದಾಂತ ಶಿಖಾಮಣಿ ವಿಚಾರ ಸಂಕಿರಣ.

ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  ಮಾರ್ಚ್  18 : ಕೀರ್ತಿ ಶೇಷ ಶ್ರೀ ಶರಣ ಆರ್ ರಾಜಶೇಖರಯ್ಯ ರವರು ಅಲಂಕಾರ ಚತುರರು ವಿವಿಧ ರೀತಿಯ ಮುತ್ತಿನ ಪಲ್ಲಕ್ಕಿಗಳನ್ನು ನಿರ್ಮಿಸುತ್ತಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ರಂಗನಾಯಕಿ ಚಲನಚಿತ್ರದಲ್ಲಿ ಮುತ್ತಿನ ಪಲ್ಲಕ್ಕಿಯನ್ನು ನಿರ್ಮಿಸಿ ಕೊಟ್ಟ ಪ್ರಸಂಗವಿದೆ.

ನಮ್ಮ ತಾತನವರು ಶ್ರೀ ಚನ್ನಕೇಶವ ಬ್ರಹ್ಮರಥೋತ್ಸವ ರಥ ಮತ್ತು ಶ್ರೀ ರುದ್ರದೇವರ ಆರು ಕಲ್ಲುಗಾಲಿನ ಚಕ್ರ ಬ್ರಹ್ಮರಥೋತ್ಸವಕ್ಕೆ ವಿನ್ಯಾಸ ನೀಡಿದರೆಂದು ತಿಳಿಸಿದರು.
ನಮ್ಮ ಪೂರ್ವಜರಾದ ರಾಮಬಸಪ್ಪ ಶಾಸ್ತ್ರಿಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹರಿಕಥೆ ಮಾಡಿ ಉತ್ತಮ ಹೆಸರನ್ನು ಪಡೆದು ಮೈಸೂರು ಮಹಾರಾಜರದಿಂದ ಚಿನ್ನದ ಪದಕವನ್ನು ಪಡೆದರು ಎಂದು ಸುಷ್ಮಾ ನಂದನ್ ರವರು ತಿಳಿಸಿದರು.

ವಿಜಯಪುರ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದ ಪ್ರಸಾದ ನಿಲಯಆವರಣದಲ್ಲಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ಸೇವಾ ಟ್ರಸ್ಟ್ ಆಶ್ರಯದಲ್ಲಿ 349 ನೆಯ ಮಾಸಿಕ ಶಿವನುಭವ ಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಶರಣಿ ಆರ್ ಸುಮತಿ ದೇವಿ * ಶ್ರೀ ಸಿದ್ಧಾಂತ ಶಿಖಾಮಣಿ * ಪುಸ್ತಕದ ಬಗ್ಗೆ ‌ ಉಪನ್ಯಾಸ ನೀಡುತ್ತಾ ಸಿದ್ಧಾಂತ ಶಿಖಾಮಣಿ 13 14ನೇ ಶತಮಾನದ ಸಂಸ್ಕೃತ ಭಾಷೆಯ ಕಾಲ್ಪನಿಕ ಕಥೆಯ ಪುಸ್ತಕವೆಂದು ತಿಳಿಯ ಪಡಿಸುತ್ತಾ ಈ ಸಿದ್ಧಾಂತವು ಮೊಟ್ಟಮೊದಲು ಶಿವನು ಪಾರ್ವತಿ ಮತ್ತು ತನ್ನ ಶಿವಗಣರಿಗೆ ಉಪದೇಶಿಸಿದರು.

ಶಿವನಿಂದ ಉಪದೇಶ ಪಡೆದ ಶಿವ ಪ್ರಮುಖರಾದ ದಾರುಕ , ಘಂಟಾಕರ್ಣ , ಧೇನುಕರ್ಣ, ಮತ್ತು ವಿಶ್ವಕರ್ಣರೆಂಬ ಗಣೇಶ್ವರನು ಭೂಲೋಕದಲ್ಲಿ ಕ್ರಮವಾಗಿ ಅಗಸ್ತ್ಯ ಧವೀಚಿ ವ್ಯಾಸ. ಸಾನಂದ ಮತ್ತು ದುರ್ವಾಸಿ ಎಂಬ ಮಹರ್ಷಿಗಳಿಗೆ ಶಿವಾದ್ವೈತ ಸಿದ್ಧಾಂತ ಉಪದೇಶಿಸುತ್ತಾರೆ ಎಂದು ತಿಳಿಯಪಡಿಸುತ್ತಾ ಸಂಸ್ಕೃತ ಭಾಷೆಯಲ್ಲಿರುವ ಈ ಪುಸ್ತಕವನ್ನು 1008 ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಸ್ವಾಮಿ ಶಿವಾಚಾರ್ಯ ಮಹಾಸ್ವಾಮಿಗಳು ಕನ್ನಡಿಗರಿಗೆ ಅಭ್ಯಾಸವಾಗುವಂತೆ ಈ ಪುಸ್ತಕದಲ್ಲಿ ರೇಣುಕ ಗೀತೆ ಮತ್ತು ರೇಣುಕಾಗಸ್ತೃ ಎಂಬ ಗ್ರಂಥವನ್ನು ಕರೆಯಲ್ಪಡುತ್ತಿದ್ದರು. 1998ರಲ್ಲಿ ಇತಿಹಾಸಗಾರ ಬರಹಗಾರರಾದ ಡಾ ಎಂ ಚಿದಾನಂದಮೂರ್ತಿ ಸಂಶೋಧನೆ ನಡೆಸಿದರು ಈ ಗ್ರಂಥವು ರಾಮಾಯಣದ ಪೂರ್ವದಲ್ಲಿಯೇ ರಚನೆಯಾಗಿದೆ ಎಂದು ಸಂಶೋಧನಾಗಾರರು ಅಭಿಪ್ರಾಯಪಡೆಯುತ್ತಾ ಮೂರು ಯುಗದಲ್ಲೂ ಸಿದ್ಧಾಂತಶಿಖಾಮಣಿ ಧರ್ಮ ಪ್ರಚಾರಕವಾಗಿತ್ತೆಂದು ತಿಳಿಸಿದರು.

 ಬೆಂಗಳೂರಿನ ಶ್ರೀಮತಿ ಸುಜಾತ ಜಯ ಕುಮಾರ್ ಮತ್ತು ಶೋಭಾ ಜಯಂತ್ ಕುಮಾರ್ ಮಾತಾನಾಡುತ್ತ ಮಾತೃಶ್ರೀರಾದಂತ ಕೀರ್ತಿಶೇಷ ಶ್ರೀಮತಿ ವಿಶಾಲಾಕ್ಷಮ್ಮ ನಂಜುಂಡಪ್ಪನವರ ಸ್ಮರಣಾರ್ಥವಾಗಿ 50,000ಗಳ ನಿಶ್ಚಿತ ಠೇವಣಿಯಲ್ಲಿ ಬರುವ ಬಡ್ಡಿ ಹಣದಲ್ಲಿ ಕಡು ಬಡವರಿಗೆ ಆರ್ಥಿಕ ಸಹಾಯ ನೀಡಬೇಕೆಂಬ ಅವರ ಮಹಾದಾಸೆಯಂತೆ ಶ್ರೀ ಬಸವರಾಜು ಮತ್ತು ಅನುಸೂಯಮ್ಮ ಪುಟ್ಟರಾಜು ರವರಿಗೆ ನೀಡಲಾಯಿತು.

 ಬೆಂಗಳೂರಿನ ಸುಮತಿ ದೇವಿ ರವರು  ಅಧ್ಯಕ್ಷ ಸಿ ಬಸಪ್ಪ ನಿಯೋಜಿತ ಅಧ್ಯಕ್ಷ ಅನಿಲ್ ಕುಮಾರ್ ಕುಮಾರ್ ಕಾರ್ಯದರ್ಶಿ ಮ ಸುರೇಶ್ ಬಾಬು ರವರನ್ನು ಸನ್ಮಾನಿಸಿ ಗೌರವಿಸಿದ್ದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಟ್ರಸ್ಟ್ ಅಧ್ಯಕ್ಷ ಸಿ ಬಸಪ್ಪ ವಹಿಸಿದ್ದರು.ನಿಯೋಜಿತ ಅಧ್ಯಕ್ಷ ಅನಿಲ್ ಕುಮಾರ್ ರಾಷ್ಟ್ರೀಯ ಬಸವದಳದ ಪದಾಧಿಕಾರಿ ಮ.ಜಯದೇವ್ ಉಪಾಧ್ಯಕ್ಷ ಅಂಬಾ ಭವಾನಿ ಕದಳಿ ವೇದಿಕೆಯ ಜಿಲ್ಲಾಧ್ಯಕ್ಷರು ರಮಣ ಮಹರ್ಷಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸ್ವರ್ಣಗೌರಿ ಮಹಾದೇವ್ ಮಹಂತಿನ ಮಠ ಧರ್ಮ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ ಪ್ರಭುದೇವ್ ನಗರ್ತ ಮಹಿಳಾ ಉಪಾಧ್ಯಕ್ಷೆ ಸಿ. ಭಾರತಿ ರಾಧಾ ಮನೋಹರ್ ಮೀನಾ ಮ. ಸುರೇಶ್ ಬಾಬು ವಿಮಲಾಂಭ ಅನಿಲ್ ಕುಮಾರ್ ಅರಿವಿನ ಮನೆಯ ಅಕ್ಕಂದಿರು ಅಂಗ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.