ನಾವು ಹಿಂದೂಗಳಲ್ಲ ನಮ್ಮದೇ ಬೇರೆ ಧರ್ಮ… ವೀರಶೈವ  

ವಿಜಯ ದರ್ಪಣ ನ್ಯೂಸ್

ನಾವು ಹಿಂದೂಗಳಲ್ಲ ನಮ್ಮದೇ ಬೇರೆ ಧರ್ಮ… ವೀರಶೈವ.

ನಾನು ವೀರಶೈವ, ನಾನು ಲಿಂಗಾಯತ, ನಾನು ಬ್ರಾಹ್ಮಣ, ನಾನು ವೈಶ್ಯ, ನಾನು ಶೂದ್ರ, ನಾನು ಹಿಂದು, ನಾನು ಮುಸ್ಲಿಂ, ನಾನು ಕ್ರೆಸ್ತ, ನಾನು ಸಿಖ್‌ರು, ಹೀಗೆ ನಾನಾ ರೀತಿಯ ಜನಗಳು ನಾನಾ ಧರ್ಮಗಳ ಅಡಿಯಲ್ಲಿ ಬೆಳೆಯುತ್ತಿದ್ದಾರೆ. ನಾನು ಎಂಬ ಪದವೇ ಇಲ್ಲಿ ದೊಡ್ಡ ಸಾಧನೆಯ ಕುರುಹು, ಅನಾದಿ ಕಾಲದಿಂದಲೂ ವಿಷ್ಣು ಧರ್ಮೀಯರು, ವೀರಶೈವರ ಜಂಜಾಟ ನಡೆದುಕೊಂಡೇ ಬಂದಿದೆ. ಇತ್ತೀಚೆಗಷ್ಟೇ ಬ್ರಾಹ್ಮಣರು ಶಿವನನ್ನು ಪೂಜಿಸುತ್ತಿದ್ದಾರೆ. ಆಗಿನ ದಿನಗಳಲ್ಲಿ ಕಟ್ಟಾ ಬ್ರಾಹ್ಮಣರಾಗಲಿ, ಅಯ್ಯಂಗಾರ್‌ಗಳಾಗಲಿ, ಎಂದಿಗೂ ಶಿವನನ್ನು ಪೂಜಿಸಿದವರಲ್ಲ. ಈಗಲೂ ಕೆಲವು ಅಯ್ಯಂಗಾರ್‌ಗಳು ಶಿವನನ್ನಾಗಲಿ, ಶಿವನ ಮಗ ಗಣಪತಿಯನ್ನಾಗಲಿ ಪೂಜಿಸುವುದಿಲ್ಲ.

ರಾಜ ಮಹಾರಾಜರ ಕಾಲದಲ್ಲಿ ಶಿವನ ದೇವಾಲಯಗಳು ಯಥೇಚ್ಛವಾಗಿ ನಿರ್ಮಾಣವಾಗುತ್ತಿದ್ದವು. ಆಗ ಶಿವನನ್ನು ಗುಡಿಯಲ್ಲಿ ಶುಚಿಯಾಗಿಟ್ಟು, ಬಿಲ್ಪಪತ್ರೆಗಳನ್ನಿಟ್ಟು, ಪೂಜಿಸಲು ಬ್ರಾಹ್ಮಣರನ್ನೇ ಹುಡುಕುತ್ತಿದ್ದರು. ಆ ಬ್ರಾಹ್ಮರ‍್ಯಾರೂ ಹೊಟ್ಟೆ ತುಂಬಿದವರಲ್ಲ, ಹೊಟ್ಟೆ ಹೊರೆಯಲು ಒಂದು ಉದ್ಯೋಗ, ಉದ್ಯೋಗಕ್ಕಿಷ್ಟು ಸಂಬಳ, ಆ ಸಂಬಳದಿAದ ಹೆಂಡತಿ, ಮಕ್ಕಳನ್ನು ಪೊರೆಯುವವರೇ ಆಗಿರುತ್ತಿದ್ದರು.

ಇತ್ತೀಚೆಗೆ ವೀರಶೈವರಲ್ಲೂ ಎರಡು ಗುಂಪುಗಳಾಯಿತು. ಒಂದು ವೀರಶೈವ. ಅದು  ಸ್ಟ್ಯಾಂಡರ್ಡ್ ಅಂತೆ. ಇನ್ನೊಂದು ಲಿಂಗಾಯತರು. ಇರ‍್ಯಾರು ಪ್ಯೂರ್ ಅಲ್ಲ. ಎಲ್ಲಾ ಕಲಬೆರಕೆ ಜಾತಿಗಳು. ಜನರು ಲಿಂಗಧಾರಣೆ ಮಾಡಿ ಲಿಂಗಾಯತರಾದವರು. ಅದರಲ್ಲಿ ಮುಸ್ಲಿಂರು, ಕ್ರಿಶ್ಚಿಯನ್ನರು, ಹಿಂದುಳಿದ ವರ್ಗದವರೆಲ್ಲಾ ಇದ್ದಾರೆ. ಲಿಂಗ ಕಟ್ಟಿಕೊಂಡು ಲಿಂಗಾಯಿತರಾಗಿದ್ದಾರೆ. ಅವರಿಗೂ, ನಮಗೂ ಹೋಲಿಕೆ ಸರಿಯಲ್ಲ ಎಂಬುದು ವೀರಶೈವದ ಅಳಲು.

ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದವರಲ್ಲಿ ಜೆ.ಹೆಚ್.ಪಟೇಲ್‌ರವರದ್ದು ರೋಚಕ ಆಡಳಿತ. ಅವರೊಮ್ಮೆ ವಿಧಾನಸಭೆಯಲ್ಲೇ ತಮ್ಮದೇ ಲಿಂಗಾಯಿತ ಜಾತಿಗೆ ಅವಹೇಳನವಾಗುವಂಥ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರು ಹೇಳಿದ್ದೇನೆಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಇರುವ ಮೂರುಮತ್ತೊಂದು ಎಕರೆ ಜಮೀನಿಗೆ ಮನೆ ತುಂಬಾ ಮಕ್ಕಳು. ಹಿರಿಯ ಮಕ್ಕಳಲ್ಲಿ ಕೆಲವರು ಒಂದಿಷ್ಟು ಓದಿಕೊಂಡು ನೌಕರಿ ಹಿಡಿದರೆ ಗಟ್ಟಿಮುಟ್ಟಾದವರು ಹೊಲದ ಕೆಲಸಕ್ಕೆ, ಇನ್ನೂ ಮಿಗುತ್ತಿದ್ದ ಕೊನೆ ಮಕ್ಕಳಲ್ಲೊಬ್ಬನಿಗೆ ಇಂತಿಷ್ಟು ಕುಂಟೆ ಜಾಗವನ್ನು ಪಾಲು ಮಾಡಿಕೊಟ್ಟು, ಆ ಜಾಗದಲ್ಲಿ ಲಿಂಗದ ರೀತಿಯ ಕಲ್ಲನ್ನಿಟ್ಟು ಅವನ ಹಣೆಗೆ ವಿಭೂತಿ ಬಳಿದು ಅವನನ್ನು ಆ ಶಿವನ ಪೂಜೆಗೆ ಹಚ್ಚಿದರೆ ಊರವರ ಕೃಪೆಯಿಂದ ಸ್ವಾಮಿಗಳಾಗಿ, ಅಲ್ಲೊಂದು ಮಠವಾಗಿ ಆ ಊರಿನವರೆಲ್ಲಾ ಆ ಮಠಕ್ಕೆ ನಡೆದುಕೊಂಡು, ಕೊನೆಗೊಂದು ದಿನ ಆ ಜಾಗ ಸುತ್ತಮುತ್ತಲಿನ ಇಡೀ ಪ್ರಾಂತ್ಯಕ್ಕೆ ದೊಡ್ಡ ಮಠವಾಗುತ್ತಿತ್ತು.
ಹೌದು ಇತ್ತೀಚೆಗೆ ದಾವಣಗೆರೆಯಲ್ಲಿ ವೀರಶೈವರ ಸಮಾವೇಶ ನಡೆಯಿತು. ಅವರಲ್ಲಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಅದರಲ್ಲಿ ಮುಖ್ಯವಾದದ್ದು ಅವರದ್ದು ಹಿಂದೂಧರ್ಮವಲ್ಲ. ವೀರಶೈವವೆಂಬ ಧರ್ಮ ಎಂಬುದು. ಆದರೆ ವೀರಶೈವ ಅಥವಾ ಲಿಂಗಾಯತ ಧರ್ಮವಿರುವುದು ಹಿಂದೂ ಧರ್ಮದಲ್ಲಿ ಅಲ್ಲವೇ… ಇತರೆ ಧರ್ಮೀಯರು ಇದನ್ನು ಪ್ರಶ್ನಿಸುವುದಿಲ್ಲವೇ? ಒಂದು ಸಮಾರಂಭ, ಸಮಾರಂಭದ ವೇದಿಕೆ, ವೇದಿಕೆಯಲ್ಲಿ ಸ್ವಲ್ಪ ಗೌರವ ಸಿಕ್ಕ ತಕ್ಷಣ ಈ ರೀತಿಯ ಹುಚ್ಚಾಟಗಳು ಸರಿಯೇ ಯೋಚಿಸಿ.


– *ಬಿ.ಆರ್. ನರಸಿಂಹಮೂರ್ತಿ, 9448174932*