ಅಮೃತ ಸರೋವರ ಆವರಣದಲ್ಲಿ ಪಂಚ ಪ್ರಾಣ ಪ್ರತಿಜ್ಞೆ ವಿಶೇಷ” 77ನೇ ಸ್ವಾತಂತ್ರ್ಯ ದಿನಾಚರಣೆ.
ವಿಜಯ ದರ್ಪಣ ನ್ಯೂಸ್
ಪಿರಿಯಾಪಟ್ಟಣ, ಮೈಸೂರು ಜಿಲ್ಲೆ.ಆಗಸ್ಟ್ 15
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಪೂರ್ಣಗೊಂಡಿರುವ ಅಮೃತ ಸರೋವರ ಕೆರೆ, ಗ್ರಾಮ ಪಂಚಾಯಿತಿ ಆವರಣ ಹಾಗೂ ಶಾಲಾ ಆವರಣದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸಲುವಾಗಿ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ನಿರ್ಮಿಸಲಾಗಿರುವ ಶಿಲಾ ಫಲಕದ ಸ್ಥಳಗಳಲ್ಲಿ ವಿಶೇಷವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.
ಪ್ರಮುಖವಾಗಿ ಪೂರ್ಣಗೊಂಡಿರುವ ಬೆಟ್ಟದತುಂಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಡುಕೂರು ಗ್ರಾಮದ ಹೊಸಕೆರೆ, ಅಮೃತ ಸರೋವರದ ಆವರಣದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಟಿ.ಎಸ್. ಪ್ರೀತಿ ಅರಸ್ ಧ್ವಜಾರೋಹಣ ನೆರವೇರಿಸಿದರು .
ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಬ್ರಿಟಿಷ್ ಆಳ್ವಿಕೆಯ ವಿರುದ್ಧ ಶತಮಾನಗಳಿಂದ ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಂತ ಮಹಾತ್ಮರನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕಾಗಿದೆ . ದೇಶದ ಅಭಿವೃದ್ಧಿಗೆ ಜಾತಿ, ಮತ, ಭೇದ ಮರೆತು ಒಗ್ಗಟ್ಟಾಗಿ ದುಡಿಯಬೇಕಾಗಿದೆ ಎಂದರು.
ಧ್ವಜಾರೋಹಣದ ಬಳಿಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹುತಾತ್ಮ ಯೋಧರನ್ನು ಸ್ಮರಿಸುವ ಸಲುವಾಗಿ ನಿರ್ಮಿಸಿರುವ ಶಿಲಾಫಲಕವನ್ನು ಅನಾವರಣಗೊಳಿಸಿ, ವಸುಧಾ ವಂದನ ಕಾರ್ಯಕ್ರಮದಡಿ ವಿವಿಧ ಬಗೆಯ ಸಸಿಗಳನ್ನು ಈಗಾಗಲೇ ಗುರುತಿಸಲಾಗಿದ್ದ ಅಮೃತ ಸರೋವರ ಕೆರೆ ಆವರಣ ಸೇರಿದಂತೆ ವಿವಿಧೆಡೆಯಲ್ಲಿ ನೆಡಲಾಯಿತು.
ಇದೇ ಸಂದರ್ಭ ಮಾಜಿ ಸೈನಿಕ ಜಯಚಂದ್ರ ರಾಜ್ ಅರಸ್ ರವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯಚಂದ್ರ ರಾಜ ಅರಸ್ ದೇಶದ ರಕ್ಷಣೆಗಾಗಿ ತಮ್ಮ ಮಕ್ಕಳು ಅರ್ಹತೆ ಇದ್ದರೆ ಸೈನ್ಯಕ್ಕೆ ಸೇರಿಸುವಂತೆ ಕರೆ ನೀಡಿದರು . ರೈತ ದೇಶಕ್ಕೆ ಆಹಾರ ಉತ್ಪಾದನೆ ಮಾಡಿ ಕೊಟ್ಟರೆ ಗಡಿಯಲ್ಲಿ ಸೈನಿಕ ದೇಶವನ್ನು ರಕ್ಷಣೆ ಮಾಡುತ್ತಾನೆ ಆಗ ಮಾತ್ರ ದೇಶ ಅಭಿವೃದ್ಧಿಯತ್ತ ಹೋಗಲು ಸಾಧ್ಯ ಎಂದರು .
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಲೇಖನಿ ವಿತರಿಸಲಾಯಿತು .
ಕಾರ್ಯಕ್ರಮದಲ್ಲಿ ‘ಮೇರಾ ಮಿಟ್ಟಿ ಮೇರ ದೇಶ’- ನನ್ನ ನೆಲ-ನನ್ನ ದೇಶ ಎಂಬ ಅಭಿಯಾನದಡಿ ಮಣ್ಣನ್ನು ಹಿಡಿದು ಪಂಚ ಪ್ರಾಣ ಪ್ರತಿಜ್ಞೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಣ್ಣ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೇತನ್ , ಮಾಹಿತಿ ಶಿಕ್ಷಣ ಸಂಮೋಹನ ಸಂಯೋಜಕ ರವಿಕುಮಾರ್ , ಸದಸ್ಯರಾದ ರತ್ನಮ್ಮ ,ಬಿಂದು ಯೋಗೇಶ್, ಸತೀಶ್ , ಕಾರ್ಯದರ್ಶಿ ನಟೇಶ್ ,ಕರವಸೂಲಿಗಾರ ಮಹದೇವ್ , ಮುಖಂಡರಾದ ಮಹದೇವ್ ,ಬಾಲರಾಜ್ ಅರಸ್ ,ರಾಮೇಗೌಡ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು, ಸ್ವಸಾಯ ಸಂಘದ ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು.
.. ರಾಮೇಗೌಡ ಪಿರಿಯಾಪಟ್ಟಣ