ಶಿಕ್ಷಕರಿಗೆ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ.
ವಿಜಯ ದರ್ಪಣ ನ್ಯೂಸ್,
ದೊಡ್ಡಬಳ್ಳಾಪುರ,
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 17
ಉದ್ಯಮಶೀಲತಾ ಪರಿಕಲ್ಪನೆಯನ್ನು ಕಾಲೇಜುಗಳಲ್ಲಿ ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯಮಿಗಳಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಶಿಕ್ಷಕರಿಗೆ ಮೊದಲು ತರಬೇತಿ ನೀಡುವ ಮೂಲಕ ಕಾಲೇಜುಗಳಲ್ಲಿ ಉದ್ಯಮಶೀಲತಾ ಕಾರ್ಯಕ್ರಮ ಗಳನ್ನು ಬಲಪಡಿಸುವ ಗುರಿಯನ್ನು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯು.ಎನ್.ಡಿ.ಪಿ)ಹೊಂದಿದೆ ಎಂದು ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುನಿರಾಜು ಅಭಿಪ್ರಾಯ ಪಟ್ಟರು.
ದೊಡ್ಡಬಳ್ಳಾಪುರ ನಗರದ ಸಾಮರ್ಥ್ಯ ಸೌಧದಲ್ಲಿ ವಿಶ್ವ ಸಂಸ್ಥೆಯ ಅಭಿವೃಧ್ಧಿ ಕಾರ್ಯಕ್ರಮ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಎಸ್.ಎ.ಪಿ ಲ್ಯಾಬ್-ಕೋಡ್ ಉನ್ನತಿ ಯೋಜನೆ ಮತ್ತು ಸೆವೆಂತ್ ಸೆನ್ಸ್ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಧ್ಯಾಪಕರಿಗೆ ಆಯೋಜಿಸಿದ್ದ ಉದ್ಯಮಶೀಲತೆ ಕುರಿತು ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯು ನಿರ್ದಿಷ್ಟವಾಗಿ ಎಲ್ಲವನ್ನೂ ಪಠ್ಯಕ್ರಮದ ಭಾಗವಾಗಿಸುವತ್ತ ಗಮನಹರಿಸುತ್ತದೆ. ಆದ್ದರಿಂದ, ಪಠ್ಯಕ್ರಮದ ರಚನೆ ಮತ್ತು ವಹಿವಾಟು ಪ್ರಕ್ರಿಯೆಯಲ್ಲಿ ನಾವು ಹೇಗೆ ಸಕಾರಾತ್ಮಕ ಕೋಣೆಯನ್ನು ಮಾಡದೆ, ಆ ನಾವೀನ್ಯತೆ ಶಿಕ್ಷಕರಿಂದ ಬರಬೇಕಾಗಿದೆ. ಮುಖ್ಯ ಪಠ್ಯಕ್ರಮದಲ್ಲಿ ಉದ್ಯಮಶೀಲತೆಯನ್ನು ಎಂಬೆಡ್ ಮಾಡುವುದು ಹೇಗೆ ಮತ್ತು ಎಲ್ಲಾ ಅಧ್ಯಾಪಕರು ಮುಂದೆ ಬಂದು ತಮ್ಮ ಸ್ವಂತ ಆಲೋಚನೆಗಳನ್ನು ಹಂಚಿಕೊಳ್ಳಬೇಕು ಎಂದರು.
ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯ ಸಮುದಾಯ ಸಂಯೋಜಕ ಪ್ರವೀಣ್ ಕುಮಾರ್ ಮಾತನಾಡಿ ಹೊಸ ಶಿಕ್ಷಣ ನೀತಿಯು ಉದ್ಯಮಗಳ ಮೇಲೆ ಗಣನೀಯ ಗಮನವನ್ನು ನೀಡುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಶಿಕ್ಷಕರಿಗೆ ಈ ತರಬೇತಿಯು ಪ್ರಮುಖ ಬಹುಮುಖ್ಯವಾಗಿದೆ ಆದ್ದರಿಂದ, ಶಿಕ್ಷಕರು ತಮ್ಮ ಪಠ್ಯ ವಿಷಯಗಳಲ್ಲಿ ಉದ್ಯಮಶೀಲತೆಯ ಸಂಪರ್ಕದ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಮತ್ತು ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮೌಲ್ಯವನ್ನು ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ, ಹಾಗಾಗಿ ಈ ನಿಟ್ಟಿನಲ್ಲಿ ಈಗಾಗಲೇ ಕಳೆದ ಮೂರು ವರ್ಷಗಳಿಂದ ಕೋಡ್ ಉನ್ನತಿ ಯೋಜನೆಯು ಜಿಲ್ಲೆಯಲ್ಲಿ ಅನುಷ್ಟಾನಗೊಳ್ಳುತ್ತಿದ್ದು ಯುವಜನರಿಗೆ ಉತ್ತಮ ಉದ್ಯಮಶೀಲರಾಗಲು ಅವಶ್ಯವಿರುವ ಉದ್ಯಮಶೀಲತಾ ತರಬೇತಿ ಕುರಿತು ಜಾಗೃತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಥಮ ಹಂತದಲ್ಲಿ ನೀಡಲಾಗಿದ್ದು ಹಾಗೂ ದ್ವೀತಿಯ ಹಂತದಲ್ಲಿ ಮತ್ತೆ ಈ ಯೋಜನೆಯಡಿ ಇದೇ ಉದ್ಯಮಶೀಲತೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿರುವುದರಿಂದ ಮತ್ತಷ್ಟು ಜಿಲ್ಲೆಯ ವಿಧ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದರು ಹಾಗೂ ಕಾಲೇಜು ಹಂತದಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಲು ವಿವಿಧ ಶಿಕ್ಷಣ ಉಪಕರಣಗಳು ಮತ್ತು ವಿಧಾನಗಳನ್ನು ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಯು.ಎನ್.ಡಿ.ಪಿ ಸಂಯೋಜಕ ಆಮೀರ್ ಹಸನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ, ಸೆವೆಂತ್ ಸೆನ್ಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರವಿ ಕಿರಣ್, ಸಂಜಯ್ ಮತ್ತು ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
$₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹
ಮಾಕಳಿ ದುರ್ಗ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮತ್ತು ಧ್ವಜ ಜಾಥ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರಾದೇಶಿಕ ಅರಣ್ಯ ಇಲಾಖೆ, ವೈಲ್ಡ್ ಕ್ಯಾಟ್ಸ್ ಅಡ್ವೆಂಚರ್ ಅಸೋಸಿಯೇಷನ್, ದೊಡ್ಡಬಳ್ಳಾಪುರ ಯುವಸಂಚಲನ ತಂಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಮತದಾರರ ಸಾಕ್ಷರತೆ ಅರಿವು ಕಾರ್ಯಕ್ರಮದ ಪ್ರಯುಕ್ತ ಮಾಕಳಿ ದುರ್ಗ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮತ್ತು ಧ್ವಜ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ.ಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಯಾದ ನೀರಜ ದೇವಿ ಸೇರಿದಂತೆ ಸ್ವಯಂ ಸೇವಕರು, ಇತರರು ಉಪಸ್ಥಿತರಿದ್ದರು.