ಕಲ್ಯಾಣಿಗೆ ನೀರು ತುಂಬಿಸಲು ಸ್ವಂತ ಹಣದಿಂದ ಕೊಳವೆಬಾವಿ ಕೊರೆಸಿ ನೀರು ಒದಗಿಸಿದ ಗ್ರಾಮ ಪಂಚಾಯಿತಿ ಸದಸ್ಯರು
ವಿಜಯ ದರ್ಪಣ ನ್ಯೂಸ್…. ಕಲ್ಯಾಣಿಗೆ ನೀರು ತುಂಬಿಸಲು ಸ್ವಂತ ಹಣದಿಂದ ಕೊಳವೆಬಾವಿ ಕೊರೆಸಿ ನೀರು ಒದಗಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಶಿಡ್ಲಘಟ್ಟ : ಶಾಸಕ ಬಿ.ಎನ್.ರವಿಕುಮಾರ್ ನೂರಾರು ವರ್ಷಗಳ ಕಾಲ ಇತಿಹಾಸ ಇರುವಂತಹ ಚಿಕ್ಕದಾಸರಹಳ್ಳಿಯ ಬೂನಿಳ ಸಮೇತ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಕಲ್ಯಾಣಿಯಲ್ಲಿ ಸುಮಾರು 20 ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದ್ದು , ಇದನ್ನು ಮನಗಂಡ ಚಿಕ್ಕದಾಸರಹಳ್ಳಿಯ ಗ್ರಾಮ ಪಂಚಾಯಿತಿಯ ಸದಸ್ಯರು ಸ್ವಂತ ಹಣದಿಂದ ಬೋರವೆಲ್ ಕೊರೆಸಿ ಕಲ್ಯಾಣಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಬ್ಯಾಟರಾಯ ಸ್ವಾಮಿಯ ಆಶೀರ್ವಾದದಿಂದ…
ರೈತರ ಅಹವಾಲುಗಳ ತ್ವರಿತ ವಿಲೇವಾರಿಗೆ ಕ್ರಮ: ಡಿ.ಸಿ ಎ.ಬಿ ಬಸವರಾಜು
ವಿಜಯ ದರ್ಪಣ ನ್ಯೂಸ್….. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರ ಕುಂದುಕೊರತೆಗಳ ಸಭೆ ರೈತರ ಅಹವಾಲುಗಳ ತ್ವರಿತ ವಿಲೇವಾರಿಗೆ ಕ್ರಮ: ಡಿ.ಸಿ ಎ.ಬಿ ಬಸವರಾಜು ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 7, : ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಜಿಲ್ಲೆಯ ರೈತರ ಕುಂದುಕೊರತೆಗಳ ಸಭೆ ಆಯೋಜಿಸಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಅವರ ಅಹವಾಲು ಸ್ವೀಕರಿಸಲಾಯಿತು. ರೈತರು ಜಮೀನುಗಳ ಫವತಿ ಖಾತೆ, ಪೋಡಿ ದುರಸ್ತಿ, ಪಹಣಿಯಲ್ಲಿ ಹೆಸರು ಬದಲಾವಣೆ…
ಹೆಲ್ಮೆಟ್ ಕಾನೂನಿನ ಭಯಕ್ಕಲ್ಲ, ಜೀವ ರಕ್ಷಣೆಗೆ : ಹಿರಿಯ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಷಾ
ವಿಜಯ ದರ್ಪಣ ನ್ಯೂಸ್…. ಹೆಲ್ಮೆಟ್ ಕಾನೂನಿನ ಭಯಕ್ಕಲ್ಲ, ಜೀವ ರಕ್ಷಣೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಷಾ ಶಿಡ್ಲಘಟ್ಟ : ಹೆಲ್ಮೆಟ್ ಧರಿಸುವುದು ಕೇವಲ ಕಾನೂನಿನ ಕಾರಣಕ್ಕಲ್ಲ ,ನಿಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಲು ಅಪಘಾತದಲ್ಲಿ ಕೈಕಾಲಿಗೆ ಚಿಕಿತ್ಸೆ ಸಾಧ್ಯವಾದರೂ ತಲೆಗೆ ಗಾಯವಾದರೆ ಜೀವ ಉಳಿಯುವುದು ಕಷ್ಟ ಎಂದು ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಷಾ ಅವರು ಆತಂಕ ವ್ಯಕ್ತಪಡಿಸಿದರು. ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ –ಜನವರಿ 2026ರ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾ…
ಸಾಮಾಜಿಕ ಜಾಲತಾಣಗಳ ಬರಹ ಕಿರು ಓದಿನ ಓದುಗರಿಗಿದು ಸಕಾಲ
ವಿಜಯ ದರ್ಪಣ ನ್ಯೂಸ್…. ಸಾಮಾಜಿಕ ಜಾಲತಾಣಗಳ ಬರಹ ಕಿರು ಓದಿನ ಓದುಗರಿಗಿದು ಸಕಾಲ ವಾಟ್ಸಪ್ನಲ್ಲಿ ಅವೆಷ್ಟೋ ಅಪರೂಪದ ಸಂಗತಿಗಳು ಬರುತ್ತವೆ. ಟೆಕ್ಟ್ ಮೆಸೇಜ್, ವೀಡಿಯೋ, ಫೋಟೋಗಳು, ಇನ್ನೇನೋ ಲಿಂಕ್ಸ್… ಓದುವುದಕ್ಕೆ ನೋಡುವುದಕ್ಕೆ ಅದೆಷ್ಟು ಸಂಗತಿಗಳು, ಅಬ್ಬಾ, ಪರಿಚಯದ ಹಿರಿಯರೊಬ್ಬರು ಹೇಳುತ್ತಿದ್ದರು. ಎಷ್ಟನ್ನೆಲ್ಲ ನೋಡುವುದು, ಏನೆಲ್ಲಾ ಓದುವುದು? ಹಾಗೆ ಓದಿದರೂ ಪುಸ್ತಕವೊಂದನ್ನು ಕುಳಿತು ಓದಿದ ಅನುಭವ ವಾಗುವುದಿಲ್ಲ, ಇದು ಅವರ ಮುಂದಿದ್ದ ಸಮಸ್ಯೆ. ಹೌದು, ಜಗತ್ತು ಕಿರಿದಾಗಿದೆ. ಹೀಗಾಗಿ ನಮ್ಮ ಅಂಗೈ ಗೇನೇ ಓದಿನ ಸರಕೂ ಸೇರಿದಂತೆ ಬಹಳಷ್ಟು…
ಸೂಲಿಬೆಲೆಯಲ್ಲಿ ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಆಪಾದಿತರ ಮೇಲೆ ಕಾನೂನು ಕ್ರಮ
ವಿಜಯ ದರ್ಪಣ ನ್ಯೂಸ್… ಸೂಲಿಬೆಲೆಯಲ್ಲಿ ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಆಪಾದಿತರ ಮೇಲೆ ಕಾನೂನು ಕ್ರಮ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 06, : ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಮಗುವೊಂದನ್ನು ವಾಮಾಚಾರಕ್ಕೆ ಬಲಿ ಕೊಡಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ತಮಾನ ವರದಿಯನ್ನು ಆಧರಿಸಿ ತಡರಾತ್ರಿ ಪ್ರಕರಣದಲ್ಲಿ ಭಾಗಿಯಾದ ಎ1 ಮತ್ತು ಎ4 ಆಪಾದಿತರಾದ ಸೈಯದ್ ಇಮ್ರಾನ್ ಮತ್ತು ಮಂಜುಳ ಇವರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ…
ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್ ನಿಯಮದಿಂದ ಟ್ಯಾಕ್ಸಿ ಚಾಲಕರಿಗೆ ಸಮಸ್ಯೆ; ಯಥಾಸ್ಥಿತಿ ಕಾಯ್ದುಕೊಳ್ಳಲು ಸಂಸದ ಡಾ.ಕೆ.ಸುಧಾಕರ್ ಸೂಚನೆ
. ವಿಜಯ ದರ್ಪಣ ನ್ಯೂಸ್… ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್ ನಿಯಮದಿಂದ ಟ್ಯಾಕ್ಸಿ ಚಾಲಕರಿಗೆ ಸಮಸ್ಯೆ; ಯಥಾಸ್ಥಿತಿ ಕಾಯ್ದುಕೊಳ್ಳಲು ಸಂಸದ ಡಾ.ಕೆ.ಸುಧಾಕರ್ ಸೂಚನೆ ಖಾಸಗಿ ಟ್ಯಾಕ್ಸಿಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಸೂಚನೆ, ಖಾಸಗಿ ಚಾಲಕರಿಗೆ ಭರವಸೆ ಮೂಡಿಸಿದ ಸಂಧಾನ ಸಭೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜನವರಿ 6, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಮೊದಲಿನಂತೆಯೇ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಬೇಕು, ಅದಕ್ಕೆ ಪೂರಕವಾಗಿ ನಿಯಮ ರೂಪಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್ ಅವರು ವಿಮಾನ ನಿಲ್ದಾಣ…
ನಾವು ಜಾತಿ ಬಿಟ್ಟರೂ ಸಮಾಜ ಜಾತಿ ಬಿಡಲು ಒಪ್ಪುತ್ತಿಲ್ಲ: ಎಸ್.ರಾಮಲಿಂಗೇಶ್ವರ್
ವಿಜಯ ದರ್ಪಣ ನ್ಯೂಸ್… ನಾವು ಜಾತಿ ಬಿಟ್ಟರೂ ಸಮಾಜ ಜಾತಿ ಬಿಡಲು ಒಪ್ಪುತ್ತಿಲ್ಲ: ಎಸ್.ರಾಮಲಿಂಗೇಶ್ವರ್ ಬೆಂಗಳೂರು: ವಿದ್ಯಾವಂತರಾದಂತೆಲ್ಲಾ ಜಾತಿ ಪೆಡಂಭೂತ ನಮ್ಮ ಸುತ್ತಲೇ ಗಿರಿಕಿ ಹೊಡೆಯುತ್ತಿದ್ದು ಸಂಕೋಲೆ ದಿನೇ ದಿನೇ ಹೆಚ್ಚಾಗುತ್ತಿದೆ ಇದು ಕುವೆಂಪು ಹಾಗೂ ದಾರ್ಶನಿಕರ ತತ್ವ ಸಿದ್ಧಾಂತಗಳಿಗೆ ಮಾರಕ ಎಂದು ಸಂಸ್ಕೃತಿ ಚಿಂತಕ, ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ಎಸ್.ರಾಮಲಿಂಗೇಶ್ವರ್ ಸಿಸಿರಾ ವಿಷಾದ ವ್ಯಕ್ತಪಡಿಸಿದರು. ಬೆಂಗಳೂರಿನ ರಂಗೋತ್ರಿ ಸಂಸ್ಥೆಯು ಕನ್ನಡ ಇಲಾಖೆಯ ಆಯೋಜಿಸಿದ್ದ ಯುಗದ ಕವಿ ಕುವೆಂಪು ಕವಿ ಕಾವ್ಯಗೀತ ನೃತ್ಯ ಉದ್ಘಾಟಿಸಿ…
ದೇಶದ ಮೊದಲ ದೇಶೀಯ ತಯಾರಿಕೆಯ ರನ್ ವೇ ಕ್ಲೀನಿಂಗ್ ವೆಹಿಕಲ್
ವಿಜಯ ದರ್ಪಣ ನ್ಯೂಸ್….. ದೇಶದ ಮೊದಲ ದೇಶೀಯ ತಯಾರಿಕೆಯ ರನ್ ವೇ ಕ್ಲೀನಿಂಗ್ ವೆಹಿಕಲ್ ನೋಯ್ದಾದ ಎನ್.ಐ.ಎ.ಎಲ್ ಗೆ ರನ್ ವೇ ಸ್ವಚ್ಛತಾ ವಾಹನ ಹಸ್ತಾಂತರಿಸಿದ ಸಚಿವ ಎಂ.ಬಿ.ಪಾಟೀಲ ಬೆಂಗಳೂರು: ಎಂಜಿನಿಯರಿಂಗ್ ನಾವೀನ್ಯತೆ ಮತ್ತು ಅಧಿಕ ಮೌಲ್ಯದ ಮೂಲಸೌಕರ್ಯ ಉಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಬೆಂಗಳೂರು ಮೂಲದ ಆನ್ ಲಾನ್ ಟೆಕ್ನಾಲಜಿ ಸಲ್ಯೂಷನ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ವಿಮಾನ ನಿಲ್ದಾಣ ರನ್ ವೇ ಸ್ವಚ್ಛತಾ ವಾಹನವನ್ನು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಸೋಮವಾರ ನೋಯ್ಡಾ ಇಂಟರ್…
ದಯವಿಟ್ಟು ನಮ್ಮ ಮಾನ ಮರ್ಯಾದೆ ಕಾಪಾಡಿ…..
ವಿಜಯ ದರ್ಪಣ ನ್ಯೂಸ್…. ದಯವಿಟ್ಟು ನಮ್ಮ ಮಾನ ಮರ್ಯಾದೆ ಕಾಪಾಡಿ….. ರಾಜ್ಯದ, ಸಮಾಜದ, ಪ್ರಜಾಪ್ರಭುತ್ವದ, ಮಾನವೀಯ ಮೌಲ್ಯಗಳ, ನೈತಿಕ ತತ್ತ್ವಗಳ, ನಾಗರಿಕ ಪ್ರಜ್ಞೆಯ ಘನತೆಯನ್ನು ರಕ್ಷಿಸಲು ಕಳಕಳಿಯ ಮನವಿ. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ತುರ್ತಾಗಿ ಆಗಬೇಕಾದ ಕೆಲಸ ಇದು. ದಯವಿಟ್ಟು ಸಾಧ್ಯವಿರುವ ಎಲ್ಲರೂ ಇದಕ್ಕಾಗಿ ದೊಡ್ಡ ಮಟ್ಟದ ಧ್ವನಿ ಎತ್ತುವ ಮೂಲಕ ನಮ್ಮ ಮಾನ, ಮರ್ಯಾದೆ ಕಾಪಾಡಿ……. ಬಳ್ಳಾರಿ ನಗರ ಶಾಸಕರಾದ ಶ್ರೀ ನಾರಾ ಭರತ್ ರೆಡ್ಡಿ ಮತ್ತು ಗಂಗಾವತಿ ಕ್ಷೇತ್ರದ ಶಾಸಕರಾದ ಶ್ರೀ ಜನಾರ್ದನ…
ಬಿಜೆಪಿ ಕಾರ್ಯಕರ್ತರ ಸ್ನೇಹ ಸಮ್ಮಿಲನ ಮತ್ತು ಶಕ್ತಿಕೇಂದ್ರ, ಬಿ.ಎಲ್.ಎ-2 ಸಮಾವೇಶ
ವಿಜಯ ದರ್ಪಣ ನ್ಯೂಸ್…. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಕಾರ್ಯಕರ್ತರ ಸ್ನೇಹ ಸಮ್ಮಿಲನ ಮತ್ತು ಶಕ್ತಿಕೇಂದ್ರ, ಬಿ.ಎಲ್.ಎ-2 ಸಮಾವೇಶ ಯಶವಂತಪುರ: ಬೆಂಗಳೂರು ಪೋಟೋ ಸ್ಟೂರೀಸ್ ಆಂಡ್ ಕನ್ವನ್ವೇನ್ ಸಭಾಂಗಣದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರ ಮತ್ತು ಬಿ.ಎಲ್.ಎ-2 ಗಳ ಸಮಾವೇಶ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ. ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಶಾಸಕ ಸಿ.ಕೆ.ರಾಮಮೂರ್ತಿರವರು, ವಿಧಾನಪರಿಷತ್ ಸದಸ್ಯರುಗಳಾದ ಗೋಪಿನಾಥ್ ರೆಡ್ಡಿ, ಎನ್.ರವಿಕುಮಾರ್, ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು,…
