ಫೋರೆನ್ಸಿಕ್ ಸೈನ್ಸ್, ಸಿಸಿಟಿಎನ್ಸ್, ಐಸಿಜೆಸ್ ಮತ್ತು ಕಾನೂನು ಸುಧಾರಣೆಗಳು: ಭಾರತದ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಮೈಲಿಗಲ್ಲುಗಳು
ವಿಜಯ ದರ್ಪಣ ನ್ಯೂಸ್
ಫೋರೆನ್ಸಿಕ್ ಸೈನ್ಸ್, ಸಿಸಿಟಿಎನ್ಸ್, ಐಸಿಜೆಸ್ ಮತ್ತು ಕಾನೂನು ಸುಧಾರಣೆಗಳು: ಭಾರತದ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಮೈಲಿಗಲ್ಲುಗಳು
49 ನೇ ಅಖಿಲ ಭಾರತ ಪೊಲೀಸ್ ವಿಜ್ಞಾನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ, “ವಿಧಿ ವಿಜ್ಞಾನ, ಸಿಸಿಟಿಎನ್ಎಸ್ ಮತ್ತು ಐಸಿಜೆಎಸ್ಗಳ ಪಾತ್ರ ಮತ್ತು ಐಪಿಸಿ, ಸಿಆರ್ಪಿಸಿ ಮತ್ತು ಎವಿಡೆನ್ಸ್ ಆಕ್ಟ್ನಲ್ಲಿನ ಬದಲಾವಣೆಗಳು ಆಧುನಿಕ ಯುಗದಲ್ಲಿ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಗಿವೆ” ಎಂದರು.
49 ನೇ ಅಖಿಲ ಭಾರತ ಪೊಲೀಸ್ ವಿಜ್ಞಾನ ಸಭೆ ಬಹುಮುಖ್ಯವಾಗಿದೆ, ಕಾರಣ ಇದು 5G ಯುಗದಲ್ಲಿ ಪೋಲೀಸಿಂಗ್, ಮಾದಕ ದ್ರವ್ಯಗಳ ಸವಾಲು, ಸಾಮಾಜಿಕ ಮಾಧ್ಯಮದ ಸವಾಲುಗಳು, ಸಮುದಾಯ ಪೋಲೀಸಿಂಗ್, ಆಂತರಿಕ ಭದ್ರತೆಯ ಸಮನ್ವಯ ಮತ್ತು ಗಡಿಗಳಲ್ಲಿ ಭದ್ರತೆಯಂತಹ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೇ ಇದು ಆಧುನಿಕ ಯುಗದ ಮೊದಲ ಪೊಲೀಸ್ ವಿಜ್ಞಾನ ಕಾಂಗ್ರೆಸ್ ಸಭೆಯಾಗಿದೆ.
IPC, CrPC ಮತ್ತು ಎವಿಡೆನ್ಸ್ ಆಕ್ಟ್ಅನ್ನು ಬ್ರಿಟಿಷರು ಸ್ಥಾಪಿಸಿದ್ದರು. 1860 ರಿಂದ 2023 ರವರೆಗೆ ಅವುಗಳಲ್ಲಿ ಯಾವುದೇ ಬದಲಾವಣೆಗಳಾಗಿರಲ್ಲ. ಆದಾಗ್ಯೂ, ಸಮಯ ಬದಲಾದಂತೆ, ಸಮಾಜವು ಬದಲಾಗುತ್ತದೆ ಮತ್ತು ಅಪರಾಧದ ವಿಧಾನಗಳು ಮತ್ತು ಪ್ರಮಾಣಗಳು ಸಹ ಬದಲಾಗುತ್ತವೆ. ಆದ್ದರಿಂದ, ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಕಾನೂನಿನಲ್ಲಿ ತಿದ್ದುಪಡಿಗಳನ್ನು ಮಾಡುವುದು ನಿರ್ಣಾಯಕವಾಗುತ್ತದೆ.
ಭಾರತೀಯ ದಂಡ ಸಂಹಿತೆಯ ಹೊಸ ಹೆಸರು ಇಂಡಿಯನ್ ಜಸ್ಟೀಸ್ ಕೋಡ್ ಆಗಲಿದೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಹೊಸ ಹೆಸರು ಭಾರತೀಯ ನಾಗರಿಕ ಭದ್ರತಾ ಕೋಡ್ ಆಗಲಿದೆ ಮತ್ತು ಭಾರತೀಯ ಸಾಕ್ಷಿ ಕಾಯ್ದೆಯನ್ನು ಭಾರತೀಯ ಸಾಕ್ಷಿ ಮಸೂದೆಯೆಂದು ಬದಲಾಯಿಸಲಾಗುತ್ತಿದೆ. ಈ ಬದಲಾವಣೆಗಳೊಂದಿಗೆ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಪರಿವರ್ತನೆಗಳಾಗಲಿವೆ.ಬ್ರಿಟಿಷರು ಸ್ಥಾಪಿಸಿದ ಕಾನೂನುಗಳು ‘ಶಿಕ್ಷೆ ಅಥವಾ ದಂಡ’ವನ್ನು ನೀಡುವ ಪ್ರಮುಖ ಗುರಿಯನ್ನು ಹೊಂದಿದ್ದರೆ, ಮೋದಿ-ಶಾ ಅವರು ರೂಪಿಸುತ್ತಿರುವ ಹೊಸ ಕಾನೂನುಗಳು ‘ನ್ಯಾಯ’ವನ್ನು ತಲುಪಿಸುವ ಗುರಿಯನ್ನು ಹೊಂದಿವೆ.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಮತ್ತು ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ತಜ್ಞ ಮಾರ್ಗದರ್ಶನಕ್ಕೆ ಧನ್ಯವಾದಗಳನ್ನು ಸಲ್ಲಿಸಲೇಬೇಕು, ಕಾರಣ ಈ ಮೂರು ಕಾನೂನುಗಳನ್ನು ಅಂಗೀಕರಿಸಿದ ನಂತರ ದೇಶದ ನಾಗರಿಕರು ನ್ಯಾಯ ವಿಳಂಬದ ಸಮಸ್ಯೆಗೆ ಪರಿಹಾರ