ಜಿಲ್ಲಾ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರಾಗಿ ವಿನೋದ್ ಕುಮಾರ್ ಗೌಡ.

ವಿಜಯ ದರ್ಪಣ ನ್ಯೂಸ್.                           ದೇವನಹಳ್ಳಿ   ಬೆಂಗಳೂರು ಗ್ರಾಮಾಂತರ  

ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷರಾಗಿದ್ದ ಬಚ್ಚಳ್ಳಿ ವೆಂಕಟೇಶ್‌ರವರ ನಿಧನದಿಂದಾಗಿ ತೆರವಾಗಿದ್ದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಡಾ.ವಿನೋದ್‌ ಕುಮಾರ್‌ಗೌಡರನ್ನು ನೇಮಿಸಲಾಗಿದೆ ಎಂದು ರಾಜ್ಯ ಅಧ್ಯಕ್ಷ ಹರಳಾಪುರ ಮಂಜೇಗೌಡ ತಿಳಿಸಿದರು.

ಅವರು ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಸಂಘ ರಾಜ್ಯದ ರೈತರ ಹಿತ ಕಾಪಾಡುವುದರಲ್ಲಿ ಮೊದಲನೇ ಸ್ಥಾನದಲ್ಲಿದ್ದು,
ಕಷ್ಠದಲ್ಲಿರುವ ರೈತರ ನೆರವಿಗೆ ದಾವಿಸಿ ಹೋರಾಟ ಮಾಡಿ ನ್ಯಾಯ ಒದಗಿಸುತ್ತೇವೆ ಎಂದರು.

 

ದೆಹಲಿಯಲ್ಲಿ ನಡೆದ ರೈತರ ಹೋರಾಟದಲ್ಲಿ ಬಾಗಿಯಾಗಿದ್ದೆವು , ಕೇಂದ್ರ ಸರ್ಕಾರ ಕೆಲವು ರೈತರ
ವಿದೇಯಕಗಳನ್ನು ವಾಪಸ್ ಪಡೆದರೂ, ರಾಜ್ಯ ಬಿಜೆಪಿ ವಾಪಸ್ ಪಡೆಯಲು ಹಿಂದೇಟುಹಾಕಿತ್ತು, ಈಗಿನ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದ್ದು ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದರು. ನೂತನವಾಗಿ ಅಧ್ಯಕ್ಷ ವಿನೋದ್‌ ಕುಮಾರ್‌ಗೌಡರವರು ಜಿಲ್ಲೆಯ ಎಲ್ಲಾ ತಾಲೂಕಿನ ಸಂಘಗಳನ್ನು ಸಂಪರ್ಕಕ್ಕೆ ತೆಗೆದುಕೊಂಡು ಸಂಘಟನೆ ಮಾಡಿ ಎಂದು ತಿಳಿಸಿದರು.

ಈ ಸಮಯದಲ್ಲಿ ನೂತನ ಜಿಲ್ಲಾಧ್ಯಕ್ಷ ವಿನೋದ್‌ಕುಮಾರ್‌ಗೌಡ ಮಾತನಾಡಿ ನಾನು
ಮೊದಲಿನಿಂದಲೂ ರೈತರ ಕಷ್ಠಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಂಡು ಬಂದಂತಹವನು, ಯಾವುದೇ
ಒತ್ತಡಕ್ಕೂ ಮಣಿಯದೇ ಹೋರಾಟಕ್ಕೆ ಮುಂದಾಗುತ್ತೇನೆ ನನಗೆ ನೀಡಿರುವ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗೌರವ ತರುವ ಕೆಲಸ ಮಾಡುತ್ತೇನೆ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ
ಕೆಲಸ ನಿರ್ವಹಿಸುತ್ತೇನೆ ಎಂದರು.


ಈ ಸಮಯದಲ್ಲಿ ರಾಜ್ಯ ಉಪಾಧ್ಯಕ್ಷ ಮಂಜು, ರಾಜ್ಯ ಗೌರವ ಅಧ್ಯಕ್ಷ ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ಎ.ಎಂ. ನಾರಾಯಣಸ್ವಾಮಿ(ನಾಣಿ), ಕ.ಸಾ.ಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ,
ಕೋಶಾಧ್ಯಕ್ಷ ಮುನಿರಾಜು (ಅಪ್ಪಯ್ಯ), ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ಎನ್.ಮುನಿರಾಜು(ಎಸ್.ಆರ್) ತಾಲೂಕು ಅಧ್ಯಕ್ಷ ಜಯಶಂಕರ್, ಕ.ರ.ವೇ ಗೌರವ ಅಧ್ಯಕ್ಷ ಎನ್.ಚಂದ್ರಶೇಖರ್, ಆರ್.ಕೆ. ನಂಜೇಗೌಡ, ರಬ್ಬನಹಳ್ಳಿ ಕೆಂಪಣ್ಣ, ಅಶ್ವತ್ಥಪ್ಪ, ಶರಣಯ್ಯ ಹಿರೇಮಠ, ಕೃಷ್ಣಪ್ಪ, ಗಯಾಜ್‌ಪಾಷ, ನಾಸಿರ್, ಪೋಲನಹಳ್ಳಿ
ಚೈತ್ರನಾಗರಾಜ್, ನೂರುಲ್ಲಾ , ನಾರಾಯಣಸ್ವಾಮಿ, ಹಾರೋಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.