ಚಂಡೀಗಢದಲ್ಲಿ ನಡೆದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಕೆಂಪೇಗೌಡ ಸ್ಕೇಟಿಂಗ್ ಕ್ಲಬ್ ನ ಸ್ಕೇಟರ್ಸ
ವಿಜಯ ದರ್ಪಣ ನ್ಯೂಸ್
ಪಂಜಾಬ್ ನ ಚಂಡಿಗಡದಲ್ಲಿ ನಡೆದ 61ನೇ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಾಲ್ಕು ಪದಕಗಳನ್ನು ಗೆದ್ದುಕೊಂಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 18 ಸ್ಕೇಟರ್ ಭಾಗವಹಿಸಿದ್ದು , ಇವರಲ್ಲಿ ನಾಲ್ಕು ಸ್ಕೇಟರ್ಸಗಳು ಪದಕಗಳನ್ನು ಪಡೆದಿದ್ದಾರೆ.ಕುಶಲ ರವಿ (ಬೆಳ್ಳಿ ಪದಕ),ಆರ್ಯ ಮಂಜುನಾಥ್ (ಕಂಚು),ಚಿನ್ಮಯ್ ಎಸ್ ಗೌಡ (ಕಂಚು),ಯಶಸ್ವಿನಿ ಎನ್ (ಕಂಚು).ಇವರೆಲ್ಲರೂ ದೇವನಹಳ್ಳಿ ಕೆಂಪೇಗೌಡ ಸ್ಕೇಟಿಂಗ್ ಕ್ಲಬ್ ನಲ್ಲಿ ತರಬೇತಿ ಪಡೆದವರಾಗಿದ್ದಾರೆ.
ದೇವನಹಳ್ಳಿ ಕೆಂಪೇಗೌಡ ಸ್ಕೇಟಿಂಗ್ ಕ್ಲಬ್ ನ ಅಧ್ಯಕ್ಷೆ ಭಾರತಿ ನಾರಾಯಣಸ್ವಾಮಿ , ಕಾರ್ಯದರ್ಶಿ ಕುಶಾತ್ ಗೌಡ ಪದಕ ವಿಜೇತರನ್ನು ಅಭಿನಂದಿಸಿ ಸಂತಸ ಹಂಚಿಕೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡಾಪಟುಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಲು ತರಬೇತಿ ನೀಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಗೌಡರವರು ತಿಳಿಸಿರುತ್ತಾರೆ