ಸಂಪಂಗೆರೆ ಗ್ರಾಮದಲ್ಲಿ ಐದು ದಿನಗಳ ಸಂಭ್ರಮದ ದೀಪಾವಳಿ ಆಚರಣೆ
ವಿಜಯ ದರ್ಪಣ ನ್ಯೂಸ್
ಮಾಲೂರು: ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿಗೆ ಸೇರಿದ ಸಂಪಂಗೆರೆ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಹಳ ಹಿಂದಿನ ಕಾಲದಿಂದಲು
ಪರಂಪರಾಗತವಾಗಿ ಶ್ರೀ ಗೌರಮ್ಮ ದೇವಿಯನ್ನು ಕುಳ್ಳಿರಿಸಿ ಭಕ್ತಿ ಮತ್ತು ಶ್ರದ್ಧೆ ನಿಷ್ಠೆಯಿಂದ ಪೂಜಿಸಿ ಐದು ದಿನಗಳ ಕಾಲ ನಿರಂತರವಾಗಿ ಆಚರಿಸಿ, ಬೆಳ್ಳಿ ಪಲ್ಲಕ್ಕಿಯೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಭಕ್ತಾದಿಗಳಿಗೆ ಪೂಜೆ ಪ್ರಸಾದ, ಅನ್ನಸಂತರ್ಪಣೆ, ಏರ್ಪಡಿಸಿ ಜಲವಿಸರ್ಜನೆ ಮಾಡಲಾಯಿತು.ಇಂತಹ ವೈಶಿಷ್ಟ್ಯ ಪೂರ್ಣದಿಂದ ಕೂಡಿದ ಹಬ್ಬವು ಸಂಪಂಗೆರೆ ಗ್ರಾಮದ ಭಕ್ತಾದಿಗಳ ಮತ್ತು ಕುಟುಂಬದ ತುಂಬು ಹೃದಯದ ಆರ್ಥಿಕ ಸಹಕಾರದಿಂದಲು ನೆರವೇರಲು ಸಹಕಾರಿಯಾಗಿದೆ.
ದೀಪಾವಳಿ ಹಬ್ಬ ದೇಶದಾದ್ಯಂತ ಆಚರಿಸುವ ಅತಿದೊಡ್ಡ ದಾರ್ಮಿಕ ಹಬ್ಬವಾಗಿದೆ. ಭಾರತೀಯ ಹಬ್ಬಗಳಲ್ಲಿ ಅತ್ಯಂತ ಸಂಭ್ರಮಾಚರಣೆಗಳಿಂದ ಹೊಂದಿರುವ ಒಂದು ದೊಡ್ಡ ಹಬ್ಬವಾಗಿದೆ.ಇದನ್ನು ಬೆಳಕಿನ ಹಬ್ಬವೆಂದು ಕರೆಯುತ್ತಾರೆ. ಈ ದೀಪಾವಳಿ ಹಬ್ಬವನ್ನು ದಿವಂಗತ ಆರ್ .ಶಿವಣ್ಣ ಮತ್ತು ಧರ್ಮಪತ್ನಿಯಾದ ಗಂಗಮ್ಮನವರು ಕಡುಬಡತನದಿಂದ ಕೂಡಿದ ಕುಟುಂಬ. ಅಂತಹ ಸಂದರ್ಭದಲ್ಲಿಯು ಆರ್ಥಿಕ ಅನಾನುಕೂಲದಲ್ಲಿಯು ಬಿಡದೆ ಶ್ರೀ ಗೌರಮ್ಮದೇವಿಯನ್ನು ಕುಳ್ಳಿರಿಸಿ ಪೂಜ್ಯನೀಯ ಭಾವದೊಂದಿಗೆ ಆಚರಿಸುತ್ತಿದ್ದರು.
ಇವರಿಗೆ ಅವರ ತಂದೆಯವರಾದ ಪಕ್ಕದ ಆಲಂಬಾಡಿ ಗ್ರಾಮದ ಮೂಲನಿವಾಸಿಗಳಾದ ಯಜಮಾನ್ ಶ್ರೀ ರುದ್ರಪ್ಪ ಮತ್ತು ರವರಿಂದ ಆಚರಿಸುತ್ತಿದ್ದರು.
ಅವರ ಮಕ್ಕಳಾದಂತಹ ಲೇಟ್ ಆರ್. ಶಿವಣ್ಣನ ಕುಟುಂಬದವರು ನೆರವೇರಿಸಿಕೊಂಡು ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.