ಜೆಎನ್-1 ವೈರಸ್ ಕೊರೋನಾ ವೈರಸ್‌ನಷ್ಟು ಆಘಾತಕಾರಿಯಲ್ಲ
ವಿಜಯ ದರ್ಪಣ ನ್ಯೂಸ್
ಬೆಂಗಳೂರು ಡಿಸೆಂಬರ್:ಇದನ್ನು ನಮ್ಮಲ್ಲೇ ಕೆಲವು ವೈದ್ಯರು ಡಂಗೂರ ಬಾರಿಸಿಕೊಂಡು ಹೇಳುತ್ತಿದ್ದರೂ ಕೆಲವು ದೃಶ್ಯಮಾಧ್ಯಮಗಳು ಜನರಿಗೆ ಅರಿವು ಮೂಡಿಸುವ ಭ್ರಮೆಯಿಂದ ಭಯೋತ್ಪಾದಕರಂತೆ ಭಯದ ಉತ್ಪಾದನೆ ಮಾಡುತ್ತಿವೆ. ಇದೊಂದು ಕೋವಿಡ್-19, ಓಮಿಕ್ರಾನ್ ತಳಿಯ ಮುಂದಿನ ಮಾರ್ಪಟ್ಟ ಇನ್ನೊಂದು ವೈರಸ್ ಅಷ್ಟೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ವೈರಸ್ ಅಟ್ಯಾಕ್ ಆಗುತ್ತಲೇ ಇರುತ್ತದೆ. ನವೆಂಬರ್, ಡಿಸೆಂಬರ್, ಜನವರಿ ಚಳಿಗಾಲವಾದ್ದರಿಂದ ಈ ಕಾಲವು ವೈರಸ್‌ಗಳಿಗೆ ಅನುಕೂಲಕರವಾಗಿರುವುದರಿಂದ ಮನುಷ್ಯನ ಉಸಿರಾಟದಿಂದ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಈಗಂತೂ ಜನರಲ್ಲಿ ವೈರಸ್ ಅಂದರೆ ಭಯಭೀತರಾಗುವ ಅವಕಾಶವೇ ಹೆಚ್ಚು. ಆದರೆ ಈ ವೈರಾಣುಗಳು ತಲತಲಾಂತರದಿಂದ ಜನರ ಮೇಲೆ ಜನಜೀವನದ ಮೇಲೆ ಪ್ರಭಾವ ಬೀರುತ್ತಲೇ ಇದೆ.
ಫ್ಲೂ, ಮಲೇರಿಯಾ, ಪ್ಲೇಗ್, ಇನ್‌ಫ್ಲುಯೆಂಜಾ ಕೋವಿಡ್-19 ಇವೆಲ್ಲವೂ ವೈರಸ್‌ನಿಂದ ಹರಡಿದ ಕಾಯಿಲೆಗಳೇ, ಆದರೆ ಇದ್ಯಾವುದು ಒಂದರ ಹಿಂದೆ ಇನ್ನೊಂದು ಬಂದವುಗಳಲ್ಲ. ಇಪ್ಪತ್ತೊಂದು, ಮೂವತ್ತು, ಐವತ್ತು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ, ಸುಲಭವಾಗಿ ಒಬ್ಬರಿಂದೊಬ್ಬರಿಗೆ ಹರಡುವ, ಒಮ್ಮೆ ಒಬ್ಬ ವ್ಯಕ್ತಿಯ ಮೇಲೆ ಬಂದು ಅವನಿಗೆ ಸದ್ಗತಿ ತೋರುವ ಭಯಾನಕ ಕಾಯಿಲೆಗಳು. ಕೆಲವು ವೈದ್ಯರು, ವೈದ್ಯ ನಿಲಯಗಳು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಹೇಳುವಂತೆ ಖಂಡಿತವಾಗಿಯೂ ಇದು ಉತ್ಕೃಷ್ಟ ಮಟ್ಟದ್ದಲ್ಲ ಎಂದು ತಿಳಿದವರು ಹೇಳುತ್ತಾರೆ.
ವೈರಸ್‌ಗಳು ರೂಪಾಂತರಗೊಳ್ಳುತ್ತಲೇ ಇರುತ್ತದೆ. ಅದರಲ್ಲಿ ಕೆಲವು ನಮ್ಮ ಗಮನಕ್ಕೂ ಬರುವುದಿಲ್ಲ. ಅವಕ್ಕವೇ ಕಣ್ಮರೆಯಾಗುತ್ತಿರುತ್ತವೆ. ಕೆಲದಿನಗಳ ಮಟ್ಟಿಗೆ ಕಾಣಿಸಿಕೊಳ್ಳುವ ವೈರಸ್‌ಗಳಿಗೆ ನಮ್ಮ ವೈರಾಲಾಜಿಸ್ಟ್ ಗಳು ನಾಮಕರಣ ಮಾಡುತ್ತಾರೆ. ಈಗಿನ ವೈರಾಣುವಿಗೂ ಜೆಎನ್-1 ಎಂದು ಹೆಸರು ಕೊಟ್ಟಿರುವುದು ಅವರೇ. ಕೊರೋನಾ ವೈರಸ್ ಮೊದಲನೇ ಅಲೆ, ಎರಡನೇ ಅಲೆ ಎನ್ನುತ್ತಾ ಪ್ರಪಂಚದಾದ್ಯoತ ಲಕ್ಷಾಂತರ ಜನರನ್ನು ಆಹುತಿ ತೆಗೆದುಕೊಂಡಿತ್ತು.
ಜನಸಾಮಾನ್ಯರಿಗೆ ಈಗಾಗಲೇ ಕೊರೋನಾ-19 ವೈರಸ್ ಸಾಕಷ್ಟು ಹಾನಿಮಾಡಿ ಕೆಲವರನ್ನು ಮಕಾಡೆ ಮಲಗುವಂತೆ ಮಾಡಿ, ಲಕ್ಷಾಂತರ ಜನರನ್ನು ಧೂಳೀಪಟ ಮಾಡಿರುವುದರಿಂದ ಯಾರಾದರೂ ಕೆಮ್ಮಿದರೆ, ವೈರಸ್ ಫಿವರ್‌ನಿಂದ ನೋವನ್ನನುಭವಿಸುತ್ತಿದ್ದರೆ, ಗಂಟಲಲ್ಲಿ ಕೆರೆತ ಕಾಣಿಸಿಕೊಂಡಿದ್ದರೆ, ಆತನನ್ನು ದೂರಿಕರಿಸುತ್ತಿದ್ದಾರೆ. ಸ್ವಂತ ಜನರೆ, ಸ್ನೇಹಿತರೆ, ಆತನ ಮನೆಯವರೆ ದೂರಾಗುತ್ತಿದ್ದಾರೆ. ಇದು ತಪ್ಪು. ವೈರಸ್ ಬಂದ ವ್ಯಕ್ತಿಗೆ ಯಾರೂ ಶುಶ್ರೂಷೆ ಮಾಡದಿದ್ದರೆ ಆತ ಬದುಕುವುದಾದರೂ ಹೇಗೆ…?
ಹಾಗಂತ ಅವರನ್ನು ತಬ್ಬಿಕೊಂಡು, ಆಲಂಗಿಸಿಕೊoಡು, ಅತ್ತು ಕರೆದು ಆತನ ನೆರವಿಗೆ ಯಾರೂ ನಿಲ್ಲಬೇಡಿ. ಇದಕ್ಕೆ ಜಾಗರೂಕತೆಯೇ ಮದ್ದು. ವೈರಸ್ ಬಂದ ವ್ಯಕ್ತಿಯ ಸನಿಹ ಹೋಗುವಾಗ (ಮಾಸ್ಕ್) ಮುಖಗವಸು ಧರಿಸಿ ಆತನಿಂದ ಸಾಧ್ಯವಾದಷ್ಟು ದೂರ ಇರಿ. ವಯಸ್ಸಾದವರು ಐವತ್ತು, ಅರವತ್ತು ವರುಷ ದಾಟಿದವರು, ಶುಗರ್, ಬಿಪಿ, ಕಿಡ್ನಿ, ಲಿವರ್ ತೊಂದರೆಯಿರುವವರನ್ನು ಹುಷಾರಾಗಿ ನೋಡಿಕೊಳ್ಳಿ. ಇಷ್ಟೇ ಅಲ್ಲಾ ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರಿಗೆ, ಪ್ರಯಾಣ ಮಾಡುವುದು, ಜನಜಂಗುಳಿ ಸೇರುವ ಕಡೆ ಹೋಗುವುದು, ಸುಖಾಸುಮ್ಮನೆ ಆಸ್ಪತ್ರೆ, ಮದುವೆ ಕಾರ್ಯಕ್ರಮ, ನಾಮಕರಣ, ಶವ ಸಂಸ್ಕಾರ ಇಂತಹ ಕಡೆ ಹೋಗದಂತೆ ನೋಡಿಕೊಳ್ಳಿ. ಹೋಗಲೇಬೇಕಾದ ಅನಿವಾರ್ಯತೆಯಿದ್ದರೆ ಮಾಸ್ಕ್ ಧರಿಸಲು ಹೇಳುವುದನ್ನು ಮರೆಯಬೇಡಿ.
ಈಗಿನಿಂದಲೇ ಸಾಮಾಜಿಕ ಅಂತರ ಕಾಪಾಡಲು ಹೇಳಿ, ಪ್ರತಿಸಾರಿಯೂ ಬಿಸಿನೀರಿನಿಂದ ಅಥವಾ ಬೆಚ್ಚಗಿನ ನೀರಿನಲ್ಲಿ ಕೈತೊಳೆದುಕೊಳ್ಳಿರಿ. ಆದಷ್ಟು ಬೆಚ್ಚಗಿರಲು ಹೇಳಿ. ಇದೇ ರೀತಿ 10-12 ವರ್ಷದ ಮಕ್ಕಳಿಗೂ ಜಾಗರೂಕತೆ ತೆಗೆದುಕೊಳ್ಳಬೇಕು.
ಈ ಜೆಎನ್-1 ವೈರಸ್‌ಗೆ ಮುಂಚಿನ ವೈರಸ್‌ಗಳಂತೆ ಸ್ಟಾçಂಗ್ ಆಗಿ ವರ್ತಿಸಲು ಸಾಧ್ಯವೇ ಇಲ್ಲ. ಮೂಗು ಕಟ್ಟಿದವರಿಗೆ, ನೆಗಡಿ, ನಂತರ ಕೆಮ್ಮು, ತದನಂತರ ಜ್ವರ ಕಟ್ಟಿಟ್ಟ ಬುತ್ತಿ. ಅಷ್ಟಕ್ಕೆ ಹಾರಾಟ ಚೀರಾಟ ಬೇಡ.
-ಬಿ.ಆರ್. ನರಸಿಂಹಮೂರ್ತಿ
9448174932*