ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಚಳವಳಿಯ ರೂಪದಲ್ಲಿ ಜಾರಿಗೆ ತರಬಲ್ಲ ಪಕ್ಷವೇ ಬಿಎಸ್ ಪಿ : ನರಸಿಂಹರಾಜು
ವಿಜಯ ದರ್ಪಣ ನ್ಯೂಸ್
ದೇವನಹಳ್ಳಿ ನವೆಂಬರ್ 18 : ಬಿಎಸ್’ಪಿ ಕೇವಲ ರಾಜಕೀಯ ಪಕ್ಷವಲ್ಲ. ಜನರನ್ನು ಒಗ್ಗೂಡಿಸಲು ಹೋರಾಡುತ್ತಿರುವ ಪಕ್ಷವಾಗಿದೆ. ಹಿಂದೂಳಿದ ಹಾಗೂ ಅಲ್ಪಸಂಖ್ಯಾತ ಜನರನ್ನು ಉತ್ತಮ ವೇದಿಕೆಗೆ ತರುವ ಗುರಿಯನ್ನು ಹೊಂದಿರುವ ಪಕ್ಷವಾಗಿದೆ. ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ವಿಫಲವಾಗಿದೆ ಎಂದು ಬಿಎಸ್ಸಿ ಜಿಲ್ಲಾ ಮುಖಂಡ ನರಸಿಂಹರಾಜು ಅವರು ಟೀಕಿಸಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡವರು ಹಾಗೂ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಬಲೀಕರಣಗೊಳಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲಗೊಂಡಿವೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮುಂದಿಟ್ಟುಕೊಂಡು ರಾಜಕೀಯ ಮಾಡಲು ಮುಂದಾಗಿದೆ ಬಿಜೆಪಿ ಮತ್ತು ಜೆಡಿಎಸ್ ಅಪ ಮೈತ್ರಿಕೊಂಡು ಕೋಮುಗಲಭೆ ಸೃಷ್ಟಿಸಿ ಜನರ ನೆಮ್ಮದಿ ಹಾಳು ಮಾಡಲು ಹೊರಟಿದೆ. ದಿನಬಳಕೆಯ ಅಗತ್ಯ ವಸ್ತುಗಳು ಗಗನಕ್ಕೇರುತ್ತಿದ್ದರು ಬಡವರ ಸಂಕಷ್ಟಕ್ಕೆ ಬಾರದ ಸರ್ಕಾರಗಳಾಗಿವೆ. ಜನರ ಅಭಿವೃದ್ಧಿಯನ್ನು ಹೊಂದಿಟ್ಟುಕೊಂಡು ಅಧಿಕಾರದ ಲಾಲಸೆ ಅನುಭವಿಸುತ್ತಿರುವ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷಗಳನ್ನು ಮುಂಬರುವ ದಿನಗಳಲ್ಲಿ ಜನ ತಿರಸ್ಕರಿಸಿ ಬಹುಜನ ಸಮಾಜ ಪಾರ್ಟಿಗೆ ಹೆಚ್ಚಿನ ಸಹಕಾರ ನೀಡುವ ಭರವಸೆಯನ್ನು ಹೊಂದಿದ್ದೇವೆ ಎಂದರು.
ಮುಂಬರುವ ಪದವೀಧರ ಕ್ಷೇತ್ರದ ಚುನಾವಣೆ ಲೋಕಸಭಾ ಚುನಾವಣೆ ಸ್ಥಳೀಯ ಸಂಸ್ಥೆಗಳಾದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಸಭೆಗಳನ್ನು ಮಾಡಿ ಕಮಿಟಿಗಳನ್ನು ಮಾಡುವ ಉದ್ದೇಶದಿಂದ ನೆಲಮಂಗಲ ದೊಡ್ಡಬಳ್ಳಾಪುರ ಹೊಸಕೋಟೆ ದೇವನಹಳ್ಳಿ ಭಾಗಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಬಂಗಾರಪ್ಪ, ಜಿಲ್ಲಾ ಮುಖಂಡ ಎಸ್ ನರಸಿಂಹಯ್ಯ ,ತಾಲೂಕು ಮುಖಂಡ ಸೂಲಕುಂಟೆ ವೆಂಕಟಸ್ವಾಮಿ, ನಂಜಪ್ಪ ದೊಡ್ಡ ಕುರುಬರಹಳ್ಳಿ ನರಸಿಂಹ, ಆವತಿ ಚಂದ್ರು, ವಿಜಯಪುರ ಗಂಗಾಧರ್, ಕನ್ನಮಂಗಲ ಪೂಜಪ್ಪ ಸೇರಿದಂತೆ ಹಲವಾರು ಪಕ್ಷದ ಮುಖಂಡರು ಹಾಜರಿದ್ದರು.